ಸಾರಾಂಶ
ಮಹಿಳೆಯರಿಂದ ಗಂಗೋದಕ ತರುವುದು, ಅಷ್ಟೋತ್ತರ ಬಿಲ್ವಾರ್ಚನೆ, ಸಹಸ್ರನಾಮ, ಹೂವಿನ ಅಲಂಕಾರ, ಮಹಾಮಂಗಳಾರತಿ ಅಲ್ಲದೆ ಆಗಮಿಸಿದ ಭಕ್ತರಿಗೆ ಗ್ರಾಮದ ದಿವಂಗತ ದೊಡ್ಡಣ್ಣ ಶೆಟ್ಟರ ಕುಟುಂಬ ವರ್ಗದವರಿಂದ ಅನ್ನಸಂತರ್ಪಣೆ ನಡೆಯಿತು. ಪೂಜಾದಿ ಕೈಂಕರ್ಯದಲ್ಲಿ ದಿವಂಗತ ದೊಡ್ಡಣ್ಣ ಶೆಟ್ಟರ ಮಕ್ಕಳು ಮೊಮ್ಮಕ್ಕಳು, ಬಂಧುಬಾಂಧವರು, ಶ್ರೀ ವೀರಭದ್ರೇಶ್ವರ ಸ್ವಾಮಿ ಭಕ್ತಾದಿಗಳು ಆಗಮಿಸಿದ್ದರು. ಗಂಗೋದಕ ತರುವಲ್ಲಿ ದಾಕ್ಷಾಯಣಿ ಮಹದೇವ್, ಪೂರ್ಣಿಮ ವೀರೇಶ್, ಅನಿತಾ, ಕಲಾವತಿ ಪ್ರಭುದೇವ್, ನಂದಿನಿ ಪರಮೇಶ್, ಆಶಾಸತೀಶ್, ಸ್ಮಿತಾಬಾಬು ಹೇಮ ಸೇರಿ ನೂರಾರು ಭಕ್ತರು ಆಗಮಿಸಿದ್ದರು.
ಬಸವಾಪಟ್ಟಣ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಬಸವಾಪಟ್ಟಣ ಗ್ರಾಮದ ಕೋಟೆಬೀದಿಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ಜರುಗಿದವು.
ಮಹಿಳೆಯರಿಂದ ಗಂಗೋದಕ ತರುವುದು, ಅಷ್ಟೋತ್ತರ ಬಿಲ್ವಾರ್ಚನೆ, ಸಹಸ್ರನಾಮ, ಹೂವಿನ ಅಲಂಕಾರ, ಮಹಾಮಂಗಳಾರತಿ ಅಲ್ಲದೆ ಆಗಮಿಸಿದ ಭಕ್ತರಿಗೆ ಗ್ರಾಮದ ದಿವಂಗತ ದೊಡ್ಡಣ್ಣ ಶೆಟ್ಟರ ಕುಟುಂಬ ವರ್ಗದವರಿಂದ ಅನ್ನಸಂತರ್ಪಣೆ ನಡೆಯಿತು. ಪೂಜಾದಿ ಕೈಂಕರ್ಯದಲ್ಲಿ ದಿವಂಗತ ದೊಡ್ಡಣ್ಣ ಶೆಟ್ಟರ ಮಕ್ಕಳು ಮೊಮ್ಮಕ್ಕಳು, ಬಂಧುಬಾಂಧವರು, ಶ್ರೀ ವೀರಭದ್ರೇಶ್ವರ ಸ್ವಾಮಿ ಭಕ್ತಾದಿಗಳು ಆಗಮಿಸಿದ್ದರು. ಗಂಗೋದಕ ತರುವಲ್ಲಿ ದಾಕ್ಷಾಯಣಿ ಮಹದೇವ್, ಪೂರ್ಣಿಮ ವೀರೇಶ್, ಅನಿತಾ, ಕಲಾವತಿ ಪ್ರಭುದೇವ್, ನಂದಿನಿ ಪರಮೇಶ್, ಆಶಾಸತೀಶ್, ಸ್ಮಿತಾಬಾಬು ಹೇಮ ಸೇರಿ ನೂರಾರು ಭಕ್ತರು ಆಗಮಿಸಿದ್ದರು.ಅರ್ಚಕರಾದ ನಾಗರಾಜು ಶಾಸ್ತ್ರಿಗಳು ಪೂಜೆ ನೆರೆವೇರಿಸಿದರು. ದಾಸೋಹ ಸಂಘದ ಬಿ ಪಿ ಮಹದೇವ್ ಪಾಲಾಕ್ಷ, ಪ್ರಮೋದ್, ಮೋಹನ್, ಮಂಜುನಾಥ್ ಇತರರು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))