ನವದಂಪತಿ ಕಾರು ಅಪಘಾತ ಸ್ಥಳಕ್ಕೆ ಎಸ್ಪಿ ಭೇಟಿ

| Published : Sep 10 2024, 01:37 AM IST

ಸಾರಾಂಶ

ನವದಂಪತಿ ಪ್ರಯಾಣಿಸುತ್ತಿದ್ದ ಕಾರು ಬೀಕರ ಅಪಘಾತಕ್ಕೊಳಗಾದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋಮವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಹಾಗೂ ಅವರ ಪತ್ನಿ ಮಾನಸ ಪ್ರಯಾಣಿಸುತ್ತಿದ್ದ ಕಾರು ಶನಿವಾರ ಬಂಟ್ವಾಳದ ತಲಪಾಡಿ ಎಂಬಲ್ಲಿ ಅಪಘಾತಕ್ಕೊಳಗಾಗಿ ಮಾನಸ ಮೃತಪಟ್ಟಿದ್ದರು.

ಕನ್ನಡಪ್ರಭ ವಾರ್ತೆ ಬಂಟ್ವಾಳನವದಂಪತಿ ಪ್ರಯಾಣಿಸುತ್ತಿದ್ದ ಕಾರು ಬೀಕರ ಅಪಘಾತಕ್ಕೊಳಗಾದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋಮವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಹಾಗೂ ಅವರ ಪತ್ನಿ ಮಾನಸ ಪ್ರಯಾಣಿಸುತ್ತಿದ್ದ ಕಾರು ಶನಿವಾರ ಬಂಟ್ವಾಳದ ತಲಪಾಡಿ ಎಂಬಲ್ಲಿ ಅಪಘಾತಕ್ಕೊಳಗಾಗಿ ಮಾನಸ ಮೃತಪಟ್ಟಿದ್ದರು.

ಈ ಅಪಘಾತ ಒಂದು ಗಂಭೀರವಾದ ಪ್ರಕರಣ ಎಂದು ಪರಿಗಣಿಸಿದ ಎಸ್.ಪಿ.ಯತೀಶ್ ಅವರು ಖುದ್ದಾಗಿ ತಲಪಾಡಿಗೆ ಆಗಮಿಸಿ ಘಟನೆಗೆ ಕಾರಣಗಳ ಬಗ್ಗೆ ಮತ್ತು ಸಾಧ್ಯತೆಗಳ ಪ್ರಾಥಮಿಕ ಮಾಹಿತಿಗಳ ಕಲೆಹಾಕಿದ್ದಾರೆ. ಈ ಸಂದರ್ಭ ಇಲ್ಲಿನ ಬಂಟ್ವಾಳ ದ ಪೋಲೀಸರಿಂದ ಮಾಹಿತಿ ಪಡೆದುಕೊಂಡಿದ್ದಾರೆ.ಆರ್.ಟಿ.ಒ.ಗೆ ಪತ್ರ:

ಗಂಭೀರ ಪ್ರಕರಣವಾದ ಹಿನ್ನೆಲೆ ಘಟನಾ ಸ್ಥಳಕ್ಕೆ ಆಗಮಿಸಿದ್ದೆ. ರಸ್ತೆಯ ಸಮಸ್ಯೆಯಿಂದ ಅಪಘಾತ ಸಂಭವಿಸಿದೆಯಾ? ಅಥವಾ ಯಾವ ಕಾರಣಕ್ಕಾಗಿ ಅಪಘಾತ ನಡೆದಿರಬಹುದು ಎಂಬ ವಿಚಾರದ ಬಗ್ಗೆ ಮಾಹಿತಿ ಪಡೆಯುವ ಉದ್ದೇಶದಿಂದ ತಲಪಾಡಿ ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿದ್ದೇನೆ. ಜೊತೆಗೆ ಕೆಲವೊಂದು ಮಾಹಿತಿಗಾಗಿ ಮತ್ತು ಸಂದೇಹಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆರ್.ಟಿ.ಒ.ಇಲಾಖೆಗೆ ಪತ್ರ ಬರೆದು ಸ್ಪಷ್ಟವಾದ ಉತ್ತರ ತಿಳಿಯಲಾಗುತ್ತದೆ ಎಂದು ಎಸ್.ಪಿ.ಯತೀಶ್ ತಿಳಿಸಿದ್ದಾರೆ.

ಬಂಟ್ವಾಳ ಡಿವೈಎಸ್ಪಿ.ವಿಜಯಪ್ರಸಾದ್,ಪೋಲೀಸ್ ಇನ್ಸ್ ಪೆಕ್ಟರ್ ಗಳಾದ ಆನಂತಪದ್ಮನಾಭ, ಶಿವಕುಮಾರ್ ಎಸ್.ಐ.ಸುತೇಶ್ ಹಾಜರಿದ್ದರು