ಮೂರು ತಿಂಗಳ ಹಿಂದೆ ಸಾವನ್ನಪ್ಪಿದ್ದ ತಮ್ಮ ತಾಯಿಯ ಕೊಲೆಯಾಗಿದ್ದು, ಪ್ರಕರಣವನ್ನು ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲವೆಂದು ಅಸಮಾಧಾನಗೊಂಡ ಮೃತಳ ಇಬ್ಬರು ಪುತ್ರರು ಸಮಾಧಿಯಲ್ಲಿದ್ದ ಮೃತಳ ಅವಶೇಷಗಳನ್ನು ಬೈಕ್‌ನಲ್ಲಿ ತರುತ್ತಿದ್ದ ವೇಳೆ ನಗರದ ಹೊರವಲಯದಲ್ಲಿ ಬೈಕ್ ಅಪಘಾತಕ್ಕೀಡಾದ ವಿಲಕ್ಷಣ ಘಟನೆ ವರದಿಯಾಗಿದೆ.
- ಮರು ಮರಣೋತ್ತರ ಪರೀಕ್ಷೆಗೆ ಪಾರ್ಥೀವ ಶರೀರದ ಅಸ್ಥಿ ಬೈಕ್‌ನಲ್ಲಿ ತರುವಾಗ ರಸ್ತೆ ಅಪಘಾತ- - -- ಹರಿಹರ ತಾಲೂಕಿನ ಆದಾಪುರದಲ್ಲಿ ಈರಮ್ಮ ಏ.29ರಂದು ಅನುಮಾನಾಸ್ಪದ ಸಾವು ಪ್ರಕರಣ- ಸ್ಥಳಕ್ಕೆ ಧಾವಿಸಿದ ಪೊಲೀಸರು ಅಸ್ಥಿ ವಶಕ್ಕೆ ಪಡೆದು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನೆ- ತಮ್ಮ ತಾಯಿಯದ್ದು ಸಹಜ ಸಾವಲ್ಲ, ಕೊಲೆಯೆಂದು 11 ಮಂದಿ ವಿರುದ್ಧ ಮಕ್ಕಳ ದೂರು- - -ಕನ್ನಡಪ್ರಭ ವಾರ್ತೆ ದಾವಣಗೆರೆಮೂರು ತಿಂಗಳ ಹಿಂದೆ ಸಾವನ್ನಪ್ಪಿದ್ದ ತಮ್ಮ ತಾಯಿಯ ಕೊಲೆಯಾಗಿದ್ದು, ಪ್ರಕರಣವನ್ನು ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲವೆಂದು ಅಸಮಾಧಾನಗೊಂಡ ಮೃತಳ ಇಬ್ಬರು ಪುತ್ರರು ಸಮಾಧಿಯಲ್ಲಿದ್ದ ಮೃತಳ ಅವಶೇಷಗಳನ್ನು ಬೈಕ್‌ನಲ್ಲಿ ತರುತ್ತಿದ್ದ ವೇಳೆ ನಗರದ ಹೊರವಲಯದಲ್ಲಿ ಬೈಕ್ ಅಪಘಾತಕ್ಕೀಡಾದ ವಿಲಕ್ಷಣ ಘಟನೆ ವರದಿಯಾಗಿದೆ.ಹರಿಹರ ತಾಲೂಕು ಆದಾಪುರ ಗ್ರಾಮದಲ್ಲಿ ಏ.29ರಂದು ಈರಮ್ಮ (58) ಎಂಬ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ತಾಯಿಯದ್ದು ಸಹಜ ಸಾವಲ್ಲ ಎಂದು ನೆರೆಹೊರೆಯವರ ಮೇಲೆ ಅನುಮಾನ ವ್ಯಕ್ತಪಡಿಸಿ ಮೃತಳ ಮಕ್ಕಳಾದ ಮಂಜುನಾಥ, ವೆಂಕಟೇಶ ಅವರು 11 ಜನರ ವಿರುದ್ಧ ಮಲೇಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿ, ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರು ಮೃತ ಈರಮ್ಮನ ಅಂತ್ಯಕ್ರಿಯೆ ನೆರವೇರಿಸಿದ್ದರು.