ಸೋನ್ಯಾಲಗಿರಿ ಪವಿತ್ರ ಧಾರ್ಮಿಕ ಪುಣ್ಯಕ್ಷೇತ್ರ: ಸಂಸದ ಉಮೇಶ ಜಾಧವ್‌

| Published : Mar 10 2024, 01:35 AM IST

ಸೋನ್ಯಾಲಗಿರಿ ಪವಿತ್ರ ಧಾರ್ಮಿಕ ಪುಣ್ಯಕ್ಷೇತ್ರ: ಸಂಸದ ಉಮೇಶ ಜಾಧವ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿಯೇ ೫೦೧ ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿ ಧಾರ್ಮಿಕ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸೋನ್ಯಾಲಗಿರಿ ಪುಣ್ಯಕ್ಷೇತ್ರವು ಅನೇಕ ಶಿವನ ಭಕ್ತರ ಪುಣ್ಯಕ್ಷೇತ್ರವಾಗಿದೆ ಎಂದು ಸಂಸದ ಡಾ. ಉಮೇಶ ಜಾಧವ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನ ಬೆಡಸೂರ ಸೋನ್ಯಾಲಗಿರಿಯಲ್ಲಿ ಜಗದ್ಗುರು ಮಹಾತಪಸ್ವಿ ಪರ್ವತಲಿಂಗ ಪರಮೇಶ್ವರ ಮಹಾರಾಜರು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿಯೇ ೫೦೧ ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿ ಧಾರ್ಮಿಕ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸೋನ್ಯಾಲಗಿರಿ ಪುಣ್ಯಕ್ಷೇತ್ರವು ಅನೇಕ ಶಿವನ ಭಕ್ತರ ಪುಣ್ಯಕ್ಷೇತ್ರವಾಗಿದೆ ಎಂದು ಸಂಸದ ಡಾ. ಉಮೇಶ ಜಾಧವ್ ಹೇಳಿದರು.

ಸೋನ್ಯಾಲಗಿರಿ ಸುಕ್ಷೇತ್ರದ ಪರ್ವತಲಿಂಗ ಪರಮೇಶ್ವರ ಸಾನ್ನಿಧ್ಯದಲ್ಲಿ ನಡೆದ ೩೧ನೇ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಧರ್ಮಸಭೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಂಜಾರ ಸಮುದಾಯ ಜನರ ಆಶೀರ್ವಾದದಿಂದ ಮತ್ತು ವಿವಿಧ ಸಮಾಜದ ಮಠಾಧೀಶರ ಆಶೀರ್ವಾದಿಂದ ನಾನು ಚಿಂಚೋಳಿ ಶಾಸಕನಾಗಿ ಮತ್ತು ಕಲಬುರಗಿ ಸಂಸದನಾಗಿ ಆಯ್ಕೆಯಾಗಿ ಅನೇಕ ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ನಮ್ಮ ಬಂಜಾರ ಸಾಂಸ್ಕೃತಿಕ ಮತ್ತು ಸಂಸ್ಕಾರ, ಕಲೆಯನ್ನು ಮುಂದಿನ ಪೀಳಿಗೆಗೆ ಕಲಿಸಬೇಕಾಗಿದೆ. ಬಂಜಾರರು ರಾಮ ನಾಮವನ್ನು ಜಪಿಸುತ್ತೇವೆ. ನಮ್ಮ ಸಮಾಜದ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿ ಪ್ರಸ್ತಾಪಿಸಿದ್ದೇನೆ. ಮಹಾರಾಷ್ಟ್ರದಲ್ಲಿರುವ ಬಂಜಾರ ಸಮಾಜದ ಧಾರ್ಮಿಕ ಪವಿತ್ರದ ಕ್ಷೇತ್ರ ಅಭಿವೃದ್ದಿಗೋಸ್ಕರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ೫೯೨ ಕೋಟಿ ರು. ಅನುದಾನ ನೀಡಿದ್ದಾರೆ. ಡಾ. ರಾಮರಾವ ಮಹಾರಾಜರು ನಮ್ಮ ಸಮಾಜವನ್ನು ಮುಖ್ಯವಾಹಿನಿ ತರುವ ಪ್ರಯತ್ನ ಸಾಕಷ್ಟು ಮಾಡಿದ್ದರಿಂದ ಅವರ ಕನಸು ನನಸಾಗಿಸಲು ಪ್ರಯತ್ನಮಾಡುತ್ತಿದ್ದೇನೆ ಎಂದರು.

