ಈ ಸುದ್ದಿ ತೆಗೆದುಕೊಳ್ಳುವುದು ಬೇಡ ...ದಶವಾರ ಗ್ರಾಪಂ ಅರಿವು ಕೇಂದ್ರದಲ್ಲಿ ಗುಬ್ಬಚ್ಚಿ ದಿನಾಚರಣೆ

| Published : Mar 23 2025, 01:31 AM IST

ಈ ಸುದ್ದಿ ತೆಗೆದುಕೊಳ್ಳುವುದು ಬೇಡ ...ದಶವಾರ ಗ್ರಾಪಂ ಅರಿವು ಕೇಂದ್ರದಲ್ಲಿ ಗುಬ್ಬಚ್ಚಿ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ತಾಲೂಕಿನ ದಶವಾರ ಗ್ರಾಮ ಪಂಚಾಯಿತಿ ಅರಿವು ಕೇಂದ್ರ ಗ್ರಂಥಾಲಯದಲ್ಲಿ ವಿಶ್ವ ಗುಬ್ಬಚ್ಚಿ ದಿನ ಅಂಗವಾಗಿ ಮಕ್ಕಳು ಪಕ್ಷಿಗಳಿಗೆ ಆಹಾರ ಮತ್ತು ನೀರು ಕೊಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.

ಚನ್ನಪಟ್ಟಣ: ತಾಲೂಕಿನ ದಶವಾರ ಗ್ರಾಮ ಪಂಚಾಯಿತಿ ಅರಿವು ಕೇಂದ್ರ ಗ್ರಂಥಾಲಯದಲ್ಲಿ ವಿಶ್ವ ಗುಬ್ಬಚ್ಚಿ ದಿನ ಅಂಗವಾಗಿ ಮಕ್ಕಳು ಪಕ್ಷಿಗಳಿಗೆ ಆಹಾರ ಮತ್ತು ನೀರು ಕೊಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳು ಗುಬ್ಬಚ್ಚಿ ಚಿತ್ರ ಬಿಡಿಸುವುದರ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.

ಈ ವೇಳೆ ಗ್ರಂಥಾಲಯ ಮೇಲ್ವಿಚಾರಕ ಡಿ ಸಿ.ಶಿವಲಿಂಗಯ್ಯ ಮಾತನಾಡಿ, ಗುಬ್ಬಚ್ಚಿಗಳು ನಮ್ಮ ಮನೆಯ ಸುತ್ತಲಿನ ಪರಿಸರದಲ್ಲಿ ಗೂಡು ಕಟ್ಟಿಕೊಂಡು ಚಿಲಿಪಿಲಿ ಶಬ್ದ ಮಾಡುವ ಸುಂದರ ಪಕ್ಷಿಗಳಾಗಿದ್ದು, ಪುಟಾಣಿ ಮಕ್ಕಳಿಗೆ ಇವು ತುಂಬಾ ಇಷ್ಟವಾಗುತ್ತವೆ. ಅಳಿವಿನಂಚಿನಲ್ಲಿರುವ ಇಂತಹ ಪಕ್ಷಿ ಸಂಕುಲ ರಕ್ಷಣೆ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಗ್ರಾಪಂ ಪಿಡಿಒ ಸಿದ್ದರಾಮ ಯರಗಲ್ ಮಕ್ಕಳಿಗೆ ಪ್ರೇರಣೆ ನೀಡಿ, ಗ್ರಂಥಾಲಯದಲ್ಲಿ ಮಕ್ಕಳಿಂದ ಗುಬ್ಬಚ್ಚಿ ಚಿತ್ರ ಬಿಡಿಸಿ, ಪಕ್ಷಿ ಪರಿಚಯಿಸಿ ಮಾತನಾಡಿ, ಸಿಎಂಸಿಎ ಸಂಸ್ಥೆಯ "ನನ್ನ ಒಳಿತಿಗಾಗಿ ಗ್ರಂಥಾಲಯ’ ಕಾರ್ಯಕ್ರಮದ ಪ್ರೇರಣೆಯಿಂದ ಮಕ್ಕಳು ನಿರಂತರವಾಗಿ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿರುವುದು. ಮಕ್ಕಳ ವ್ಯಕ್ತಿತ್ವ ಬೆಳವಣಿಗೆ ಹಾಗೂ ಜ್ಞಾನ ವಿಸ್ತಾರದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ. ಬೇಸಿಗೆ ರಜೆಯಲ್ಲೂ ಕೂಡ ಮಕ್ಕಳು ಗ್ರಂಥಾಲಯಕ್ಕೆ ನಿಯಮಿತವಾಗಿ ಭೇಟಿ ನೀಡುವ ಮೂಲಕ ಜ್ಞಾನ ಹಾಗೂ ಸಾಮಾನ್ಯ ಜ್ಞಾನ ಹೆಚ್ವಿಸಿಕೊಳ್ಳಲು ಹೆಚ್ಚಿನ ಒತ್ತು ನೀಡಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಲವಾರು ಮಕ್ಕಳು ಭಾಗವಹಿಸಿದ್ದರು.