ಸ್ಥಳೀಯ ವಿಧಾನ ಸಭಾ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಶಿಕ್ಷಣ ಇಲಾಖೆಯವರು ಅವಶ್ಯಕತೆಗಳನ್ನು ತಿಳಿಸಿ ಅನುದಾನ ಒದಗಿಸುವೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.
ಕನ್ನಡಪ್ರಭ ವಾರ್ತೆ ದೇವದುರ್ಗಸ್ಥಳೀಯ ವಿಧಾನ ಸಭಾ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಶಿಕ್ಷಣ ಇಲಾಖೆಯವರು ಅವಶ್ಯಕತೆಗಳನ್ನು ತಿಳಿಸಿ ಅನುದಾನ ಒದಗಿಸುವೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.ಪಟ್ಟಣದ ಡಾನ್ ಬಾಸ್ಕೋ ಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮಕ್ಕಳಲ್ಲಿರು ಪ್ರತಿಭೆಗಳನ್ನು ಹೊರತರಲು ಇದೊಂದು ಉತ್ತಮ ವೇದಿಕೆಯಾಗಿದೆ. ಶಾಲಾ ಮಕ್ಕಳಲ್ಲಿ ಜಾತಿ-ಬೇಧ ಇರುವದಿಲ್ಲ.ತಾರತಮ್ಯ ಇರುವುದಿಲ್ಲ. ಮುಗ್ಧ ಮನಸ್ಸಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಉತ್ತಮ ಪ್ರಜೆಯನ್ನಾಗಿ ರೂಪಿಸುವ ಹೊಣೆ ಶಿಕ್ಷಕ ಬಂಧುಗಳ ಮೇಲಿದೆ.ತಾವು ಮಕ್ಕಳಿಗೆ ಎರಡನೇ ತಾಯಿ ಸ್ಥಾನದಲ್ಲಿದ್ದೀರಿ ಎಂದರು.ಕ್ಷೇತ್ರ ಶಿಕ್ಷಣಧಿಕಾರಿ ಮಲ್ಲಿಕಾರ್ಜುನ,ಚಂದ್ರಶೇಖರ ಭಂಡಾರಿ ಉಪನಿರ್ದೇಶಕರು(ಅಭಿವೃದ್ಧಿ ವಿಭಾಗ),ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಯ ಫಾದರ್ ಟೋಮಿ, ಅರಕೇರಾ ತಾಪಂ ಇಒ ಅಣ್ಣಾರಾವ್, ನೌಕರರ ಸಂಘದ ಅಧ್ಯಕ್ಷ ಹನುಮಂತ್ರಾಯ ಶಾಕೆ, ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳಾದ ವಿರುಪನಗೌಡ ನಾಗಡದಿನ್ನಿ, ನೇಮಣ್ಣ, ರಂಗನಾಥ ಸಿ.ಬಸವರಾಜ ಕಟ್ಟೀಮನಿ, ವಿಶ್ವನಾಥ ಮಾ.ಪಾಟೀಲ್, ಹೊನ್ನಪ್ಪ, ಮುಖಂಡರಾದ ಸಿದ್ದಣ್ಣ ಬಿ.ಗಣೇಕಲ್, ಶರಣಗೌಡ ಸುಂಕೇಶ್ವರಹಾಳ, ಮಂಜುನಾಥ ಮಾಪಳ್ಳಿ ಹಾಗೂ ಇತರರು ಇದ್ದರು. ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರ ಬಯಲಾಟ ಪ್ರದರ್ಶನ ಮನಸೂರೆಗೊಂಡಿತು.