ದೇಶದ ಸ್ವಾತಂತ್ರ್ಯದ ನಂತರ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಅಭಿವೃದ್ಧಿ ಆಗಬೇಕಾಗಿತ್ತು. ಜನರ ನಿರೀಕ್ಷೆಯಂತೆ ವಂದೇ ಭಾರತ ರೈಲು ಕಲಬುರಗಿಯಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲಾಗಿದೆ. ಕಲಬುರಗಿ ನಗರದಲ್ಲಿ ಟೆಕ್ಸ್‌ಟೈಲ್‌ ಮಂಜೂರಿಯಾಗಿದ್ದು, ಇದರಿಂದಾಗಿ ಒಂದು ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ ಅಲ್ಲದೇ ಪರೋಕ್ಷವಾಗಿ ೨ ಲಕ್ಷ ಜನ ಯುವಕರಿಗೆ ಉದ್ಯೋಗ ಸಹಕಾರಿ ಆಗಲಿದೆ. ನನಗೆ ೧೦೧೩ರಿಂದ ರಾಜಕೀಯ ಜೀವನ ನೀಡಿದ್ದೀರಿ. ನನಗೆ ಕಲಬುರಗಿ ಲೋಕಸಭೆ ಚುನಾವಣೆಯಲ್ಲಿ ಆಶೀರ್ವದಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮುಂದೆ ಕುಳಿತುಕೊಳ್ಳುವ ಅವಕಾಶವನ್ನು ಕೊಡಬೇಕು ಎಂದು ಸಂಸದ ಡಾ. ಉಮೇಶ ಜಾಧವ್ ಮನವಿ ಮಾಡಿದರು.

ಶಾಸಕ ಡಾ. ಅವಿನಾಶ ಜಾಧವ್ ಧಾರ್ಮಿಕಸಭೆ ಉದ್ಘಾಟಿಸಿ ಮಾತನಾಡಿ, ಸೋನ್ಯಾಲಗಿರಿ ಪುಣ್ಯಕ್ಷೇತ್ರಕ್ಕೆ ಅನೇಕರು ಇಲ್ಲಿಗೆ ಆಗಮಿಸುತ್ತಿದ್ದಾರೆ. ನಾನು ರಾಜಕೀಯ ಕ್ಷೇತ್ರದಲ್ಲಿ ಅಪರೂಪದ ರಾಜಕಾರಣಿಯಾಗಿದ್ದೇನೆ. ರಾಜಕೀಯ ವ್ಯಕ್ತಿಗಳು ಅನೇಕ ವರ್ಷಗಳಿಂದ ಪಕ್ಷದ ಕೆಲಸ ಮಾಡಿದರು. ಅವರಿಗೆ ಟಿಕೆಟ್‌ ಸಿಗುವುದಿಲ್ಲ ನನಗೆ ಪೂಜ್ಯರ ಆಶೀರ್ವಾದಿಂದ ಟಿಕೆಟ್‌ ಸಿಕ್ಕಿತ್ತು ಎರಡು ಸಲ ಶಾಸಕನಾಗಿ ನಿಮ್ಮ ಸೇವೆ ಮಾಡುತ್ತಿದ್ದೇನೆ ಎಂದರು.

ಸಮಾರಂಭದಲ್ಲಿ ವಿಠಲ ಜಾಧವ್, ಅರವಿಂದ ಜಾಧವ್ ಮಾತನಾಡಿದರು. ಪಂಚಾಕ್ಷರಿ ಪರ್ವತಲಿಂಗ ಪರಮೇಶ್ವರ ಮಹಾರಾಜರು ಚಿಕ್ಕಗುರುನಂಜೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ವಿವಿಧ ಮಠಾಧೀಶರಾದ ಬಳಿರಾಮ ಮಹಾರಾಜ, ಪ್ರೇಮಸಿಂಗ ಮಹಾರಾಜ, ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಬಂಜಾರ ಸಮಾಜದ ಗಣ್ಯರಾದ ಉಮೇಶ ಜಾಧವ್, ರಾಜೂ ಪವಾರ, ಗೋಪಾಲ ಜಾಧವ್, ಮೋಹನ ರಾಠೋಡ, ಲೋಹಿತ ಚವ್ಹಾಣ, ಗೋರಕನಾಥ ರಾಠೋಡ, ದಶರಥ ಜಾಧವ್, ರಾಮು ರಾಠೋಡ, ಅಲ್ಲಮಪ್ರಭು ಹುಲಿ, ಗೋಪಾಲರಾವ ಕಟ್ಟಿಮನಿ, ಗೌತಮ ಪಾಟೀಲ, ಪ್ರೇಮಸಿಂಗ ಜಾಧವ್, ಶಾಮರಾವ ರಾಠೋಡ, ಅಂಬರ ಜಾಧವ್, ರವಿ ಚವ್ಹಾಣ, ಶಂಕರ ಜಾಧವ್ ಇನ್ನಿತರಿದ್ದರು.