ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರ ಗಾಂಧಿನಗರದಲ್ಲಿರುವ ಶ್ರೀವೀರ ಮಡಿವಾಳ ಮಾಚಿದೇವ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಕಚೇರಿಯಲ್ಲಿ ಶ್ರೀ ವೀರ ಮಡಿವಾಳ ಮಾಚಿದೇವ ಸೌಹಾರ್ದ ಸಹಕಾರಿ ಬ್ಯಾಂಕ್‌ನ ೨೦೦೨೫-೩೦ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ಟಿ.ಗುರುರಾಜ್ ಮತ್ತು ಕೆ.ಆರ್.ಪೇಟೆ ಶಂಕರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.ಬಳಿಕ ಮಾತನಾಡಿದ ಅಧ್ಯಕ್ಷ ಬಿ.ಟಿ.ಗುರುರಾಜ್, ಮಂಡ್ಯ ಜಿಲ್ಲೆಯಲ್ಲಿ ಸೌಹಾರ್ದ ಸಹಕಾರಿ ಬ್ಯಾಂಕ್‌ಗಳು ಉತ್ತಮವಾಗಿ ನಡೆದು ಶ್ರೀಸಾಮಾನ್ಯರ ಆರ್ಥಿಕ ಪ್ರಗತಿಯಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿವೆ ಎಂದರು.
ಈ ಆಡಳಿತ ಮಂಡಳಿಯಲ್ಲಿ ೧೪ ಮಂದಿ ನಿರ್ದೇಶಕರಿದ್ದು, ಎಲ್ಲರ ಸಹಕಾರದಿಂದ ಶ್ರೀವೀರ ಮಡಿವಾಳ ಮಾಚಿದೇವ ಸೌಹಾರ್ದ ಸಹಕಾರಿ ಬ್ಯಾಂಕ್ ಉತ್ತಮವಾಗಿ ಆರ್ಥಿಕ ಪ್ರಗತಿ ಸಾಧಿಸುತ್ತಿದ್ದು, ಸಾಲ ಪಡೆದ ಫಲಾನುಭವಿಗಳಿಗೆ ಮತ್ತು ಸಾಲ ಮರುಪಾವತಿ ಮಾಡಿದ ಫಲಾನುಭವಿಗಳನ್ನು ಅಭಿನಂದಿಸಲಾಗುವುದು ಎಂದರು.ಸಹಕಾರಿ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಹಣ ಹೂಡಿದ ಠೇವಣಿದಾರರಿಗೆ ಶೇ.೧೦ರಷ್ಟು ಬಡ್ಡಿ ಹಾಗೂ ಪಿಗ್ಮಿದಾರರಿಗೆ ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ. ಚುನಾವಣಾ ಅಧಿಕಾರಿಯಾಗಿ ಸಹಕಾರ ಸಂಘಗಳ ನಿಬಂಧಕ ಕಚೇರಿಯ ಅಧಿಕಾರಿ ರವಿಕುಮಾರ್ ಕರ್ತವ್ಯ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಕೆ.ಆರ್ ಪೇಟೆ ಶಂಕರ್ ನಿರ್ದೇಶಕರಾದ ದುದ್ದ ರಾಜು, ಅರ್ಕೇಶ್ವರ ಬಡಾವಣೆಯ ಮಂಜುನಾಥ್, ಕೋಟಾಗಹಳ್ಳಿ ರವಿ, ನರಸಿಂಹಯ್ಯ, ವೀಣಾ ಶಂಕರ್, ಜಯಲಕ್ಷ್ಮಿ, ಭವ್ಯ, ಚನ್ನೇಗೌಡ, ಮರಳಗಾಲ ಮಂಜುನಾಥ್, ಗಾಂಧೀನಗರ ಮಂಜು, ಗೋಪಾಲ್, ಕವಿತ ಸಿಇಓ ಆಶಾ ಮತ್ತು ಸಮುದಾಯದ ಮುಖಂಡರಿದ್ದರು.ಮಹಿಳಾ ಎನ್‌ಸಿಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಮಂಡ್ಯ: ಅಕ್ಕ ಪಡೆ ಯೋಜನೆಗೆ ಸಂಬಂಧಿಸಿದಂತೆ 5 ಹುದ್ದೆಗೆ ಕರ್ತವ್ಯ ನಿರ್ವಹಿಸಲು ಆಸಕ್ತಿಯುಳ್ಳ ಎನ್‌ಸಿಸಿ ‘ಸಿ’ ಸರ್ಟಿಫಿಕೇಟ್ ಹೊಂದಿರುವ 35 ರಿಂದ 45ವಯೋಮಾನದ ಮಹಿಳಾ ಎನ್‌ಸಿಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಸ್ಥಳೀಯ ನಿವಾಸಿಯಾಗಿದ್ದು, ದೈಹಿಕ ದೃಢತೆ ಹೊಂದಿರಬೇಕು. ಶಿಫ್ಟ್ ಮಾದರಿಯಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧರಿರುವ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಮಹಿಳಾ ಅಭ್ಯರ್ಥಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ನಿಗದಿತ ನಮೂನೆಯ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ದಾಖಲಾತಿಗಳನ್ನು ನ.15 ರೊಳಗಾಗಿ ಸಲ್ಲಿಸಿತಕ್ಕದು. ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ:221315, 227336 ಅನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))