ಆಳಂದ ತಾಲೂಕಾದ್ಯಂತ 97445 ಹೆಕ್ಟೇರ್‌ ಪ್ರಧೇಶದಲ್ಲಿ ಬಿತ್ತನೆ ಗುರಿ

| Published : Jun 18 2024, 12:54 AM IST

ಆಳಂದ ತಾಲೂಕಾದ್ಯಂತ 97445 ಹೆಕ್ಟೇರ್‌ ಪ್ರಧೇಶದಲ್ಲಿ ಬಿತ್ತನೆ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಮುಂಗಾರು ಹಂಗಾಮಿಗೆ ಆಳಂದ ತಾಲೂಕಿನ ಐದು ಹೋಬಳಿ ಕೇಂದ್ರ ಆಳಂದ, ಖಜೂರಿ, ಮಾದನಹಿಪ್ಪರಗಾ. ನಿಂಬರಗಾ, ನರೋಣಾ ವಲಯಕ್ಕೆ ಕೃಷಿ ಇಲಾಖೆಯ ಲೆಕ್ಕಾಚಾರದಲ್ಲಿ 97445 ಹೆಕ್ಟೇರ್ ಪ್ರದೇಶದಲ್ಲಿ 111398 ಟನ್ ವಿವಿಧ ರೀತಿಯ ಆಹಾರಧಾನ್ಯ ಉತ್ಪಾದನೆ ಗುರಿ ಹೊಂದಿದೆ.

ಕನ್ನಡಪ್ರಭ ವಾರ್ತೆ ಆಳಂದ

ಮುಂಗಾರು ಮಳೆಯು ಸುರಿಯದೆ ಎರಡು ದಿನಗಳಿಂದ ಬಿಡುವು ನೀಡಿದ್ದರಿಂದ ಭಾನುವಾರದಿಂದ ತಾಲೂಕಿನಾದ್ಯಂತ ಪಟ್ಟಣ ಸೇರಿ ಗ್ರಾಮೀಣ ಭಾಗದ ಬಿತ್ತನೆ ಭರದಿಂದ ಸಾಗಿದೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ಲಭ್ಯವಿದ್ದು, ಈಗಾಗಲೇ ಜೂನ್ ಮೊದಲು ವಾರದಿಂದಲೇ ಬೀಜಗಳನ್ನು ವಿತರಣೆ ಕಾರ್ಯ ನಡೆದಿದೆ. ಅಗತ್ಯ ಬೀಜಗಳನ್ನು ತರಿಸಿಕೊಡಲಾಗುತ್ತಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿ ಜೂನ್ ಮೊದಲು ವಾರದಿಂದದಲೇ ಮುಂಗಾರು ಮಳೆ ಆಶಾದಾಯಕವಾಗಿ ಸುರಿದಿದ್ದು ಬಿತ್ತನೆ ಹದವಾಗಿದೆ. ಖಜೂರಿ ಮತ್ತು ಆಳಂದ ವಲಯದಲ್ಲಿ ಬಿತ್ತನೆಗೆ ಅಗತ್ಯಕ್ಕಿಂತ ಹೆಚ್ಚಿನ ಮಳೆಯಾದ ಪ್ರಯುಕ್ತ ವಾರದಿಂದ ಬಿತ್ತನೆ ನಡೆದಿಲ್ಲ. ಈ ಎರಡು ದಿನಗಳಿಂದ ಮಳೆ ಬಿಡುವು ನೀಡಿದ್ದರಿಂದ ಮತ್ತೆ ಭೂಮಿಯ ಮೇಲ್ಬಾಗದ ನೀರಿನಾಂಶ ಅರತೊಡಗಿದ್ದರಿಂದ ಅಲ್ಲಲ್ಲಿ ಬಿತ್ತನೆ ಚುರುಕಿನಿಂದ ಸಾಗಿದೆ.

ಟ್ರ್ಯಾಕ್ಟರ್‌ಗಳ ಕೊರತೆ: ಎತ್ತುಗಳ ಮೂಲಕ ಬಿತ್ತನೆಗೆ ಕಡಿಮೆಯಾಗಿದ್ದು, ಈಗ ಹೆಚ್ಚಿನ ಪ್ರಮಾಣದಲ್ಲಿ ರೈತರು ಟ್ರ್ಯಾಕ್ಟರ್‌ ಮೂಲಕ ಬಿತ್ತನೆಗೆ ಮುಂದಾಗಿದ್ದಾರೆ. ಇದರಿಂದಾಗಿ ಸಕಾಲಕ್ಕೆ ರೈತರಿಗೆ ಟ್ರ್ಯಾಕ್ಟರ್‌ಗಳ ಲಭ್ಯವಾಗುತ್ತಿಲ್ಲ. ಇದರಿಂದ ಬಿತ್ತನೆಯ ದಿನಗಳು ಮುಂದೊಡುತ್ತಿವೆ ಎಂಬ ಆತಂಕ ರೈತ ವಲಯದಲ್ಲಿ ಕಾಡತೊಡಗಿದೆ.

