ಸಾರಾಂಶ
- ಉದ್ಯಮಿ ಎಸ್.ಎಸ್.ಗಣೇಶ್ ಸೇರಿದಂತೆ ಭಕ್ತರಿಂದ ಬಾಬಾ ಮೂರ್ತಿಗೆ ಅಭಿಷೇಕ - - -
ಕನ್ನಡಪ್ರಭ ವಾರ್ತೆ, ದಾವಣಗೆರೆಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ಭಾನುವಾರ ನಗರದ ವಿವಿಧೆಡೆ ಇರುವ ಸಾಯಿಬಾಬಾ ಮಂದಿರಗಳು ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು.
ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಸಾಯಿ ಮಂದಿರದಲ್ಲಿ ಬಾಬಾ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ, ಪೂಜೆ ನೆರವೇರಿಸಲಾಗಿತ್ತು. ಭಕ್ತರು ಮುಂಜಾನೆಯಿಂದಲೇ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆಯುತ್ತಿದ್ದರು. ಉದ್ಯಮಿ ಎಸ್.ಎಸ್.ಗಣೇಶ್ ದಂಪತಿ ಸೇರಿದಂತೆ ಸಾವಿರಾರು ಜನರು ಭೇಟಿ ನೀಡಿ, ಸಾಯಿ ಬಾಬಾ ದರ್ಶನ ಪಡೆದು ಅಭಿಷೇಕ ನೆರವೇರಿಸಿದರು.ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಹಾಗೂ ಸಿದ್ಧ ಸಮಾಧಿ ಯೋಗ ದಾವಣಗೆರೆ ಆಶ್ರಯದಲ್ಲಿ ನಗರದ ಪಿ.ಬಿ. ರಸ್ತೆಯ ಗೀತಾ ಮಂದಿರದಲ್ಲಿ ಗುರುಪೂರ್ಣಿಮಾ ಸಮಾರಂಭ ನಡೆಯಿತು. ಜಯನಗರದ ಶ್ರೀ ಸಾಯಿ ಮಂದಿರದಲ್ಲಿ ದೇವಸ್ಥಾನದ ಸೇವಾ ಟ್ರಸ್ಟ್ ವತಿಯಿಂದ ಗುರುಪೂರ್ಣಿಮಾ ಪ್ರಯುಕ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮುಂಜಾನೆಯ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಸೂರ್ಯನಾರಾಯಣ ಸ್ವಾಮೀಜಿ ನೇತೃತ್ವದಲ್ಲಿ ಗಣಹೋಮ ಹಾಗೂ ಗುರುಹೋಮ, ಕ್ಷೀರಾಭಿಷೇಕ, ಬೆಳಗ್ಗೆಯಿಂದ ಶ್ರೀ ಸಾಯಿ ಸತ್ಯನಾರಾಯಣ ಹಾಗೂ ನವಗ್ರಹ ಪೂಜೆ. ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.ಜಯದೇವ ವೃತ್ತದ ಶಂಕರ ಮಠದಲ್ಲಿ ಶ್ರೀ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಸಾಮೂಹಿಕ ಶ್ರೀ ಗಾಯತ್ರಿ ಪೂಜೆಯನ್ನು, ದತ್ತಾತ್ರೇಯ ದೇವಸ್ಥಾನದಲ್ಲಿ ಗುರುಪೂರ್ಣಿಮೆ ನಿಮಿತ್ತ 108 ಶ್ರೀ ಸತ್ಯದತ್ತ ವೃತ ಮಹೋತ್ಸವವು ಶ್ರದ್ಧಾ-ಭಕ್ತಿಗಳಿಂದ ನೆರವೇರಿತು.
- - - -21ಕೆಡಿವಿಜಿ37ಃ:ದಾವಣಗೆರೆಯಲ್ಲಿ ಗುರುಪೂರ್ಣಿಮೆ ಅಂಗವಾಗಿ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸ್ವಾಮಿ ಮೂರ್ತಿಗೆ ವಿಶೇಷ ಅಲಂಕಾರ ನೆರವೇರಿಸಿ, ಪೂಜಿಸಲಾಯಿತು.
-21ಕೆಡಿವಿಜಿ38ಃ:ದಾವಣಗೆರೆಯಲ್ಲಿ ಗುರುಪೂರ್ಣಿಮೆ ಅಂಗವಾಗಿ ಸಾಯಿ ಮಂದಿರದಲ್ಲಿ ಉದ್ಯಮಿ ಎಸ್.ಎಸ್. ಗಣೇಶ್ ದಂಪತಿ ಸ್ವಾಮಿಗೆ ಅಭಿಷೇಕ ನೆರವೇರಿಸಿದರು.
-21ಕೆಡಿವಿಜಿ39ಃ:ದಾವಣಗೆರೆಯಲ್ಲಿ ಗುರುಪೂರ್ಣಿಮೆ ಅಂಗವಾಗಿ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಉದ್ಯಮಿ ಎಸ್.ಎಸ್.ಗಣೇಶ್ ದಂಪತಿ ಸಾಯಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. -21ಕೆಡಿವಿಜಿ40ಃ:
ದಾವಣಗೆರೆಯಲ್ಲಿ ಗುರುಪೂರ್ಣಿಮೆ ಅಂಗವಾಗಿ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ನೆರವೇರಿಸಲಾಯಿತು.