ಪೊಲೀಸ್ ತನಿಖೆಯಿಂದ ತೃಪ್ತರಾಗದ ಈರಮ್ಮನ ಮಕ್ಕಳಾದ ಮಂಜುನಾಥ, ವೆಂಕಟೇಶ ಶನಿವಾರ ರಾತ್ರಿ ತಮ್ಮ ಊರಿನ ಸ್ಮಶಾನದಲ್ಲಿದ್ದ ಹೂತಿದ್ದ ತಮ್ಮ ತಾಯಿಯ ಪಾರ್ಥೀವ ಶರೀರದ ಅವಶೇಷಗಳನ್ನು ಹೊರತೆಗೆದು, ರಾತ್ರೋರಾತ್ರಿ ಬೆಡ್ ಶೀಟ್‌ನಲ್ಲಿ ಸಂಪೂರ್ಣವಾಗಿ ಸುತ್ತಿಕೊಂಡು ಬೈಕ್‌ನಲ್ಲಿ ಮರು ಮರಣೋತ್ತರ ಪರೀಕ್ಷೆಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ತರುತ್ತಿದ್ದರು. ಈ ವೇಳೆ ನಗರದ ಹೊರವಲಯದಲ್ಲಿ ಶನಿವಾರ ಮಧ್ಯರಾತ್ರಿ ಅವರು ತೆರಳುತ್ತಿದ್ದ ಬೈಕ್ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ.ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ಮಾಡಿ, ಪಾರ್ಥೀವ ಶರೀರದ ಅವಶೇಶಗಳನ್ನು ಜಿಲ್ಲಾಸ್ಪತ್ರೆಗೆ ತಂದಿದ್ದರು. ಬೈಕ್ ಅಪಘಾತದಲ್ಲಿ ಚಿಕ್ಕಪುಟ್ಟದಾಗಿ ಗಾಯಗೊಂಡ ಇಬ್ಬರೂ ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಈರಮ್ಮನ ಪಾರ್ಥೀವ ಶರೀರವನ್ನು ವಶಕ್ಕೆ ಪಡೆದ ಪೊಲೀಸರು ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಇರಿಸಿದ್ದಾರೆ. ತಮ್ಮ ತಾಯಿ ಈರಮ್ಮನವರನ್ನು ಕೊಲೆ ಮಾಡಿದ್ದು, ಪ್ರಕರಣ ಮುಚ್ಚಿ ಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ತಮ್ಮ ತಾಯಿಯ ಪಾರ್ಥೀವ ಶರೀರರದ ಮರುಮರಣೋತ್ತರ ಪರೀಕ್ಷೆ ನಡೆಸಿ, ಸೂಕ್ತ ತನಿಖೆ ಕೈಗೊಳ್ಳುವ ಮೂಲಕ ನ್ಯಾಯ ಕೊಡಿಸಬೇಕು ಎಂದು ಇಬ್ಬರೂ ಮಕ್ಕಳು ಪಟ್ಟುಹಿಡಿದಿದ್ದಾರೆ.ತಮ್ಮ ತಾಯಿ ಸಾವಿಗೆ ನ್ಯಾಯ ಸಿಗಬೇಕು. ಆಕೆ ಸಹಜವಾಗಿ ಸಾವನ್ನಪ್ಪಿಲ್ಲ. ಕೊಲೆ ಮಾಡಿದ್ದಾರೆಂಬುದಾಗಿ 11 ಜನರ ವಿರುದ್ಧ ದೂರು ನೀಡಿದ್ದೇವೆ. ಮಲೇಬೆನ್ನೂರು ಪೊಲೀಸರು ತಮ್ಮ ತಾಯಿ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಠಾಣೆಯಿಂದ ಠಾಣೆಗೆ, ಅಧಿಕಾರಿಗಳಿಂದ ಅಧಿಕಾರಿಗಳನ್ನು ಭೇಟಿಯಾದರೂ ನಮಗೆ ನ್ಯಾಯ ಸಿಕ್ಕಿಲ್ಲ. ನಮಗೆ ನ್ಯಾಯ ಸಿಗುವವರೆಗೂ ಜಿಲ್ಲಾಸ್ಪತ್ರೆ ಶವಾಗಾರದಿಂದ ತಮ್ಮ ತಾಯಿಯ ಪಾರ್ಥೀವ ಶರೀರವನ್ನು ತಾವು ಒಯ್ಯುವುದಿಲ್ಲ ಎಂದು ಇಬ್ಬರೂ ಮಕ್ಕಳು ಪಟ್ಟು ಹಿಡಿದಿರುವುದು ಈಗ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಅಷ್ಟೇ ಅಲ್ಲ ಪೊಲೀಸ್ ಅಧಿಕಾರಿಗಳಿಗೂ ತಲೆನೋವಾಗಿದೆ. ಈರಮ್ಮನ ಇಬ್ಬರೂ ಮಕ್ಕಳು ಅಂಗಲಾಚುತ್ತಿರುವುದು ಸಹ ಮನಕಲುಕುವಂತಿದೆ.