97445 ಹೆಕ್ಟೇರ್‌ನಲ್ಲಿ 111398 ಟನ್ ಗುರಿ: ಪ್ರಸಕ್ತ ಮುಂಗಾರು ಹಂಗಾಮಿಗೆ ತಾಲೂಕಿನ ಐದು ಹೋಬಳಿ ಕೇಂದ್ರ ಆಳಂದ, ಖಜೂರಿ, ಮಾದನಹಿಪ್ಪರಗಾ. ನಿಂಬರಗಾ, ನರೋಣಾ ವಲಯಕ್ಕೆ ಕೃಷಿ ಇಲಾಖೆಯ ಲೆಕ್ಕಾಚಾರದಲ್ಲಿ 97445 ಹೆಕ್ಟೇರ್ ಪ್ರದೇಶದಲ್ಲಿ 111398 ಟನ್ ವಿವಿಧ ರೀತಿಯ ಆಹಾರಧಾನ್ಯ ಉತ್ಪಾದನೆ ಗುರಿ ಹೊಂದಿದೆ.

ತೃಣಧಾನ್ಯಗಳ ಉತ್ಪಾದನೆ: ಭತ್ತ ಖಷ್ಕಿ 5 ಹೆಕ್ಟೇರ್‌ನಲ್ಲಿ 5 ಟನ್, ಭತ್ತ ನೀರಾವರಿ 10 ಹೆಕ್ಟೇರ್‌ನಲ್ಲಿ 52 ಟನ್ ಉತ್ಪಾದನೆ ಗುರಿಯಿದೆ. ಖುಷ್ಕ ಜೋಳ 50 ಹೆಕ್ಟೇರ್‌ನಲ್ಲಿ 75 ಟನ್, ನೀರಾವರಿ ಜೋಳ 25 ಹೆಕ್ಟೇರ್‌ನಲ್ಲಿ 44 ಟನ್ ಉತ್ಪಾದನೆ, ಮೆಕ್ಕೆ ಜೋಳ ಖುಷ್ಕಿ 265 ಹೆಕ್ಟೇರ್‌ನಲ್ಲಿ 928 ಟನ್, ನೀರಾವರಿ ಮೆಕ್ಕೆಜೋಳ 75 ಹೆಕ್ಟೇರ್‌ನಲ್ಲಿ 375 ಟನ್ ಹಾಗೂ ಸಜ್ಜೆ ಖುಷ್ಕಿ 100 ಹೆಕ್ಟೇರ್‌ನಲ್ಲಿ 145 ಟನ್, ನೀರಾವರಿಯಲ್ಲಿ 15 ಹೆಕ್ಟೇರ್‌ನಲ್ಲಿ 33 ಟನ್ ಉತ್ಪಾದನೆ, ಇತರೆ ಬೆಳೆ 20 ಹೆಕ್ಟೇರ್‌ನಲ್ಲಿ 10 ಟನ್ ಹೀಗೆ ಒಟ್ಟು ತೃಣಧಾನ್ಯಗಳ 565 ಹೆಕ್ಟೇರ್‌ನಲ್ಲಿ 1680 ಟನ್ ಉತ್ಪಾದನೆ ಗುರಿ ಅಂದಾಜಿಸಿದೆ.

