: ಐದು ದಿನ ನಡೆಯುವ ಚಿಕ್ಕಲ್ಲೂರು ಜಾತ್ರೆ ಶನಿವಾರ ಪ್ರಾರಂಭವಾಗುವ ಹಿನ್ನೆಲೆ ಎಸ್ಪಿ ಮುತ್ತುರಾಜು ಭೇಟಿ ಬಂದೋಬಸ್ತ್ ಪರಿಶೀಲನೆ ನಡೆಸಿದರು.
ಹನೂರು: ಐದು ದಿನ ನಡೆಯುವ ಚಿಕ್ಕಲ್ಲೂರು ಜಾತ್ರೆ ಶನಿವಾರ ಪ್ರಾರಂಭವಾಗುವ ಹಿನ್ನೆಲೆ ಎಸ್ಪಿ ಮುತ್ತುರಾಜು ಭೇಟಿ ಬಂದೋಬಸ್ತ್ ಪರಿಶೀಲನೆ ನಡೆಸಿದರು.
ಜಾತ್ರಾ ಮಹೋತ್ಸವದಲ್ಲಿ ಎಎಸ್ ಪಿ ಶಶಿಧರ್, ಚಾಮರಾಜನಗರ ಉಪ ವಿಭಾಗ ಡಿವೈಎಸ್ ಪಿ ಸೋಮಣ್ಣ, ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದರ್ ಹಾಗೂ ಸಿಪಿಐ ಶಿವಮಾದಯ್ಯ, ಇನ್ಸ್‌ಪೆಕ್ಟರ್‌ಗಳಾದ ಆನಂದ್ ಮೂರ್ತಿ, ಚಿಕ್ಕ ರಾಜ ಶೆಟ್ಟಿ, ಜಗದೀಶ್, ಎಎಸ್‌ಐಗಳಾದ ಮಂಜುನಾಥ್ ಪ್ರಸಾದ್, ಸುಪ್ರೀತ್, ಚೆಲುವರಾಜ್, ರವಿ ಕರ್ತವ್ಯ ನಿರ್ವಹಿಸಲಿದ್ದಾರೆ.ಚಿಕ್ಕಲ್ಲೂರು ಜಾತ್ರೆಗೆ 9 ಇನ್ಸ್‌ಪೆಕ್ಟರ್‌ಗಳು, 34 ಸಬ್ ಇನ್ಸ್‌ಪೆಕ್ಟರ್‌ಗಳು, 57 ಸಹಾಯಕ ಸಬ್ ಇನ್ಸ್‌ಪೆಕ್ಟರ್, ಎಚ್‌ಸಿಪಿಸಿ 360, ಮಹಿಳಾ ಪೊಲೀಸ್ 21, ಹೋಮ್ ಗಾರ್ಡ್ 200, 5 ಡಿಆರ್ ವಾಹನ, ಕೆ ಎಸ್ ಆರ್ ಪಿ 2 ಸೇರಿದಂತೆ 700ಕ್ಕೂ ಹೆಚ್ಚು ಅಧಿಕಾರಿ ಸಿಬ್ಬಂದಿ ವರ್ಗದವರನ್ನು ಬಿಗಿ ಬಂದೂಬಸ್ತ್‌ಗೆ ನಿಯೋಜಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಟ್ಟುನಿಟ್ಟಿನ ಆದೇಶದಂತೆ ಮುಖ್ಯದ್ವಾರಗಳಲ್ಲಿ ಅಧಿಕಾರಿ, ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಎಎಸ್‌ಪಿ ಶಶಿಧರ್, ಕೊಳ್ಳೇಗಾಲ ಉಪ ವಿಭಾಗ ಡಿವೈಎಸ್ ಪಿ ಧರ್ಮದ ಪೊಲೀಸ್ ಸಿಬ್ಬಂದಿ ಇದ್ದರು.