ಈಶ್ವರಾನಂದಸ್ವಾಮೀಜಿಗಾದ ಅವಮಾನಕ್ಕೆ ವಿಷಾದ

| Published : Feb 11 2024, 01:46 AM IST

ಸಾರಾಂಶ

ಈಶ್ವರಾನಂದ ಸ್ವಾಮೀಜಿಗೆ ಆದಂತಹ ಅವಮಾನಕ್ಕೆ ಪಾವಗದ ತಾಲೂಕಿನ ಸರ್ವಧರ್ಮ ಶಾಂತಿ ಕನಕ ಗುರು ಪೀಠದ ರಾಮಮೂರ್ತಿ ಸ್ವಾಮೀಜಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪಾವಗಡ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಶಾಖಾ ಮಠ ಕನಕ ಪೀಠದ ಅಧ್ಯಕ್ಷ ಈಶ್ವರಾನಂದಸ್ವಾಮೀಜಿ ಅವರು, ಇತ್ತೀಚೆಗೆ ದೇಗುಲವೊಂದಕ್ಕೆ ತೆರಳಿ ವಾಪಸ್ಸಾದ ಬಳಿಕ ಶೂದ್ರರೆಂಬ ಕಾರಣಕ್ಕೆ ದೇವಸ್ಥಾನ ಶುದ್ಧೀಕರಣಗೊಳಿಸಿದ್ದು ಸೂಕ್ತವಲ್ಲ. ಜಾತಿಪದ್ದತಿ ಜೀವಂತವಾಗಿದೆ ಎಂಬುವುದಕ್ಕೆ ಇದು ಸ್ಪಷ್ಟ ಸಾಕ್ಷಿಯಾಗಿದೆ. ಇಂತಹ ದೋರಣೆಯನ್ನು ಖಂಡಿಸುವುದಾಗಿ ಪಾವಗಡದ ಸರ್ವಧರ್ಮ ಶಾಂತಿ ಕನಕ ಗುರು ಪೀಠದ ರಾಮಮೂರ್ತಿ ಸ್ವಾಮೀಜಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕ ಸೇರಿ ಭಾರತ ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕುತ್ತಿರುವುದು ಶ್ಲಾಘನೀಯ. ಸ್ವರ್ಧಾತ್ಮಕ ಯುಗದಲ್ಲಿ ಅಭಿವೃದ್ಧಿ ಅನೋದು ಹೆಚ್ಚು ವೇಗ ಪಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಲ ಮೇಲ್ಜಾತಿಯ ಮನಸ್ಸುಗಳು ಬದಲಾವಣೆ ಆಗದೆ, ಜಾತಿ ಎಂಬ ಸಂಕುಚಿತ ಮನಸ್ಸು ಜೀವಂತವಾಗಿ ಮೈಗೊಡಿಸಿಕೊಂಡಿರುವುದು ಅತ್ಯಂತ ದುರಂತ. ಈ ದೇಶ ಬದಲಾವಣೆ ಆಗಬೇಕಾದರೆ ಜಾತಿ ಪದ್ದತಿ ನಿರ್ಮೂಲನವಾಗಬೇಕು. ಶಿಕ್ಷಣ ಸಮನತೆ ಜಾರಿಗೆ ಬರಬೇಕು. ಇಂತಹ ಪ್ರಯತ್ನದಲ್ಲಿ ಮುನ್ನಡೆಯಬೇಕಿದ್ದ ಸಂದರ್ಭದಲ್ಲಿ ಮೊನ್ನೆಯಷ್ಟೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕನಕ ಪೀಠ ಶಾಖಾ ಮಠದ ಈಶ್ವರಾನಂದಸ್ವಾಮಿ ಖಾಸಗಿ ಕಾರ್ಯಕ್ರಮದ ನಿಮಿತ್ತ ಹೊಸದುರ್ಗಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿದ ಬಳಿದ ಅಲ್ಲಿನ ಚನ್ನಕೇಶವ ಸ್ವಾಮಿ ದೇಗುಲಕ್ಕೆ ಹೋಗಿ ದೇವರಿಗೆ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿ ವಾಪಸ್ಸಾದ ಬಳಿಕ ಅಲ್ಲಿನ ದೇಗುಲಕ ಆರ್ಚಕರು ನೀರು ಹಾಗೂ ಯಜ್ಞ ಹೋಮ, ಹವನಗಳ ಮೂಲಕ ಗರ್ಭಗುಡಿ ಹಾಗೂ ದೇವಸ್ಥಾನ ಪೂರಾ ಸ್ವಚ್ಛಗೊಳಿಸಿದ್ದಾರೆ ಎಂದರು.

ಇವರ ಮನಸ್ಥಿತಿ ಹೇಗಿದೆ ಎಂಬುವುದು ಅರ್ಥೈಸಿಕೊಳ್ಳಬೇಕು. ಒಬ್ಬ ಹಿಂದುಳಿದ ವರ್ಗಕ್ಕೆ ಸೇರಿದ್ದ ಈಶ್ವರಾನಂದಸ್ವಾಮಿ ಸಾಮಾಜಿಕ ಪರ ಚಿಂತಕರು. ತಮ್ಮ ಅತ್ಯುತ್ತಮ ಸಂದೇಶ ಮೂಲಕ ಧರ್ಮ ಹಾಗೂ ಶಿಕ್ಷಣದ ಮಹತ್ವ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಅವರನ್ನೇ ಈ ರೀತಿಯ ಶೂದ್ರ ಜಾತಿಯ ಪಟ್ಟಕಟ್ಟಿ ಪರಿಗಣಿಸುತ್ತಾರೆಂದರೆ, ಇನ್ನೂ ಅತ್ಯಂತ ಶೋಷಿತ ಸಮದಾಯದ ಜನತೆಯ ಪಾಡೇನು. ಇಂತಹ ಜಾತಿ ಎಂಬ ಜೀವಂತ ಧೋರಣೆ ಬದಲಾವಣೆ ಆಗಬೇಕು. ಇಂತಹ ವರ್ತನೆ ಸಹಿಸುವುದಿಲ್ಲ. ಇದನ್ನು ವಿರೋಧಿಸುತ್ತೇನೆ. ಪ್ರತಿಯೊಬ್ಬರು ಖಂಡಿಸಬೇಕು. ನಾವೆಲ್ಲಾ ಒಂದೇ ಎಂಬ ಭಾವನೆ ಹಾಗೂ ದೇಶಪ್ರೇಮ ಆಳವಡಿಸಿಕೊಂಡಾಗ ಮಾತ್ರ ಪ್ರಗತಿ ಸಾಧ್ಯ ಎಂದು ಘಟನೆ ಕುರಿತು ಆಸಮಾಧಾನ ವ್ಯಕ್ತಪಡಿಸಿದರು.