ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಅರಮನೆ ಆವರಣದಲ್ಲಿನ ಶ್ರೀ ತ್ರಿನೇಶ್ವರ ದೇವಸ್ಥಾನದ ಶಿವಲಿಂಗಕ್ಕೆ ಬುಧವಾರ ಶಿವರಾತ್ರಿ ಅಂಗವಾಗಿ ಚಿನ್ನದ ಕೊಳಗ ಧರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.ಸಾವಿರಾರು ಮಂದಿ ಭಕ್ತರು ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು. ಅರಮನೆಯ ಖಜಾನೆಯಲ್ಲಿದ್ದ 11 ಕೆಜಿ ತೂಕದ ಚಿನ್ನದ ಕೊಳಗವನ್ನು ಶಿವಲಿಂಗಕ್ಕೆ ಧರಿಸಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.ಚಿನ್ನದ ಕೊಳಗ ಧರಿಸಿದ್ದ ಶಿವಲಿಂಗ ನೋಡಲು ಭಕ್ತರು ಮುಗಿಬಿದ್ದರು. ಹಸನ್ಮುಖಿಯಾದ ಲಿಂಗದ ಕೊಳಗವನ್ನು ನೋಡಿ ಭಕ್ತರು ಕಣ್ತುಂಬಿಕೊಂಡರು.ಅರಮನೆ ಆವರಣ, ದಕ್ಷಿಣ ದ್ವಾರ, ಕಾಡಾ ಕಚೇರಿಯ ಸುತ್ತಮುತ್ತೆಲ್ಲ ವಾಹನ ನಿಲ್ಲಿಸಿದ ಸಾರ್ವಜನಿಕರು ಹಾಗೂ ಭಕ್ತರು ಸಾಲುಗಟ್ಟಿನಿಂತು ತ್ರಿನೇಶ್ವರನ ದರ್ಶನ ಪಡೆದರು.1952ರಲ್ಲಿ ಕೊನೆಯ ಅರಸು ಶ್ರೀ ಜಯಚಾಮರಾಜ ಒಡೆಯರ್ ಅವರು ಈ ಚಿನ್ನದ ಕೊಳಗವನ್ನು ದೇವಸ್ಥಾನಕ್ಕೆ ಕೊಡುಗೆ ನೀಡಿದ್ದರು. ಬುಧವಾರ ಬೆಳಗ್ಗೆ ಅಭಿಷೇಕ ನೆರವೇರಿಸಿ, ಪೂಜೆ ಸಲ್ಲಿಸಿದ ಬಳಿಕ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಯದುವೀರ್ ಭೇಟಿಸಂಸದ ಹಾಗೂ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಪತ್ನಿ ತ್ರಿಷಿಕಾ ಒಡೆಯರ್, ಪುತ್ರ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಅವರೊಡನೆ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನಪಡೆದು, ವಿಶೇಷ ಪೂಜೆ ಸಲ್ಲಿಸಿದರು.
-- ಬಾಕ್ಸ್--ಶುಭ ಕೋರಿದ ಯದುವೀರ್ಫೋಟೋ- 26ಎಂವೈಎಸ್ 36ಕನ್ನಡಪ್ರಭ ವಾರ್ತೆ ಮೈಸೂರುಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ನಾಡಿನ ಸಮಸ್ತ ಜನತೆಗೆ ಶಿವರಾತ್ರಿ ಹಬ್ಬದ ಶುಭಾಶಯ ಕೋರಿದರು. ನಗರದ ಅರಮನೆ ಆವರಣದಲ್ಲಿನ ಶ್ರೀ ತ್ರಿನೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಶಿವರಾತ್ರಿ ಹಿನ್ನೆಲೆಯಲ್ಲಿ ಇಂದು ತ್ರಿನೇಶ್ವರಸ್ವಾಮಿಯ ದರ್ಶನ ಪಡೆದಿದ್ದೇನೆ. ಅರಮನೆಯಲ್ಲೂ ಶಿವನ ಪೂಜೆ ನಡೆಯತ್ತದೆ. ನಾನು ಪ್ರತಿ ವರ್ಷದಂತೆ ಇಲ್ಲಿಗೆ ಭೇಟಿ ನೀಡಿದ್ದೇನೆ. ಎಲ್ಲರಿಗೂ ಒಳ್ಳೆದಾಗಲಿ. ತಾಯಿ ಚಾಮುಂಡೇಶ್ವರಿ ಆಶೀರ್ವಾದಿಂದ ಎರಡನೇ ಮಗುವಿಗೆ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂದು ನಾಮಕರಣ ಮಾಡಲಾಗಿದೆ. ಎಲ್ಲರ ಪ್ರೀತಿ ಹಾರೈಕೆ ಇರಲಿ ಎಂದು ಆಶಿಸಿದರು.