ಸಾರಾಂಶ
ಶಿರಾ ತಾಲೂಕನ್ನು ಬರಗಾಲ ಮುಕ್ತ ತಾಲೂಕನ್ನಾಗಿ ಮಾಡುವ ನನ್ನ ಉದ್ದೇಶ ನನಸಾಗಿದೆ. ಇನ್ನೊಂದು ವರ್ಷದಲ್ಲಿ ಎತ್ತಿನಹೊಳೆ, ಭದ್ರಾ ಮೇಲ್ದಂಡೆ ನೀರು ತಂದು ತಾಲೂಕನ್ನು ಸಮೃದ್ಧ ಮಾಡುತ್ತೇನೆ ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾಶಿರಾ ತಾಲೂಕನ್ನು ಬರಗಾಲ ಮುಕ್ತ ತಾಲೂಕನ್ನಾಗಿ ಮಾಡುವ ನನ್ನ ಉದ್ದೇಶ ನನಸಾಗಿದೆ. ಇನ್ನೊಂದು ವರ್ಷದಲ್ಲಿ ಎತ್ತಿನಹೊಳೆ, ಭದ್ರಾ ಮೇಲ್ದಂಡೆ ನೀರು ತಂದು ತಾಲೂಕನ್ನು ಸಮೃದ್ಧ ಮಾಡುತ್ತೇನೆ ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಭೂಪಸಂದ್ರ ಕೆರೆಗೆ ಬುಧವಾರ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಮಾತನಾಡಿದರು. ತಾಲೂಕಿಗೆ ಹೇಮಾವತಿ, ಎತ್ತಿನಹೊಳೆ, ಭದ್ರಾ ನೀರು ಹರಿದ ಮೇಲೆ ತಾಲೂಕು ಶಾಶ್ವತವಾಗಿ ಬರಗಾಲ ಮುಕ್ತ ತಾಲೂಕಾಗಿ ಮಾಡಿ ನಿಮ್ಮೆಲ್ಲರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಈ ಬಾರಿ ಮಳೆ ವೈಪರೀತ್ಯದಿಂದ ಶಿರಾ ತಾಲೂಕಿನಲ್ಲಿ ಸರಿಯಾಗಿ ಮಳೆ ಬರಲಿಲ್ಲ. ಆದರೂ ಹೇಮಾವತಿ ನೀರಿನಿಂದ ತಾಲೂಕಿನ 20 ಕೆರೆಗಳು ಹಾಗೂ ಕಳ್ಳಂಬೆಳ್ಳದಿಂದ ಮದಲೂರು, ಹೇರೂರುವರೆಗೂ ಬ್ಯಾರೇಜ್‌ಗಳು ತುಂಬಿವೆ. ಇದರಿಂದ ಅಂತರ್ಜಲ ಹೆಚ್ಚಾಗಿದೆ ಎಂದರು.
ಟಿ.ಬಿ. ಜಯಚಂದ್ರಗೆ ಗ್ರಾಮಸ್ಥರು ಬೆಳ್ಳಿ ಕಿರೀಟ ತೊಡಿಸಿ ಗೌರವಿಸಿದರು. ನಿರ್ಮಲ ಟಿ.ಬಿ.ಜಯಚಂದ್ರ, ನಗರಸಭಾ ಅಧ್ಯಕ್ಷ ಬುರಾನ್ ಅಹಮದ್, ಗ್ರಾಮ ಪಂಚಾಯಿತಿಯ ಅಧ್ಯಕ್ಷ ಬಿ.ಎಲ್.ಜಗದೀಶ್ ಗೌಡ, ಉಪಾಧ್ಯಕ್ಷ ಗೋವಿಂದರಾಜು, ಸದಸ್ಯ ಚೆನ್ನಬಸವ, ಮಾಜಿ ಅಧ್ಯಕ್ಷರಾದ ಮಮತಾ ರಮೇಶ್, ಜಿಪಂ ಮಾಜಿ ಸದಸ್ಯ ಪರ್ವತಪ್ಪ, ಶಿವಣ್ಣ ಕಳ್ಳಿಪಾಳ್ಯ, ಮಯಾಸಂದ್ರ ಅರುಣ್ ಕುಮಾರ್, ಡಾ. ಮನು ಪಟೇಲ್, ಗುಳಿಗೇನಹಳ್ಳಿ ನಾಗರಾಜು, ಬಾಲೆನಹಳ್ಳಿ ಪ್ರಕಾಶ್, ನವೀನ್ ವೈಟಿ ಯಲದಬಾಗಿ ಹಾಜರಿದ್ದರು.