ಸಾರಾಂಶ
ನರಸಿಂಹರಾಜಪುರ, ಎಲ್ ಐಸಿ ಪ್ರತಿನಿಧಿಗಳ ಸಂಘ ಬಲಿಷ್ಠವಾಗಬೇಕಾದರೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಎಲ್ ಐಸಿ ಉಡುಪಿ ವಿಭಾಗದ ಜೀವವಿಮಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ವಿಶ್ವನಾಥ ಗಟ್ಟಿ ಸಲಹೆ ನೀಡಿದರು.
ಮಾಮ್ಕೋಸ್ ಕಟ್ಟಡದಲ್ಲಿ ವಿಮಾ ಪ್ರತಿನಿಧಿಗಳ ಸರ್ವ ಸದಸ್ಯರ ಸಭೆ । ನೂತನ ಪದಾಧಿಕಾರಿಗಳ ಆಯ್ಕೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಎಲ್ ಐಸಿ ಪ್ರತಿನಿಧಿಗಳ ಸಂಘ ಬಲಿಷ್ಠವಾಗಬೇಕಾದರೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಎಲ್ ಐಸಿ ಉಡುಪಿ ವಿಭಾಗದ ಜೀವವಿಮಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ವಿಶ್ವನಾಥ ಗಟ್ಟಿ ಸಲಹೆ ನೀಡಿದರು.
ಗುರುವಾರ ಕೊಪ್ಪದ ಮಾಮ್ಕೋಸ್ ಸಭಾಂಗಣದಲ್ಲಿ ಕೊಪ್ಪ ಜೀವವಿಮಾ ಶಾಖಾ ವ್ಯಾಪ್ತಿಯ ನರಸಿಂಹರಾಜಪುರ, ಕೊಪ್ಪ, ಶೃಂಗೇರಿ ತಾಲೂಕುಗಳ ಎಲ್ ಐಸಿ ಪ್ರತಿನಿಧಿಗಳ ಸಂಘದ ಸರ್ವಸದಸ್ಯರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಯಾವುದೇ ಸಂಘಟನೆ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಸಾಧನೆ ಮಾಡಲು ಸಾಧ್ಯ. ಪ್ರತಿಯೊಂದು ವೃತ್ತಿ ಮಾಡುವವರು ಸಂಘ ಮಾಡಿಕೊಂಡಿರುತ್ತಾರೆ. ಅದರಂತೆ ಜೀವವಿಮಾ ಪ್ರತಿನಿಧಿಗಳಿಗೂ ಸಂಘವಿದೆ. ಎಲ್ ಐಸಿ ಪ್ರಾರಂಭವಾದ ನಂತರದಿಂದಲೇ ಸಂಘ ಪ್ರಾರಂಭವಾಗಿದೆ. ರಾಷ್ಟ್ರ ಮಟ್ಟದಲ್ಲಿ ಲೈಪ್ ಇನ್ಸೂರೆನ್ಸ್ ಫೆಡರೇಷನ್ ಆಫ್ ಇಂಡಿಯಾ ಕೆಲಸ ಮಾಡುತ್ತಿದೆ. ಎಲ್ ಐಸಿ ಪ್ರತಿನಿಧಿಗಳಿಗೂ ಸಹ ಗುಂಪು ವಿಮಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿವೆ. ಇದಕ್ಕೆ ಸಂಬಂಧಪಟ್ಟಂತೆ ನಮ್ಮ ಸಂಘಟನೆ ಪ್ರಮುಖವಾಗಿ ಬೆಂಬಲ ನೀಡುತ್ತಾ ಬಂದಿದೆ. ಏಜೆಂಟರಿಗೆ ಸಮಸ್ಯೆ ಬಂದರೆ ಸಂಘ ಬೆಂಬಲ ನೀಡುತ್ತದೆ ಎಂದರು.ಮಂಗಳೂರಿನಲ್ಲಿ ಎಲ್ ಐಸಿ ಪ್ರತಿನಿಧಿಗಳ ಸಂಘ ಯಶಸ್ಸು ಕಂಡಿದೆ. ಜೀವ ಮಿಮಾ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆ ಮಾಡಿದ್ದೇವೆ. ಇದು ಒಗ್ಗಟ್ಟಿಂದ ಸಾಧ್ಯವಾಗಿದೆ. ಮಲೆನಾಡು ಭಾಗದಲ್ಲಿ ಉತ್ತಮ ಸಂಪನ್ಮೂಲ ಇದೆ. ಪ್ರತಿನಿಧಿಗಳಿಗೆ ಅನೇಕ ಸವಲತ್ತುಗಳಿವೆ. ಇದನ್ನು ನಾವು ಪಡೆದುಕೊಳ್ಳಬೇಕು. ಎಲ್ಲಾ ತರಬೇತಿಯಲ್ಲೂ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಕೊಪ್ಪ ಜೀವವಿಮಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಸಿ.ಸಿದ್ದಪ್ಪಗೌಡ ವಹಿಸಿದ್ದರು.ಅತಿಥಿಗಳಾಗಿ ಉಡುಪಿ ವಿಭಾಗದ ಪ್ರತಿನಿಧಿ ಸಂಘದ ಕಾರ್ಯದರ್ಶಿ ಸುಬ್ರಮಣ್ಯಭಟ್, ಕೊಪ್ಪ ಸಂಘದ ಉಪಾಧ್ಯಕ್ಷ ಕೆ.ಅನಂತಮೂರ್ತಿ, ಸಂಘದ ಕಾರ್ಯದರ್ಶಿ ಮಮತ ಇದ್ದರು.ಅನಿಲ್ ಮಾತನಾಡಿದರು. ಮಮತ ವಾರ್ಷಿಕ ವರದಿ ಓದಿದರು.ರಮೇಶ್ ಶೆಟ್ಟಿ ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ಹಿಂದಿನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಮುಂದಿನ ಸಾಲಿನ ಕಾರ್ಯಕಾರಿ ಸಮಿತಿ ರಚಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳು: ಅಧ್ಯಕ್ಷ -ಟಿ.ಸುರೇಶ್, ಉಪಾಧ್ಯಕ್ಷ ಎಂ.ಜೆ.ಬೆನ್ನಿ, ಪ್ರಧಾನ ಕಾರ್ಯದರ್ಶಿ ರಮೇಶ್ ಕೆ ಶೆಟ್ಟಿ, ಖಜಾಂಚಿ ಎಂ.ಎಸ್.ಸುರೇಶ್, ಸಂಘಟನಾ ಕಾರ್ಯದರ್ಶಿ- ಜಾನ್ ಡಿಸೋಜ, ಸತ್ಯನಾರಾಯಣ, ಇ.ಜೆ. ಅನಿಲ್, ಶಿವಾನಂದ ರಾವ್. ಸಾಮಾಜಕ ಜಾಲತಾಣದ ಪ್ರಮುಖರು - ಎಂ.ಬಿ.ಬಿನೋಯ್, ಮನೋಜ್, ಮಹಾಬಲ, ಎಸ್.ಎ.ಸುರೇಶ್