ಬೆಳೆಕಾಳು 96880 ಹೆಕ್ಟೇರ್: ತೊಗರಿ ಖುಷ್ಕಿ 83600 ಹೆಕ್ಟೇರ್‌ನಲ್ಲಿ 96140 ಟನ್, ನೀರಾವರಿ 4100 ಹೆಕ್ಟೇರ್‌ನಲ್ಲಿ 6355 ಟನ್, ಹುರುಳಿ ಖುಷ್ಕಿ 15 ಹೆಕ್ಟೇರ್‌ನಲ್ಲಿ 9 ಟನ್, ಉದ್ದು 6550 ಹೆಕ್ಟೇರ್‌ನಲ್ಲಿ 5240 ಟನ್ ಉತ್ಪಾದನೆ, ಹೆಸರು 2550 ಹೆಕ್ಟೇರ್‌ನಲ್ಲಿ 1913 ಟನ್ ಉತ್ಪಾದನೆ, ಮತ್ತು ನೀರಾವರಿ ಹೆಸರು 50 ಹೆಕ್ಟೇರ್‌ನಲ್ಲಿ 50ಟನ್, ಉತ್ಪಾದನೆ, ಅಲಸಂದಿ 5 ಹೆಕ್ಟೇರ್‌ನಲ್ಲಿ 3 ಟನ್, ಅವರೆ ಖುಷ್ಕಿ6 ಹೆಕ್ಟೇರ್‌ಲ್ಲಿ 6 ಟನ್, ಮಟಕಿ ಖುಷ್ಕಿ5 ಹೆಕ್ಟೇರ್‌ಲ್ಲಿ 3ಟನ್ ಉತ್ಪಾದನೆ ಸೇರಿ ಒಟ್ಟು 96880 ಹೆಕ್ಟೇರ್‌ಲ್ಲಿ 109718 ಟನ್ ಉತ್ಪಾದನೆ ಗುರಿ ಅಂದಾಜಿಸಿದೆ.

ಎಣ್ಣೆಕಾಳು 37210 ಹೆಕ್ಟೇರ್: ಶೇಂಗಾ ಖುಷ್ಕಿ 80 ಹೆಕ್ಟೇರ್‌ನಲ್ಲಿ 100 ಟನ್, ನೀರಾವರಿಯಲ್ಲಿ 10 ಹೆಕ್ಟೇರ್‌ನಲ್ಲಿ 20 ಟನ್ ಉತ್ಪಾದನೆ, ಎಳ್ಳು ಖುಷ್ಕಿ 70 ಹೆಕ್ಟೇರ್‌ನಲ್ಲಿ 49ಟನ್, ಸೂರ್ಯಕಾಂತಿ ಖುಷ್ಕಿ 4120 ಹೆಕ್ಟೇರ್‌ನಲ್ಲಿ 3708 ಟನ್, ನೀರಾವರಿಯಲ್ಲಿ 425 ಹೆಕ್ಟೇರ್‌ನಲ್ಲಿ 765 ಟನ್, ಔಡಲ್ ಖುಷ್ಕಿ 1 ಹೆಕ್ಟೇರ್‌ನಲ್ಲಿ 1 ಟನ್, ಸೋತಾಬೀನ್ ಖುಷ್ಕಿ 32500 ಹೆಕ್ಟೇರ್‌ನಲ್ಲಿ 65000 ಟನ್ ಸೇರಿ ಒಟ್ಟು ಎಣ್ಣೆಕಾಳು 37210 ಹೆಕ್ಟೇರ್‌ನಲ್ಲಿ 69643 ಟನ್ ಸೇರಿ ಒಟ್ಟು ಪ್ರಸಕ್ತ ಮುಂಗಾರಿನ ಕ್ಷೇತ್ರದಲ್ಲಿ 139855 ಹೆಕ್ಟೇರ್‌ನಲ್ಲಿ 586951 ಟನ್ ಉತ್ಪಾದನೆ ಗುರಿ ಹೊಂದಲಾಗಿದೆ. ಒಟ್ಟು ಆಹಾರ ಬೆಳೆಗಳ ವಿಸ್ತೀರ್ಣ 97445 ಹೆಕ್ಟೇರ್‌ನಲ್ಲಿ 111398 ಟನ್ ಉತ್ಪಾದನೆ ನಡೆಯಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಅವರು ತಿಳಿಸಿದ್ದಾರೆ. ಈ ಮುಂಗಾರು ಹಂಗಾಮಿನಲ್ಲಿ ಮೃಗಶಿರಾ ಮಳೆಯಿಂದಲೇ ಕೃಷಿ ಚಟುವಟಿಕೆ ಶಉರುವಾಗಿರೋದು ಸಂತಸ ತಂದಿದೆ. ಬಿತ್ತನೆ ಜೋರಾಗಿ ಸಾಗಿದೆ. ಮುಂದಿನ ಮಲೆಗಳೂ ಇದೇ ರೀತಿ ಸಮಯಕ್ಕೆ ಸುರಿದಲ್ಲಿ ರೈತರು ಬಂಪರ್‌ ಫಸಲು ಬಳೆಯಲು ಸಧ್ಯ. ವರುಣ ದೇವರಿಗೆ ರೈತರ ಪರವಾಗಿ ನಾನು ಇದನ್ನೇ ಪ್ರಾರ್ಥಿಸುವೆ.

- ಚಂದ್ರಶೇಖರ್‌ ಹಿರೇಮಠ, ಪ್ರಗತಿಪರ ರೈತ, ಧುತ್ತರಗಾಂವ್‌