ಸಾರ್ವಭೌಮತ್ವ ಸಾರುವ ಸಂಸ್ಥೆ ಕಸಾಪ: ಪ್ರೊ.ಬಿ.ಎಸ್. ಬೋರೇಗೌಡ

| Published : May 07 2024, 01:02 AM IST

ಸಾರ್ವಭೌಮತ್ವ ಸಾರುವ ಸಂಸ್ಥೆ ಕಸಾಪ: ಪ್ರೊ.ಬಿ.ಎಸ್. ಬೋರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

2500 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಉಳಿಸಿ ಬೆಳೆಸುವ, ಇತರರ ದಬ್ಬಾಳಿಕೆ ಖಂಡಿಸುವ ಮನೋಭಾವ ಪ್ರವೃತ್ತಿಯನ್ನು ಕನ್ನಡಿಗರು ಬೆಳೆಸಿಕೊಳ್ಳಬೇಕಿದೆ. ಚುನಾಯಿತ ಪ್ರತಿನಿಧಿಗಳ ಮೂಲಕ ಸಾಹಿತ್ಯ ಪರಿಷತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಪೋಷಿಸುವ ವಿದ್ವಾಂಸರು ಲೇಖನಗಳನ್ನು ಕವಿಗಳ ಗ್ರಂಥ ಮಾಲಿಕೆಗಳನ್ನು ಹೊರತರುವ ಒಂದು ಅತ್ಯಂತ ಪ್ರಮುಖವಾದ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ ಬೆಳೆದಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಎಸ್.ಬೋರೇಗೌಡ ತಿಳಿಸಿದರು.

ಪಟ್ಟಣದ ಕನ್ನಡ ಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ 110ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರ ದೃಷ್ಟಿಯ ಫಲವಾಗಿ ಕನ್ನಡ ಸಾರ್ವಭೌಮತ್ವ ಸಾರುವ ಒಂದು ಸಂಸ್ಥೆ ಪ್ರಾರಂಭವಾದದ್ದು ಕನ್ನಡಿಗರ ಸೌಭಾಗ್ಯವಾಗಿದೆ ಎಂದರು.

ಆಲೂರು ವೆಂಕಟರಾಯರು, ಎಚ್.ವಿ.ನಂಜುಂಡಯ್ಯ ಸೇರಿದಂತೆ ಮೊದಲಾದ ಮಹನೀಯರ ಪರಿಶ್ರಮದ ಫಲವಾಗಿ ಕನ್ನಡ ಸಾಹಿತ್ಯ ಪರಿಷತ್ ಉದಯವಾಯಿತು ಎಂದರು.

ಸರ್ಕಾರದ ಪ್ರೋತ್ಸಾಹದೊಂದಿಗೆ ವಿಚಾರ ಸಂಕಿರಣಗಳು, ಕಮ್ಮಟಗಳು, ನಾಡು ನುಡಿಯ ಏಳಿಗೆಗಾಗಿ ಸಾಹಿತ್ಯ ಸಮ್ಮೇಳನಗಳನ್ನು ಪರಿಷತ್ ನಡೆಸಿ ಕನ್ನಡಿಗರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯವಲ್ಲದೇ ರಾಷ್ಟ್ರಮಟ್ಟದಲ್ಲಿ, ವಿದೇಶದಲ್ಲೂ ಕನ್ನಡದ ಕಹಳೆಯನ್ನು ಸಾಹಿತ್ಯ ಪರಿಷತ್ತು ವಿವಿಧ ಕನ್ನಡಪರ ಸಂಘಟನೆಗಳ ಮೂಲಕ ಕನ್ನಡತನ ವಿಜೃಂಭಿಸುವಂತೆ ಮಾಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

2500 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಉಳಿಸಿ ಬೆಳೆಸುವ ಇತರರ ದಬ್ಬಾಳಿಕೆ ಖಂಡಿಸುವ ಮನೋಭಾವ ಪ್ರವೃತ್ತಿಯನ್ನು ಕನ್ನಡಿಗರು ಬೆಳೆಸಿಕೊಳ್ಳಬೇಕಿದೆ. ಚುನಾಯಿತ ಪ್ರತಿನಿಧಿಗಳ ಮೂಲಕ ಸಾಹಿತ್ಯ ಪರಿಷತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಈ ವರ್ಷ ಮಂಡ್ಯ ಜಿಲ್ಲೆಯಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮ್ಮ ಪುಣ್ಯವೇ ಸರಿ. ಸಮ್ಮೇಳನದ ಯಶಸ್ಸಿಗೆ ನಾವೆಲ್ಲ ಕಂಕಣಬದ್ಧರಾಗಿ ನಮ್ಮ ಇತಿಮಿತಿಯಲ್ಲಿ ಕಾರ್ಯವನ್ನು ನಿರ್ವಹಿಸಿ ಸರ್ಕಾರದ ಜನಪ್ರತಿನಿಧಿಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸೋಣ ಎಂದರು.

ಕಾರ್ಯಕ್ರಮದಲ್ಲಿ ಪುಟ್ಟಸ್ವಾಮಿ, ಎಂ.ಬಸಪ್ಪ ನೆಲಮಾಕನಹಳ್ಳಿ, ಮರಿಸ್ವಾಮಿ ಮಾದಳ್ಳಿ, ಬಿ ಮಲ್ಲಪ್ಪ, ಮಾದೇಶ್ ಕುಮಾರ್ ಬಾಚನಹಳ್ಳಿ, ಶಿವರಾಜು ಚೆನ್ನಿಪುರ ಹನುಮಂತಪ್ಪ, ಮಾದೇಗೌಡ, ಚಿಕ್ಕ ಮರಿಗೌಡ, ಕೆಬಿ ಶಾಂತರಾಜು, ಸಾಲುಮರದ ನಾಗರಾಜು, ಚುಂಚಣ್ಣ ಬಿ ಕಲ್ಲಾರೆ ಪುರ ಸೇರಿದಂತೆ ಇತರರು ಇದ್ದರು.