ಸಾರಾಂಶ
ರಾಮನಗರ: ಕ್ರೀಡೆಯಿಂದ ಆರೋಗ್ಯವಾಗಿರುವುದರ ಜತೆಗೆ ಕ್ರಿಯಾಶೀಲತೆಯಿಂದ ಇರಬಹುದು ಎಂದು ರಾಯಲ್ಸ್ ತಾಯಕೊಂಡೋ ಅಕಾಡೆಮಿಯ ಸ್ಥಾಪಕ ಎನ್.ಎಸ್.ಕಾರ್ತೀಕ್ ಅಭಿಪ್ರಾಯಪಟ್ಟರು.
ನಗರದ ಅರ್ಚಕರಹಳ್ಳಿ ಬಳಿ ಇರುವ ಬೇತೆಲೆ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿದ ಅವರು, ವಿದ್ಯಾರ್ಥಿಗಳು ಪಠ್ಯದಷ್ಟೆ ಮಹತ್ವವನ್ನು ಕ್ರೀಡೆಗೂ ನೀಡಬೇಕು, ಕ್ರೀಡೆಯಲ್ಲೂ ಬದುಕನ್ನು ರೂಪಿಸಿಕೊಳ್ಳಬಹುದು. ಅಲ್ಲದೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ನಾಯಕತ್ವ ಗುಣ ಬೆಳೆಸಿಕೊಳ್ಳಬಹುದು ಎಂದು ಹೇಳಿದರುಸಿಆರ್ಪಿಎಫ್ ಮತ್ತು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ದೀರ್ಘ ಸೇವೆ ಸಲ್ಲಿಸಿರುವ ಎಸ್.ಎಸ್.ವಿ.ಗೌಡ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಗುರಿಯನ್ನು ಸಾಧಿಸಲು ಶಿಸ್ತು ಮತ್ತು ದೇಶಪ್ರೇಮ ಹೊಂದಿರಬೇಕು, ಹಾಗೂ ಸದೃಢವಾದ ದೇಹದಲ್ಲಿ ಸಬಲ ಮನಸ್ಸಿರುತ್ತದೆ, ಕ್ರೀಡೆಯಿಂದ ಉತ್ತಮ ದೇಹದಾರ್ಢ್ಯವನ್ನು ಹೊಂದಬಹುದು ಅಲ್ಲದೆ ಲವಲವಿಕೆಯಿಂದ ಇರಬಹುದು ಎಂದರು.
ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಡಾ.ಟಿ.ಮಹೇಂದ್ರ ಕುಮಾರ್ ಮಾತನಾಡಿ , ಗೆಲುವನ್ನು ಸಹಜವಾಗಿ ಸ್ವೀಕರಿಸುವ ಮತ್ತು ಸೋಲನ್ನು ಗೌರವಯುತವಾಗಿ ಎದುರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ಹಾಗೂ ವಿದ್ಯಾರ್ಥಿಗಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಬೇತೆಲ್ ಶಾಲೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.ಬೇತೆಲ್ ಶಾಲೆಯ ಪ್ರಾಂಶುಪಾಲಾರದ ರೀಟಾ ಮನು ಮಾತನಾಡಿ, ವಾರ್ಷಿಕ ಶಾಲಾ ಕ್ರೀಡಾ ಹಬ್ಬವು ವಿದ್ಯಾರ್ಥಿಗಳಿಗೆ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಒದಗಿಸಲು ಮತ್ತು ಸ್ಪೋರ್ಟ್ಸ್ ಮ್ಯಾನ್''''''''ಶಿಪ್ ಅನ್ನು ಉತ್ತೇಜಿಸಲು ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸುವ ಒಂದು ವಾರ್ಷಿಕ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮಗಳು ಕ್ರೀಡೆಯ ಮಹತ್ವದ ಬಗ್ಗೆ ಅರಿವು ಮೂಡಿಸುವುದಲ್ಲದೆ, ತರಗತಿಗಳ ಹೊರಗೆ ಶಿಸ್ತು, ತಂಡದ ಕೆಲಸ ಮತ್ತು ಆರೋಗ್ಯಕರ ಸ್ಪರ್ಧೆಯ ಮನೋಭಾವವನ್ನು ಕಲಿಸುತ್ತವೆ ಎಂದರು.
ವಿವಿಧ ವಯೋಮಾನದ ವಿದ್ಯಾರ್ಥಿಗಳಿಗೆ ವಾಲಿಬಾಲ್, ರನ್ನಿಂಗ್ ರೇಸ್, ಡ್ಯಾನ್ಸ್, ಪಿರಮಿಡ್, ಕೊಕೋ, ಶಾರ್ಟ್ ಪುಟ್, ಥ್ರೋ ಬಾಲ್ ಸ್ಪರ್ಧೆ ನಡೆಸಲಾಯಿತು. ಈ ವೇಳೆ ಶಾಲೆಯ ಚೆರ್ಮನ್ ಮನೋಹರ್, ಶಿಕ್ಷಕರು ಬೋಧಕ ಬೋಧಕೇತರ ಸಿಬ್ಬಂದಿ ವರ್ಗ, ಪೋಷಕರು ಹಾಜರಿದ್ದರು.19ಕೆಆರ್ ಎಂಎನ್ 5.ಜೆಪಿಜಿರಾಮನಗರದ ಅರ್ಚಕರಹಳ್ಳಿ ಬಳಿ ಇರುವ ಬೇತೆಲೆ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ವಾರ್ಷಿಕ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಪಿರಮಿಡ್ ಪ್ರದರ್ಶಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))