ಬ್ಯಾಡಗಿ ವಿಧಾನ ಸಭಾಕ್ಷೇತ್ರ ವ್ಯಾಪ್ತಿಯ “ಸಂಸದರ ಕ್ರೀಡಾ ಮಹೋತ್ಸವ ಕ್ರೀಡಾಕೂಟಗಳು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜ. 29ರಂದು ಅದ್ಧೂರಿಯಾಗಿ ನಡೆಯಲಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.

ಬ್ಯಾಡಗಿ: ಬ್ಯಾಡಗಿ ವಿಧಾನ ಸಭಾಕ್ಷೇತ್ರ ವ್ಯಾಪ್ತಿಯ “ಸಂಸದರ ಕ್ರೀಡಾ ಮಹೋತ್ಸವ ಕ್ರೀಡಾಕೂಟಗಳು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜ. 29ರಂದು ಅದ್ಧೂರಿಯಾಗಿ ನಡೆಯಲಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ-ಗದಗ ಜಿಲ್ಲೆಗಳ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಾರಥ್ಯದಲ್ಲಿ ಕ್ರೀಡಾಕೂಟ ನಡೆಯಲಿದ್ದು, ಬ್ಯಾಡಗಿ ವಿಧಾನಸಭಾ ಕ್ಚೇತ್ರದ ವ್ಯಾಪ್ತಿಯ ಕ್ರೀಡಾಕೂಟ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದರು.

ಗುಂಪು ಕ್ರೀಡೆಗಳು: ಕ್ರೀಡಾಕೂಟದಲ್ಲಿ ಕಬಡ್ಡಿ, ವಾಲಿಬಾಲ್, ಖೋಖೋ, ಹಗ್ಗಜಗ್ಗಾಟ ಕ್ರೀಡೆಗಳು ನಡೆಯಲಿದ್ದು ಅಥ್ಲೆಟಿಕ್ಸ್ ನಲ್ಲಿ 100 ಮೀ.ರನ್ನಿಂಗ್ 400 ಮೀ. ರನ್ನಿಂಗ್ 4x100 ರೀಲೆ, ಗುಂಡು ಎಸೆತ, ಚಕ್ರ ಎಸೆತ, ವಿಕಲಚೇತನರಿಗಾಗಿ 50 ಮೀ. ರನ್ನಿಂಗ್, ಗೋಣಿಚೀಲದ ಓಟ ಸೇರಿದಂತೆ ಹಲವು ಕ್ರೀಡೆಗಳು ನಡೆಯಲಿವೆ. ಕ್ರೀಡಾಕೂಟದಲ್ಲಿ ಭಾಗವಹಿಸುವವರು 16 ವರ್ಷ ಪೂರೈಸಿರಬೇಕಾಗುತ್ತದೆ ಎಂದರು.

ಜ.28 ರೊಳಗಾಗಿ ನೊಂದಣಿ ಕಡ್ಡಾಯ: ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಕ್ರೀಡಾಪಟುಗಳು ಜ.28 ರೊಳಗೆ ಆನಲೈನ್ ಮೂಲಕ ನೊಂದಣಿ ಕಡ್ಡಾಯವಾಗಿದ್ದು, ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೀಡಾಕೂಟ ಯಶಸ್ವಿಗೊಳಿಸುವಂತೆ ಕರೆ ನೀಡಿದರು.

ಈ ವೇಳೆ ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ, ಪ್ರಧಾನ ಕಾರ್ಯದರ್ಶಿ ಕಲಾವತಿ ಬಡಿಗೇರ, ಮಾಜಿ ಅಧ್ಯಕ್ಷರಾದ ಹಾಲೇಶ ಜಾಧವ, ಸುರೇಶ ಆಸಾದಿ, ವಿರೇಂದ್ರ ಶೆಟ್ಟರ ಹಾಗೂ ಮುಖಂಡರಾದ ಶಂಕರಗೌಡ ಪಾಟೀಲ, ವಿಜಯಭರತ ಬಳ್ಳಾರಿ, ಸುರೇಶ ಉದ್ಯೋಗಣ್ಣವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.