ಸಾರಾಂಶ
ಮಂಡ್ಯ ತಾಲೂಕು ಕಚೇರಿಯಲ್ಲಿ ನೋಂದಣಿಯಾಗಿರುವ ಮತದಾರರ ಸಂಖ್ಯೆ ಹೆಚ್ಚಿದ್ದು, ತಾಲೂಕು ಕಚೇರಿಯಲ್ಲಿ ಎರಡು ಹಾಗೂ ಮಂಡ್ಯ ತಾಲೂಕು ಪಂಚಾಯ್ತಿ ಸಾಮರ್ಥ್ಯ ಸೌಧದಲ್ಲಿ ಒಂದು ಮತ ಕೇಂದ್ರ ಸೇರಿ ಒಟ್ಟು 3 ಮತ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಉಳಿದ ತಾಲೂಕಿನಲ್ಲಿ ಒಂದೊಂದು ಮತಕೇಂದ್ರಗಳಿರುತ್ತವೆ. ಜಿಲ್ಲೆಯಲ್ಲಿ 9 ಮತಕೇಂದ್ರಗಳಿದ್ದು, ಅಂತಿಮ ಮತದಾರರ ಪಟ್ಟಿಯ ಪ್ರಕಾರ 5403 ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕ ವಿಧಾನ ಪರಿಷತ್ತಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆ 2024ಕ್ಕೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ 5403 ಅರ್ಹ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ರಾಜಕೀಯ ಪಕ್ಷದ ಮುಖಂಡರ ಸಭೆ ನಡೆಸಿ ಮಾತನಾಡಿ, ಜೂ.3ರಂದು ಬೆಳಗ್ಗೆ 8 ರಿಂದ 4 ರವರೆಗೆ ಮತದಾನ ನಡೆಯಲಿದ್ದು. ಜೂನ್ 6ರಂದು ಮತ ಎಣಿಕೆ ನಡೆಯಲಿದೆ, ಎಲ್ಲ ಚುನಾವಣೆ ಪ್ರಕ್ರಿಯೆಗಳು ಜೂ.12ರಂದು ಪೂರ್ಣಗೊಳ್ಳುತ್ತದೆ ಎಂದರು.
ದಕ್ಷಿಣ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳು ಒಳಪಡುತ್ತದೆ ಹಾಗೂ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಾಗಿರುತ್ತಾರೆ. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಗಳಾಗಿರುತ್ತಾರೆ ಎಂದರು.ಮಂಡ್ಯ ತಾಲೂಕು ಕಚೇರಿಯಲ್ಲಿ ನೋಂದಣಿಯಾಗಿರುವ ಮತದಾರರ ಸಂಖ್ಯೆ ಹೆಚ್ಚಿದ್ದು, ತಾಲೂಕು ಕಚೇರಿಯಲ್ಲಿ ಎರಡು ಹಾಗೂ ಮಂಡ್ಯ ತಾಲೂಕು ಪಂಚಾಯ್ತಿ ಸಾಮರ್ಥ್ಯ ಸೌಧದಲ್ಲಿ ಒಂದು ಮತ ಕೇಂದ್ರ ಸೇರಿ ಒಟ್ಟು 3 ಮತ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಉಳಿದ ತಾಲೂಕಿನಲ್ಲಿ ಒಂದೊಂದು ಮತಕೇಂದ್ರಗಳಿರುತ್ತವೆ. ಜಿಲ್ಲೆಯಲ್ಲಿ 9 ಮತಕೇಂದ್ರಗಳಿದ್ದು, ಅಂತಿಮ ಮತದಾರರ ಪಟ್ಟಿಯ ಪ್ರಕಾರ 5403 ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಕೆ.ಆರ್.ಪೇಟೆ ಮತ ಕೇಂದ್ರದಲ್ಲಿ ಗಂಡು - 327, ಹೆಣ್ಣು - 137 ಒಟ್ಟು 464 ಮತದಾರರು, ನಾಗಮಂಗಲ ಮತ ಕೇಂದ್ರದಲ್ಲಿ ಗಂಡು -296, ಹೆಣ್ಣು - 147, ಒಟ್ಟು - 443 ಮತದಾರರು, ಪಾಂಡವಪುರ ಮತ ಕೇಂದ್ರದಲ್ಲಿ ಗಂಡು - 260, ಹೆಣ್ಣು - 186, ಒಟ್ಟು - 446 ಮತದಾರರು, ಮಂಡ್ಯ ಮತ ಕೇಂದ್ರದಲ್ಲಿ ಗಂಡು - 573, ಹೆಣ್ಣು - 611, ಒಟ್ಟು - 1184 ಮತದಾರರು, ಮಂಡ್ಯ ಮತ ಕೇಂದ್ರದಲ್ಲಿ ಗಂಡು - 458, ಹೆಣ್ಣು -343, ಒಟ್ಟು -801, ಮತದಾರರು, ಮದ್ದೂರು ಮತ ಕೇಂದ್ರದಲ್ಲಿ ಗಂಡು - 554, ಹೆಣ್ಣು - 413, ಒಟ್ಟು - 967 ಮತದಾರರು, ಶ್ರೀರಂಗಪಟ್ಟಣ ಮತ ಕೇಂದ್ರದಲ್ಲಿ ಗಂಡು - 207, ಹೆಣ್ಣು - 224, ಒಟ್ಟು - 431 ಮತದಾರರು, ಮಳವಳ್ಳಿ ಮತ ಕೇಂದ್ರದಲ್ಲಿ ಗಂಡು - 452, ಹೆಣ್ಣು - 215, ಒಟ್ಟು - 667 ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ.