ಮಹಿಳೆಯರ ಮೇಲೆ ಸಮಾಜದ ತಾರತಮ್ಯ ನಿಲ್ಲಬೇಕು: ಮಹಿಳಾ ಚಿಂತಕಿ ಇಂದ್ರಮ್ಮ

| Published : Mar 18 2024, 01:48 AM IST

ಮಹಿಳೆಯರ ಮೇಲೆ ಸಮಾಜದ ತಾರತಮ್ಯ ನಿಲ್ಲಬೇಕು: ಮಹಿಳಾ ಚಿಂತಕಿ ಇಂದ್ರಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳಾ ದಿನಾಚರಣೆಯೆಂದರೆ ಸೌಂದರ್ಯ ಸಾಮಾಗ್ರಿಗಳ, ಚಿನ್ನ, ಬೆಳ್ಳಿ, ಸೀರೆಗಳ ಖರೀದಿಗಾಗಿ ನಡೆಯುವ ದಿನವಲ್ಲ, ಬದಲಿಗೆ ಸಮಾಜದಲ್ಲಿ ಮಹಿಳೆಯರ ಸಮಪಾಲಿಗಾಗಿ ಧೀರೊತ್ತರ ಹೋರಾಟ ನಡೆಸಿದ ದಿನದ ನೆನಪಿಗಾಗಿ ಮತ್ತು ತಾರತಮ್ಯಗಳನ್ನು ಕಿತ್ತೊಗೆಯಲು ನಡೆಸುವ ಹೋರಾಟದ ದಿನವಾಗಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳೆಯರು ಮನೆ ಮತ್ತು ಕೆಲಸದ ಸ್ಥಳಗಳಲ್ಲಿ ದುಡಿಯುವುದನ್ನು ಸಮಾಜ ಪರಿಗಣಿಸುವಲ್ಲಿ ತಾರತಮ್ಯ ಮಾಡುತ್ತಿದೆ. ಇದು ಸರಿಯಲ್ಲ, ದುಡಿಮೆಯನ್ನು ಪರಿಗಣಿಸಿ ಸಮಾನ ಹಕ್ಕುಗಳನ್ನು ನೀಡುವ ಮೂಲಕ ಸಮಾನತೆ ತರಬೇಕಾಗಿದೆಎಂದು ಮಹಿಳಾ ಚಿಂತಕಿ, ನಿವೃತ್ತ ಪ್ರಾಂಶುಪಾಲರು ಎನ್. ಇಂದಿರಮ್ಮ ಅಭಿಪ್ರಾಯಪಟ್ಟರು.

ದುಡಿಯುವ ಮಹಿಳೆಯರ ಸಮನ್ವಯ ಸಮಿತಿ, ಸಿಐಟಿಯ ಮತ್ತು ಜನವಾದಿ ಮಹಿಳಾ ಸಂಘಟನೆ, ಜೆ.ಎಂ.ಎಸ್.ಜಂಟಿಯಾಗಿ ಜನ ಚಳುವಳಿ ಕೇಂದ್ರ ಅಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳೆಯರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮತ್ತೊಬ್ಬ ಅತಿಥಿ, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಗೌರಿ ಮಾತನಾಡಿ, ಮಹಿಳಾ ದಿನಾಚರಣೆಯೆಂದರೆ ಸೌಂದರ್ಯ ಸಾಮಾಗ್ರಿಗಳ, ಚಿನ್ನ, ಬೆಳ್ಳಿ, ಸೀರೆಗಳ ಖರೀದಿಗಾಗಿ ನಡೆಯುವ ದಿನವಲ್ಲ, ಬದಲಿಗೆ ಸಮಾಜದಲ್ಲಿ ಮಹಿಳೆಯರ ಸಮಪಾಲಿಗಾಗಿ ಧೀರೊತ್ತರ ಹೋರಾಟ ನಡೆಸಿದ ದಿನದ ನೆನಪಿಗಾಗಿ ಮತ್ತು ತಾರತಮ್ಯಗಳನ್ನು ಕಿತ್ತೊಗೆಯಲು ನಡೆಸುವ ಹೋರಾಟದ ದಿನವಾಗಿದೆ ಎಂದರು.

ಅಂಗನವಾಡಿ ನೌಕರ ಸಂಘದ ತಾಲೂಕು ಅಧ್ಯಕ್ಷೆ ಗೌರಮ್ಮ ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌಜನ್ಯ, ದಬ್ಬಾಳಿಕೆಗಳಿಗೆ ಇಂದೂ ಸಹ ಕಡಿವಾಣ ಬಿದ್ದಿಲ್ಲ. ಇದು ಸರಿಯಾದ ಕ್ರಮವಲ್ಲ ಎಂದರು.

ಮತ್ತೊಬ್ಬ ಮುಖ್ಯ ಅತಿಥಿ, ಮನೆ ಕೆಲಸಗಾರರ ಸಂಘದ ಅಧ್ಯಕ್ಷೆ ಅನಸೂಯ, ಮಹಿಳಾ ಸಂಘಟನೆಯ ಮಲ್ಲಿಗೆ. ದೀಪಿಕಾ ಮರಳೂರು, ಸಿಐಟಿಯು ಸೈಯದ್ ಮುಜಿಬ್ ಮತ್ತಿತರರು ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಜನವಾದಿ ಮಹಿಳಾ ಸಂಘಟನೆಯ ಕಲ್ಪನಾ. ಟಿ. ಅರ್‌. ವಹಿಸಿದ್ದರು. ಸಿಐಟಿಯು ನಾಯಕಿ ಶ್ರೀಮತಿ ಜಬೀನಾಖಾತೊನ್‌ ಪ್ರಸ್ತಾವಿಕ ನುಡಿಗಳನ್ನಾಡಿದರು. ಕವಿತಾ ವಂದಿಸಿದರು.

ಕಾರ್ಯಕ್ರಮದಲ್ಲಿ ವಿನೋದಾ, ಬಷೀರಾ, ರೀಹಾನಾ, ಸಿಐಟಿಯು ಡಿಸಾ ಲೋಕೇಶ್. ರಂಗಧಾಮಯ್ಯ, ಷಣ್ಮುಖಪ್ಪ ಹಾಜರಿದ್ದರು.