ಸಾರಾಂಶ
ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳೊಂದಿಗೆ ಬೆರೆತ ಶೋಭಾರಾಣಿ ವಿ.ಜೆ. ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.
ಕುರುಗೋಡು: ಇಲ್ಲಿನ ಪಟ್ಟಣದ ೨೩ನೇ ವಾರ್ಡ್‌ಗೆ ಶುಕ್ರವಾರ ಭೇಟಿ ನೀಡಿದ್ದ ಎಸ್ಪಿ ಶೋಭಾರಾಣಿ ವಿ.ಜೆ. ಮನೆ ಮನೆಗೆ ಪೊಲೀಸ್ ಜನಸ್ನೇಹಿ ಯೋಜನೆಗೆ ಚಾಲನೆ ನೀಡಿದರು.ಜನಸ್ನೇಹಿ ಪೊಲೀಸ್ ಪರಿಕಲ್ಪನೆಗೆ ಹಾಗೂ ಸಾರ್ವಜನಿಕರೊಂದಿಗೆ ಜನಸಾಮಾನ್ಯರಂತೆ ಬೆರೆತ ಅವರು ಜನರ ನೋವು-ನಲಿವುಗಳನ್ನು ಆಲಿಸಿದರು.
ಪೊಲೀಸರ ನಡುವೆ ಸಂಬಂಧ ವೃದ್ಧಿಗೆ ಉಪಯುಕ್ತವಾಗಿದೆ. ತುರ್ತು ಸೇವೆ ಸೇರಿ ಇತರ ಯಾವುದೇ ದೂರಿದ್ದರೆ ಸಹಾಯವಾಣಿಗೆ ಕರೆ ಮಾಡಿದರೆ ಸಂಬಂಧಪಟ್ಟ ಅಧಿಕಾರಿ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ. ಇದರಿಂದ ಸಮಾಜದಲ್ಲಿ ಪೊಲೀಸ್ ಅಂದ್ರೆ ಭಯವಲ್ಲ, ಅಭಯ ಎಂದು ಮನದಷ್ಟು ಮಾಡಿಕೊಡಲು ಅನುವಾಗಲಿದೆ ಎಂದರು.ಮನೆಗಳ ಗೋಡೆಗಳಿಗೆ ಪೊಲೀಸ್ ಠಾಣೆ, ಪಿಎಸ್ಐ, ಬೀಟ್ ಸಿಬ್ಬಂದಿ ಮತ್ತು ಸಿಪಿಐ ಅವರ ಮೊಬೈಲ್ ಸಂಖ್ಯೆಗಳಿರುವ ಚೀಟಿ ಅಂಟಿಸಿದ ಅವರು ನಿಮಗೆ ಯಾವುದೇ ರೀತಿಯ ತೊಂದರೆಯಾದರೆ ಕೂಡಲೇ ಈ ಸಂಖ್ಯೆಗಳಿಗೆ ಕರೆಮಾಡಿ ಮಾಹಿತಿ ನೀಡಿ ರಕ್ಷಣೆ ಪಡೆಯಿರಿ ಎಂದು ಸಲಹೆ ನೀಡಿದರು.
ಮನೆಗೆ ಬೀಗ ಹಾಕಿ ಬೇರೆಡೆಗೆ ಹೋಗುವ ಸಂದರ್ಭದ ಬಂದಲ್ಲಿ ಸುತ್ತಮುತ್ತಲಿನ ಮನೆಯವರಿಗೆ ಮಾಹಿತಿ ನೀಡಬೇಕು. ಬೀಟ್ ಪೊಲೀಸ್ ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಹೆಚ್ಚು ಬೆಲೆಬಾಳುವ ವಸ್ತು, ಅಧಿಕ ಪ್ರಮಾಣದ ನಗದುಹಣ ಮನೆಯಲ್ಲಿ ಇಟ್ಟುಕೊಳ್ಳಬೇಡಿ ಎಂದು ಸಲಹೆ ನೀಡಿದರು.ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳೊಂದಿಗೆ ಬೆರೆತ ಶೋಭಾರಾಣಿ ವಿ.ಜೆ. ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.
ಸಿಪಿಐ ವಿಶ್ವನಾಥ ಕೆ.ಹಿರೇಗೌಡರ್ ಮಾತನಾಡಿ, ಪೊಲೀಸ್ ಇಲಾಖೆ ಸೇವೆಗಳನ್ನು ಜನಸ್ನೇಹಿ ಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮನೆಮನೆಗೆ ಪೊಲೀಸ್ ಯೋಜನೆ ಜಾರಿಗೆ ತಂದಿದೆ. ಪೊಲೀಸ್ ಇಲಾಖೆ ಸದಾಕಾಲ ನೊಂದವರ ಪರವಾಗಿರುತ್ತದೆ. ಯಾವುದೇ ಸಮಸ್ಯೆ ಇದ್ದರೂ ಮಧ್ಯವರ್ತಿಗಳನ್ನು ಅವಲಂಭಿಸದೆ ಸಂಕೋಚವಿಲ್ಲದೆ ಠಾಣೆಗೆ ಭೇಟಿನೀಡಿ ಮಾಹಿತಿ ಹಂಚಿಕೊಳ್ಳಿ ಎಂದುಸಲಹೆ ನೀಡಿದರು.ಪಿಎಸ್ಐ ಸುಪ್ರಿತ್ ಮತ್ತು ಸಿಬ್ಬಂದಿ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))