ಮದ್ಯವ್ಯಸನದಿಂದ ಸಮಾಜ, ಬದುಕು ಸದಾ ದೂರ

| Published : Aug 28 2024, 12:51 AM IST

ಸಾರಾಂಶ

ಮಧ್ಯ ಸೇವನೆ ಬದುಕಿನ ಎಲ್ಲ ಬಗೆಯ ಶಾಂತಿ ಸಮಾಧಾನವನ್ನು ಹೊಡೆದೊಡಿಸುತ್ತದೆ.

ಕೊಟ್ಟೂರು: ಮದ್ಯ ವ್ಯಸನಕ್ಕಂಟಿದ ವ್ಯಕ್ತಿಯಿಂದ ಸಮಾಜ ಏನನ್ನು ನಿರೀಕ್ಷಸಲಾಗದು. ಮದ್ಯವ್ಯಸನದಿಂದ ಉತ್ತಮ ಬದುಕು ಮತ್ತು ಸಮಾಜ ಸದಾ ದೂರವಿರುತ್ತದೆ. ಈ ಸತ್ಯವನ್ನು ಅರಿತು ಮದ್ಯಪಾನದಿಂದ ವ್ಯಸನಿಗಳು ಮುಕ್ತರಾಗಬೇಕು ಎಂದು ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ ಹೇಳಿದರು.

ಪಟ್ಟಣದ ಮರಳುಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ 1841ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಟ್ರಸ್ಟ್ ಸದಾ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದು ಮಾರಕವಾದ ಮಧ್ಯ ಸೇವನೆ ಯಿಂದ ಕುಟುಂಬಗಳು ನಾಶವಾಗುತ್ತಿರುವ ಬಗ್ಗೆ ಜನರಲ್ಲಿ ಸದಾ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಿರಂತರ ನಡೆಸುತ್ತ ಬಂದಿದ್ದೆ ಇದರ ಪ್ರಯೋಜನವನ್ನು ಪಡೆದುಕೊಂಡು ಮಧ್ಯಮುಕ್ತ ಸಮಾಜ ನಿರ್ಮಾಣದಂತ ಸದಾ ಮುಂದಾಗಬೇಕು ಎಂದರು.

ಕೊಟ್ಟೂರು ಸಿಪಿಐ ವೆಂಕಟಸ್ವಾಮಿ ಮಾತನಾಡಿ, ಮಧ್ಯ ಸೇವನೆ ಬದುಕಿನ ಎಲ್ಲ ಬಗೆಯ ಶಾಂತಿ ಸಮಾಧಾನವನ್ನು ಹೊಡೆದೊಡಿಸುತ್ತದೆ. ಮರ್ಯಾದೆಯಿಂದ ಬದುಕಲು ಮದ್ಯ ಸೇವನೆ ಅವಕಾಶ ಮಾಡಿಕೊಡುವುದಿಲ್ಲ. ಇದರಿಂದ ಆರೋಗ್ಯಕ್ಕೆ ಅಪಾಯವನ್ನು ಸದಾ ಮಗ್ಗುಲಲ್ಲಿ ಇರಿಸಿಕೊಡಿರಬೇಕಾಗುತ್ತದೆ ಎಂದರು.

ಎಂ.ಶಿವಣ್ಣ , ರಾಂಪುರ ಕೆ. ವಿವೇಕಾನಂದ, ಕೂಡ್ಲಿಗಿ ಪಪಂ ಅಧ್ಯಕ್ಷ, ಕಾವಲಿ ಶಿವಪ್ಪನಾಯ್ಕ, ನಟರಾಜ ಬಾದಾಮಿ, ಯೋಜನಾಧಿಕಾರಿ ನಾಗೇಶ್, ಶಿಬಿರ ಅಧಿಕಾರಿ ಶ್ರೀಕುಮಾರ, ಪ್ರಸಿಲ್ಲಾ ಡಿಸೋಜ, ಜಡಿತಲೆ ಕೊಟ್ರೇಶ್, ಜ್ಯೋತಿ ಮತ್ತಿತರರು ಮುಖ್ಯ ಅತಿಥಿಗಳಾಗಿದ್ದರು.

ಶಿಬಿರದಲ್ಲಿ ಪಾಲ್ಗೊಂಡಿದ್ದ 84 ಜನ ಮದ್ಯ ವ್ಯಸನದಿಂದ ಮುಕ್ತರಾದರು .