ಆದರೆ, ಮೃತ ಈರಮ್ಮನ ಮಕ್ಕಳಾದ ಮಂಜುನಾಥ, ವೆಂಕಟೇಶ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಕುಟುಂಬದವರಿಗೆ ಅನ್ಯಾಯ ಮಾಡಿದರೆ ನಮಗೆ ಬರುವುದು ಏನೂ ಇಲ್ಲ ಎಂಬುದು ಸ್ವತಃ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಒಟ್ಟಾರೆ ಓರ್ವ ಮಹಿಳೆಯ ಸಾವು ಸಹಜವೋ ಅಥವಾ ಕೊಲೆಯೋ ಎಂಬ ವಿಚಾರಕ್ಕೆ ಮೃತರ ಇಬ್ಬರೂ ಮಕ್ಕಳು ಸಮಾಧಿಯಾಗಿದ್ದ ಶವವನ್ನು ಕಾನೂನಾತ್ಮಕವಾಗಿ, ನಿಯಮಾನುಸಾರ ಹೊರತೆಗೆಯದೇ, ರಾತ್ರೋರಾತ್ರಿ ಸಮಾಧಿಯಿಂದ ಹೊರ ತೆಗೆದಿರುವುದು ಸದ್ಯಕ್ಕೆ ಜನರನ್ನು ಬೆಚ್ಚಿಬೀಳಿಸಿದೆ.ಶವದ ಮರು ಮರಣೋತ್ತರ ಪರೀಕ್ಷೆ ನಡೆಸುತ್ತಾರಾ, ಈರಮ್ಮನದು ಸಹಜ ಸಾವೋ ಅಥವಾ ಕೊಲೆಯೋ ಎಂಬುದು ಬಯಲಾಗುವುದೋ ಎಂಬುದೇ ಸದ್ಯಕ್ಕೆ ಎಲ್ಲರಲ್ಲಿರುವ ಪ್ರಶ್ನೆಗಳಾಗಿವೆ.- - -(ಕೋಟ್)ಹರಿಹರ ತಾಲೂಕಿನ ತಮ್ಮ ಊರಾದ ಆದಾಪುರ ಗ್ರಾಮದಲ್ಲಿ ದುಡ್ಡು ಕೊಟ್ಟು, ಸಾಕ್ಷಿಗಳನ್ನು ಮುಚ್ಚಿ ಹಾಕಿಸಲು ಯತ್ನಿಸುತ್ತಿದ್ದಾರೆ. ಮಲೇಬೆನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಗ್ಗೆ ನಮಗೆ ಅನುಮಾನವಿದೆ. ಹಾಗಾಗಿ, ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಮರು ಮರಣೋತ್ತರ ಪರೀಕ್ಷೆ ಮಾಡಿಸಿ, ನಮ್ಮ ತಾಯಿ ಸಾವಿಗೆ ನ್ಯಾಯ ಕೊಡಿಸಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. ನಾವು ಪೊಲೀಸ್ ಅಧಿಕಾರಿಗಳು, ಸಿಆರ್‌ಇ ಸೆಲ್ ಸೇರಿದಂತೆ ಎಲ್ಲಾ ಕಡೆ ಸುತ್ತಾಡಿದರೂ ನ್ಯಾಯ ಸಿಕ್ಕಿಲ್ಲ.- ಮಂಜುನಾಥ, ವೆಂಕಟೇಶ, ಮೃತ ಈರಮ್ಮನ ಪುತ್ರರು.- - --19ಕೆಡಿವಿಜಿ6: ಈರಮ್ಮ.-19ಕೆಡಿವಿಜಿ8: ಮೃತ ಈರಮ್ಮನ ಮಕ್ಕಳಾದ ಮಂಜುನಾಥ, ವೆಂಕಟೇಶ.
