ಮರಕ್ಕೆ ಕಾರು ಡಿಕ್ಕಿ; ಸಮಾಜ ಸೇವಕ ಫಾಜಿಲ್ ಸಾವು

| Published : Mar 04 2025, 12:32 AM IST

ಸಾರಾಂಶ

ಬೇಲೂರು: ತಾಲೂಕಿನ ಹೆಸರಾಂತ 24*7 ಸಮಾಜ ಸೇವಾ ತಂಡದ ಸಕ್ರಿಯ ಕಾರ್ಯಕರ್ತ, ಸುಝಕಿ ಶೋರೂಂ ಮಾಲೀಕ ಫಾಜಿಲ್ ಪಾಷಾ ಅವರು ಹಾಸನದಿಂದ ಬೇಲೂರಿಗೆ ತಮ್ಮ ಕಾರಿನಲ್ಲಿ ಕುಟುಂಬ ಸಮೇತ ಪ್ರಯಾಣಿಸುತ್ತಿದ್ದಾಗ ಸಂಕೇನಹಳ್ಳಿ ಸಮೀಪ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೇಲೂರು: ತಾಲೂಕಿನ ಹೆಸರಾಂತ 24*7 ಸಮಾಜ ಸೇವಾ ತಂಡದ ಸಕ್ರಿಯ ಕಾರ್ಯಕರ್ತ, ಸುಝಕಿ ಶೋರೂಂ ಮಾಲೀಕ ಫಾಜಿಲ್ ಪಾಷಾ ಅವರು ಹಾಸನದಿಂದ ಬೇಲೂರಿಗೆ ತಮ್ಮ ಕಾರಿನಲ್ಲಿ ಕುಟುಂಬ ಸಮೇತ ಪ್ರಯಾಣಿಸುತ್ತಿದ್ದಾಗ ಸಂಕೇನಹಳ್ಳಿ ಸಮೀಪ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಪತ್ನಿಯ ಕಾಲು ಮೂಳೆ ಮುರಿದಿದ್ದು, ತಾಯಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲವರ ಸಂತಾಪ: ಶಾಸಕ ಎಚ್ ಕೆ ಸುರೇಶ್ ಮಾತನಾಡಿ, ಹಾಸನ ಜಿಲ್ಲೆಯ ಹೆಸರಾಂತ 24*7 ಸಮಾಜ ಸೇವಾ ತಂಡದ ಸಕ್ರಿಯ ಕಾರ್ಯಕರ್ತ ಫಾಸಿಲ್ ರವರ ನಿಧನದ ಸುದ್ದಿ ತಿಳಿದು ಆಘಾತವಾಗಿದೆ. ಅವರ ಸಮಾಜ ಸೇವೆ ಎಲ್ಲರಿಗೂ ತಿಳಿದಿರುವಂತಹದ್ದು, ಕೊರೋನ ವೇಳೆ ಫಾಜಿಲ್ ಅವರು ಯಾವುದೇ ಫಲಾಪೇಕ್ಷೆಯಿಲ್ಲದೇ ಮೃತಪಟ್ಟ ಶವಗಳಿಗೆ ಗೌರವಯುತ ಸಂಸ್ಕಾರ ನಿರ್ವಹಿಸಿದ್ದಾರೆ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದರು. ಮಾಜಿ ಸಚಿವ ಶಿವರಾಂ, ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್, ಮಾಜಿ ಶಾಸಕ ಕೆ.ಎಸ್. ಲಿಂಗೇಶ್, ತಹಸೀಲ್ದಾ‌ರ್ ಮಮತಾ, ಬೇಲೂರು, ಹಳೇಬೀಡು ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ತೋಫಿಕ್, ಎಂ. ಆರ್. ವೆಂಕಟೇಶ್, ಪುರಸಭಾ ಅಧ್ಯಕ್ಷ ಎ. ಆರ್. ಅಶೋಕ, ಮಾಜಿ ಅಧ್ಯಕ್ಷ ಶಾಂತ ಕುಮಾರ್, ಜಮಾಲುದ್ದೀನ್, ದಸಂಸ ಮುಖಂಡ ಅಬ್ದುಲ್ ಸಮದ್. ಸಂಪತ್, ನೂರ್ ಅಹಮದ್ ಹಾಗೂ 24x7 ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.