ಶಿಕ್ಷಣ ಎಷ್ಟು ಮುಖ್ಯವೋ ಕ್ರೀಡೆಗಳೂ ಅಷ್ಟೇ ಮುಖ್ಯವಾಗಿವೆ. ಊಟ, ಆಟ, ಪಾಠಗಳನ್ನು ದಿನನಿತ್ಯ ಚಟುವಟಿಕೆಯಲ್ಲಿ ಅಳವಡಿಸಿಕೊಂಡರೆ ಮಕ್ಕಳ ಭವಿಷ್ಯ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದು ನ್ಯಾಮತಿ ಮತ್ತು ಹೊನ್ನಾಳಿ ಕ್ಷೇತ್ರ ಶಾಸಕ ಡಿ.ಜಿ.ಶಾಂತನಗೌಡ ಹೇಳಿದ್ದಾರೆ.

- ಶಿವಮೊಗ್ಗ ವಲಯಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ಶಿಕ್ಷಣ ಎಷ್ಟು ಮುಖ್ಯವೋ ಕ್ರೀಡೆಗಳೂ ಅಷ್ಟೇ ಮುಖ್ಯವಾಗಿವೆ. ಊಟ, ಆಟ, ಪಾಠಗಳನ್ನು ದಿನನಿತ್ಯ ಚಟುವಟಿಕೆಯಲ್ಲಿ ಅಳವಡಿಸಿಕೊಂಡರೆ ಮಕ್ಕಳ ಭವಿಷ್ಯ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದು ನ್ಯಾಮತಿ ಮತ್ತು ಹೊನ್ನಾಳಿ ಕ್ಷೇತ್ರ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ದಾನಿಹಳ್ಳಿ ಶ್ರೀ ತರಳಬಾಳು ಜಗದ್ಗುರು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶನಿವಾರ 2025-26ನೇ ಸಾಲಿನ ಶಿವಮೊಗ್ಗ ವಲಯಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ತರಳಬಾಳು ಕ್ರೀಡಾಕೂಟ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಚೆನ್ನಾಗಿ ಓದಿ, ವಿದ್ಯೆ ಕಲಿತು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಆ ಮೂಲಕ ಗೆಲವು ಸಾಧಿಸಿ ರಾಜ್ಯ, ಅಂತರ ರಾಜ್ಯಮಟ್ಟಕ್ಕೆ ಹೋಗಬೇಕು. ನಿಮ್ಮ ಭವಿಷ್ಯ ಉಜ್ವಲವಾಗಲಿದೆ ಎಂದರು.

ಶಿವಮೊಗ್ಗ ಪ್ರಾದೇಶಿಕ ಅಧಿಕಾರಿ ಪಿ.ವಿ.ತಿಪ್ಪೇಸ್ವಾಮಿ ಮಾತನಾಡಿ, ಇಲ್ಲಿ ಭಾವೈಕ್ಯತೆಯಿಂದ ಕೂಡಿದ ಕ್ರೀಡಾಕೂಟವಾಗಿದೆ. ನೀವೆಲ್ಲಾ ಅತ್ಯುತ್ತಮವಾಗಿ ಆಟವಾಡಿ ತರಳಬಾಳು ಸಿರಿಗೆರೆ ಸಂಸ್ಥೆಗೆ ಹೆಸರು ತನ್ನಿರಿ ಎಂದರು.

ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಡಿ.ತೀರ್ಥಲಿಂಗಪ್ಪ ವಹಿಸಿ ಮಾತನಾಡಿದರು. ನ್ಯಾಮತಿ ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಜಿ.ಶಿವಪ್ಪ ಕ್ರೀಡೆಯ ಧ್ವಜಾರೋಹಣ ನೆರವೇರಿಸಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ಪಿ.ಜಿ. ಈಶ್ವರಪ್ಪಗೌಡ ಅವರು ವಿದ್ಯಾರ್ಥಿ ಸಾಕ್ಷಿ ಅವರಿಂದ ಕ್ರೀಡಾಜ್ಯೋತಿ ಸ್ವೀಕರಿಸಿದರು.

ದೈಹಿಕ ಶಿಕ್ಷಣಾಧಿಕಾರಿ ಕೆ.ಟಿ.ನಿಂಗಪ್ಪ, ಚಂದ್ರಪ್ಪ, ಜಿ.ಮಲ್ಲೇಶಪ್ಪ, ಎಸ್‌.ಆರ್‌. ಬಸವರಾಜಪ್ಪ, ದಾನಿಹಳ್ಳಿ ಹಾಲೇಶಪ್ಪ, ಡಿ.ಪಂಚಪ್ಪ ಮತ್ತಿತರರಿದ್ದರು. ವಿದ್ಯಾರ್ಥಿನಿ ಸಂದ್ಯಾ ಸಂಗಡಿಗರು ಪ್ರಾರ್ಥಿಸಿದರು. ಸಹಶಿಕ್ಷಕಿ ವಿದ್ಯಾ ನಿರೂಪಿಸಿ, ಮುಖ್ಯ ಉಪಾಧ್ಯಾಯ ಹಾಲೇಶ್‌ ಸ್ವಾಗತಿಸಿ, ವಂದಿಸಿದರು.

- - -

(-ಫೋಟೋ:)