ದಾಬಸ್‍ಪೇಟೆ: ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡೆಗಳು ಪೂರಕ ಎಂದು ಶಾಸಕ ಶ್ರೀನಿವಾಸ್ ಹೇಳಿದರು

ದಾಬಸ್‍ಪೇಟೆ: ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡೆಗಳು ಪೂರಕ ಎಂದು ಶಾಸಕ ಶ್ರೀನಿವಾಸ್ ಹೇಳಿದರು. ಸೋಲೂರಿನ ಸಂತ ಜೋಸೆಫ್ ದೇವಾಲಯದಲ್ಲಿ ಫಾದರ್ ಮಿನಿಯಲ್ ಹಾಗೂ ಫಾದರ್ ಪೆನ್ವಿನ್ ಸ್ಮರಣಾರ್ಥ ಆಯೋಜಿಸಿದ್ದ ಹೋಬಳಿ ಮಟ್ಟದ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಕರು ಮೊಬೈಲ್ ಬಳಕೆಯಿಂದ ದೈಹಿಕ-ಮಾನಸಿಕವಾಗಿ ದುರ್ಬಲರಾಗುತ್ತಿದ್ದಾರೆ. ಇವುಗಳಿಂದ ಹೊರ ಬರಲು ಕ್ರೀಡೆಗಳು ಪೂರಕ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರುದ್ರಶರ್ಮಾ, ಗ್ರಾಪಂ ಮಾಜಿ ಅಧ್ಯಕ್ಷ ಗಂಗರಂಗಯ್ಯ, ಮುಖಂಡರಾದ ಕೆ.ಕೆ.ಕೃಷ್ಣಪ್ಪ, ಸಿ.ಎಂ.ಗೌಡ ಇತರರು ಉಪಸ್ಥಿತರಿದ್ದರು.