ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಡುಪಿ ಘಟಕದಿಂದ ನವರಾತ್ರಿ ಪ್ರಯುಕ್ತ ಜಿಲ್ಲೆಯ ಸುತ್ತಮುತ್ತಲಿನ ಧಾರ್ಮಿಕ ಸ್ಥಳಗಳಿಗೆ ‘ದಸರಾ ದರ್ಶನಿ-2024’ ಎಂಬ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಅ.3ರಿಂದ ಅ.12ರ ವರೆಗೆ ಆಯೋಜಿಸಲಾಗುತ್ತಿದೆ.*ಪ್ಯಾಕೇಜ್ 1- ಪಂಚದುರ್ಗ ದರ್ಶನ:ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಬೆಳಗ್ಗೆ 7.30ಕ್ಕೆ ಬಸ್ ಹೊರಟು, 9ಕ್ಕೆ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನ, 10.30ಕ್ಕೆ ಕೊಲ್ಲೂರು ಮೂಕಾಂಬಿಕ ದೇವಾಸ್ಥಾನ, 11.30ಕ್ಕೆ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ, 1.30ಕ್ಕೆ ಕಮಲಶಿಲೆ ಬ್ರಾಹ್ಮಿದುರ್ಗಾಪರಮೇಶ್ವರಿ ದೇವಸ್ಥಾನ, ಅಲ್ಲಿ ಊಟದ ನಂತರ, ಮಧ್ಯಾಹ್ನ 3ಕ್ಕೆ ಹೊರಟು, 4.30ಕ್ಕೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಸಂಜೆ 5.30ಕ್ಕೆ ನೀಲಾವರ ಶ್ರೀ ಮಹಿಷ ಮರ್ದಿನಿ ದೇವಸ್ಥಾನಗಳ ದರ್ಶನ ಮಾಡಿ, ಸಂಜೆ 5.30ಕ್ಕೆ ಹೊರಟು, ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಸಂಜೆ 6.15 ತಲುಪಲಿದೆ.ಈ ಪ್ಯಾಕೇಜ್ ಒಟ್ಟು 223 ಕಿ.ಮೀ. ಇದ್ದು, ವಯಸ್ಕರಿಗೆ 400 ರು. ಹಾಗೂ ಮಕ್ಕಳಿಗೆ 350 ರು. ಟಿಕೇಟು ದರ ನಿಗದಿಪಡಿಸಲಾಗಿದೆ.* ಪ್ಯಾಕೇಜ್ 2- ಕ್ಷೇತ್ರ ದರ್ಶನ:
ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಬೆಳಗ್ಗೆ 8.30ಕ್ಕೆ ಹೊರಟು, 8.45ಕ್ಕೆ ಪುತ್ತೂರು ಭಗವತೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, 9.45ಕ್ಕೆ ಕೋಟ ಅಮೃತೇಶ್ವರಿ ದೇವಸ್ಥಾನ, 10.25ಕ್ಕೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ, 11.45ಕ್ಕೆ ಮರವಂತೆ ಬೀಚ್‌ಗೆ, ಮಧ್ಯಾಹ್ನ 1 ಗಂಟೆಗೆ ಮುರ್ಡೇಶ್ವರ ದೇವಸ್ಥಾನ, ಊಟದ ನಂತರ 2.30ಕ್ಕೆ ಬಸ್ ಹೊರಟು, 3 ಗಂಟೆಗೆ ಇಡಗುಂಜಿ ದೇವಸ್ಥಾನ, 3.50ಕ್ಕೆ ಅಪ್ಸರಕೊಂಡ ಜಲಪಾತ, 4.45ಕ್ಕೆ ಕಾಸರಕೋಡ್ ಇಕೋ ಬೀಚ್‌ಗೆ, ಅಲ್ಲಿಂದ ಹೊರಟು ರಾತ್ರಿ 8.30ಕ್ಕೆ ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಬಸ್ ತಲುಪಲಿದೆ.ಈ ಪ್ಯಾಕೇಜ್ ಒಟ್ಟು 281 ಕಿ.ಮೀ. ಕ್ರಮಿಸಲಿದ್ದು, ವಯಸ್ಕರಿಗೆ 500 ರು. ಹಾಗೂ ಮಕ್ಕಳಿಗೆ 400 ರು. ನಿಗದಿಪಡಿಸಲಾಗಿದೆ.ಆನ್ ಲೈನ್ ಬುಕ್ಕಿಂಕ್‌ಗಾಗಿ www.ksrtc.in ಮತ್ತು ಮುಂಗಡ ಬುಕ್ಕಿಂಗ್‌ಗಾಗಿ ಡಾ.ವಿ.ಎಸ್. ಆಚಾರ್ಯ ಬಸ್ ನಿಲ್ದಾಣ, ಉಡುಪಿ (ಮೊ.ನಂ: 9663266400) ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಕ.ರಾ.ರ.ಸಾ.ನಿಗಮದ ಉಡುಪಿ ಘಟಕ ವ್ಯವಸ್ಥಾಪಕರ ಕಚೇರಿ ಪ್ರಕಟಣೆ ತಿಳಿಸಿದೆ.