ಮಹಾಗಣಪತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ ನಾಳೆ

| Published : Mar 07 2024, 01:48 AM IST

ಸಾರಾಂಶ

ರಾತ್ರಿ 9.15ಕ್ಕೆ ಎರಡನೇ ಯಾಮದ ಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಮಧ್ಯರಾತ್ರಿ 12.15ಕ್ಕೆ ಮೂರನೇ ಯಾಮದ ಪೂಜೆ ಪಂಚಾಮೃತ ಅಭಿಷೇಕ, ರುದ್ರಾಷೇಕ, ಮಾ. 9ರ ಬೆಳಗಿನ ಜಾವ 4.30ಕ್ಕೆ ನಾಲ್ಕನೇ ಯಾಮದ ಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಕ, ವಿಶೇಷ ಶಾಲ್ಯಾನ್ನ ಅಭಿಷೇಕ ಇರುತ್ತದೆ. ಬೆಳಗ್ಗೆ 7ಕ್ಕೆ ವಿಶೇಷ ಪ್ರಾಕಾರೋತ್ಸವ, 8ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗವಾಗಲಿದೆ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಬೃಂದಾವನ ಬಡಾವಣೆಯಲ್ಲಿರುವ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮಾ. 8 ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗುವುದು ಎಂದು ದೇವಸ್ಥಾನದ ಅಧ್ಯಕ್ಷರು, ವ್ಯವಸ್ಥಾಪಕರು ತಿಳಿಸಿದ್ದಾರೆ.

ಅಂದು ಬೆಳಗ್ಗೆ ಶ್ರೀ ಓಂಕಾರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಏರ್ಪಡಿಸಿದೆ. ಬೆಳಗ್ಗೆ 8.30ಕ್ಕೆ ಶಿವನಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, 10.30ಕ್ಕೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗವಾಗಲಿದೆ. ಸಂಜೆ 6.30ಕ್ಕೆ ಪ್ರಥಮ ಯಾಮದ ಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, 8.30ಕ್ಕೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗವಾಗಲಿದೆ.

ರಾತ್ರಿ 9.15ಕ್ಕೆ ಎರಡನೇ ಯಾಮದ ಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಮಧ್ಯರಾತ್ರಿ 12.15ಕ್ಕೆ ಮೂರನೇ ಯಾಮದ ಪೂಜೆ ಪಂಚಾಮೃತ ಅಭಿಷೇಕ, ರುದ್ರಾಷೇಕ, ಮಾ. 9ರ ಬೆಳಗಿನ ಜಾವ 4.30ಕ್ಕೆ ನಾಲ್ಕನೇ ಯಾಮದ ಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಕ, ವಿಶೇಷ ಶಾಲ್ಯಾನ್ನ ಅಭಿಷೇಕ ಇರುತ್ತದೆ. ಬೆಳಗ್ಗೆ 7ಕ್ಕೆ ವಿಶೇಷ ಪ್ರಾಕಾರೋತ್ಸವ, 8ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗವಾಗಲಿದೆ ಅವರು ತಿಳಿಸಿದ್ದಾರೆ.

------

ಶ್ರೀ ಸದ್ಗುರು ಸೇವಾ ಟ್ರಸ್ಟ್ ನಲ್ಲಿ ಮಹಾಶಿವರಾತ್ರಿ ಆಚರಣೆ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಬೃಂದಾವನ ಬಡಾವಣೆಯಲ್ಲಿ 1ನೇ ಹಂತದಲ್ಲಿರುವ ಶ್ರೀ ಸದ್ಗುರು ಸೇವಾ ಟ್ರಸ್ಟ್ ನಲ್ಲಿ ಮಾ. 8 ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗುವುದು ಎಂದು ಟ್ರಸ್ಟ್ ನ ರಾಘವೇಂದ್ರ ಶಾಸ್ತ್ರೀ ಹಾಗೂ ಸಚಿನ್ ಸವಿತ್ರು ಶರ್ಮ ತಿಳಿಸಿದ್ದಾರೆ.

ಅಂದು ಸಂಜೆ 6ಕ್ಕೆ ಗಣಪತಿ ಪೂಜೆ, ಮಹಸಂಕಲ್ಪ, ಪಂಚಾಮೃತ ಅಭಿಷೇಕ ಮತ್ತು ರುದ್ರಾಭೇಷಕ, 6 ರಿಂದ 9ರವರೆಗೆ 1ನೇ ಯಾಮ ನಡೆಯಲಿದೆ. ರಾತ್ರಿ 9 ರಿಂದ ರಾತ್ರಿ 12ರವರೆಗೆ 2ನೇ ಯಾಮ, 12 ರಿಂದ ಮಧ್ಯರಾತ್ರಿ 3ರವರೆಗೆ 3ನೇ ಯಾಮ, ಮಾ. 9ರ ಬೆಳಗಿನ ಜಾವ 3 ರಿಂದ 6ರವರೆಗೆ 4ನೇ ಯಾಮ ಅಭಿಷೇಕ ನೆರವೇರಲಿದೆ.

ಮಾ. 9ರ ಬೆಳಗ್ಗೆ 9ಕ್ಕೆ ಹೋಮ ಪ್ರಾರಂಭ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ಮಹಾ ಪ್ರಸಾದ ವಿನಿಯೋಗವಾಗಲಿದೆ ಎಂದು ಅವರು ತಿಳಿಸಿದ್ದಾರೆ.