ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು ಭೀಮನ ಅಮಾವಾಸ್ಯೆ ಅಂಗವಾಗಿ ಮಲೆ ಮಾದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆಯಲಿವೆ. ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಡೆಯುತ್ತಿರುವ ಭೀಮನ ಅಮಾವಾಸ್ಯೆ ಪೂಜಾ ಕಾರ್ಯಕ್ರಮಗಳು ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಆರಂಭಗೊಂಡು ಶುಕ್ರವಾರ ಎಣ್ಣೆಮಜ್ಜನ ಸೇವೆ, ಶನಿವಾರ ಬೆಳಗಿನ ಜಾವ 3ರಿಂದ ನಾಲ್ಕು ಗಂಟೆಯವರೆಗೆ ವಿಶೇಷ ಅಭಿಷೇಕ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿ, 4 ರಿಂದ 6ಗಂಟೆವರಗೆ ಸ್ವಾಮಿಗೆ ಮಹಾ ಮಂಗಳಾರತಿ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆದವು.ವಿಶೇಷ ಹೂ ತರಕಾರಿಗಳ ಅಲಂಕಾರ: ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಭೀಮನ ಅಮಾವಾಸ್ಯೆ ಹಾಗೂ ಶ್ರಾವಣ ಮಾಸದ ಕುಂಭಾಭಿಷೇಕ ಪೂಜಾ ಕಾರ್ಯಕ್ರಮಗಳ ಪ್ರಯುಕ್ತ ತಮಿಳುನಾಡಿನ ಹೊಸೂರು ಗ್ರಾಮದ ಉದ್ಯಮಿ ರಮೇಶ್ ಗೌಡ ಈ ಬಾರಿ ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ವಿಶೇಷವಾಗಿ ಆರು ಟನ್ ವಿವಿಧ ಬಗೆಯ ತರಕಾರಿ, ಐದು ಬಗೆಯ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಿದ್ದಾರೆ. ಕಳೆದ ಬಾರಿಯು ಇವರು ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಅಲಂಕಾರ ಮಾಡಿದ್ದರು. ಅದೇ ರೀತಿ ಈ ಬಾರಿ ಇನ್ನೂರ ಐವತ್ತಕ್ಕೂ ಹೆಚ್ಚು ಸಿಬ್ಬಂದಿಗ ಬಳಸಿಕೊಂಡು ಮಲೆ ಮಾದೇಶ್ವರ ಬೆಟ್ಟದಲ್ಲಿ ವಿಶೇಷವಾಗಿ ತೆಂಗಿನಕಾಯಿ, ಕುಂಬಳಕಾಯಿ ಎಲ್ಲಾ ತರಕಾರಿಗಳ ವಿವಿಧ ಬಗೆಯ ಹೂಗಳಿಂದ ವಿಶೇಷ ಅಲಂಕಾರವನ್ನು ದೇವಾಲಯ ಪ್ರಾರಂಭ ಗೋಪುರ ಸೇರಿದಂತೆ ಸುತ್ತಲೂ ವಿಶೇಷ ಅಲಂಕಾರವನ್ನು ಮಾಡಿದ್ದಾರೆ.ಸಕಲಸಿದ್ಧತೆ: ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಶೇಷವಾಗಿ ಭೀಮನ ಅಮಾವಾಸ್ಯೆಗೆ ರಾಜ್ಯ ಹಾಗೂ ತಮಿಳುನಾಡಿನಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ಮಾದಪ್ಪನ ದರ್ಶನ ಪಡೆಯಲು ಬರುವುದರಿಂದ ವಿಶೇಷ ಸರತಿ ಸಾಲು ದೇವರ ದರ್ಶನ ಪಡೆಯಲು ಜೊತೆಗೆ ದಾಸೋಹ ವಿಶೇಷ ದಾಸೋಹ ವ್ಯವಸ್ಥೆ ಶೌಚಾಲಯಗಳ ವ್ಯವಸ್ಥೆ ಕುಡಿಯುವ ನೀರಿನ ಸಕಲ ಸೌಕರ್ಯಗಳೊಂದಿಗೆ ಸಿದ್ಧತೆಯನ್ನು ಸಹ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಮತ್ತು ಉಪ ಕಾರ್ಯದರ್ಶಿ, ಚಂದ್ರಶೇಖರ್ ಸೇರಿದಂತೆ ಅಧಿಕಾರಿಗಳು ಸಿಬ್ಬಂದಿ ವರ್ಗದವರು ನಿರಂತರವಾಗಿ ಅಮಾವಾಸ್ಯೆ ಪೂಜೆಗೆ ಸಕಲ ಸಿದ್ಧತೆಯನ್ನು ಕೈಗೊಂಡಿದ್ದಾರೆ.ವಿಶೇಷ ವಿದ್ಯುತ್ ದೀಪಾಲಂಕಾರ: ಭೀಮನ ಅಮಾವಾಸ್ಯೆ ಹಾಗೂ ಶ್ರಾವಣ ಮಾಸದ ಪ್ರಯುಕ್ತ ನಡೆಯುವ ಕುಂಭಾಭಿಷೇಕ ಮಹೋತ್ಸವ ಪೂಜಾ ಕಾರ್ಯಕ್ರಮಗಳ ಅಂಗವಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವಾಲಯ ಸೇರಿದಂತೆ ಸುತ್ತಮುತ್ತಲಿನ ಸ್ಥಳಗಳಲ್ಲಿ ವಿಶೇಷ ವಿದ್ಯುತ್ ದೀಪ ಅಲಂಕಾರ ಸಹ ಮಾಡಲಾಗಿದೆ. ಜೊತೆಗೆ ವಿವಿಧ ಉತ್ಸವಗಳು ಸಹ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ನಡೆಯುತ್ತಿದೆ.ಹಿರಿಯ ಶ್ರೀಗಳಿಂದ ಮಾದಪ್ಪನ ದರ್ಶನ: ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ ಗುರುಸ್ವಾಮಿಗಳು ಹಲವಾರು ದಿನ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದ ಕಾರಣ ಗುಣಮುಖರಾಗಿ ಶುಕ್ರವಾರ ಜನ್ಮದಿನ ಆಚರಿಸಿಕೊಳ್ಳುವ ಮೂಲಕ ಮಲೆ ಮಾದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು.