ಉಡುಪಿ ಜಿಲ್ಲಾಡಳಿತ ವತಿಯಿಂದ ಭಾನುವಾರ ನಡೆದ ಉಡುಪಿ ಫುಲ್ ಮ್ಯಾರಥಾನ್‌ನಲ್ಲಿ ಛತ್ತೀಸ್‌ಗಢದ ಫುಲ್ದಾರ್ ನೇತಮ್ 2 ಗಂಟೆ 53 ನಿಮಿಷ 41 ಸೆಕೆಂಡ್‌ಗಳಲ್ಲಿ 42.19 ಕಿ.ಮಿ. ಓಟವನ್ನು ಪೂರ್ಣಗೊಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಉಡುಪಿ: ಉಡುಪಿ ಜಿಲ್ಲಾಡಳಿತ ವತಿಯಿಂದ ಭಾನುವಾರ ನಡೆದ ಉಡುಪಿ ಫುಲ್ ಮ್ಯಾರಥಾನ್‌ನಲ್ಲಿ ಛತ್ತೀಸ್‌ಗಢದ ಫುಲ್ದಾರ್ ನೇತಮ್ 2 ಗಂಟೆ 53 ನಿಮಿಷ 41 ಸೆಕೆಂಡ್‌ಗಳಲ್ಲಿ 42.19 ಕಿ.ಮಿ. ಓಟವನ್ನು ಪೂರ್ಣಗೊಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ದ್ವಿತೀಯ ಸ್ಥಾನವನ್ನು ರಾಜಾಸ್ಥಾನದ ಛೇತ್‌ ರಾಮ್ ಕುಮಾರ್ (2:57:00) ಮತ್ತು ತೃತೀಯ ಸ್ಥಾನವನ್ನು ಅಸ್ಸಾಂನ ಜಯಂತ ಬೋರೋ (3:02:16) ಗೆದ್ದುಕೊಂಡಿದ್ದಾರೆ.

ಫಲಿತಾಂಶ ವಿವರ:

ಪುರುಷರ ಹಾಫ್ ಮ್ಯಾರಥಾನ್ ಪ್ರಥಮ: ಸಚಿನ್ ಪೂಜಾರಿ (1:17:29), ದ್ವಿತೀಯ - ಲಕ್ಷ್ಮೀಶ ಸಿ.ಎಸ್. (1:23:44), ತೃತೀಯ - ಪ್ರಶಾಂತ್ (1:26:47)

ಮಹಿಳೆಯರ ಹಾಫ್ ಮ್ಯಾರಥಾನ್ ಪ್ರಥಮ: ರಿತಿಕಾ ಸಿಂಗ್ (1:58:32), ದ್ಲಿತೀಯ: ಅಶ್ವಿನಿ (2:03:39), ತೃತೀಯ - ಮರಿಯಾಹ್ ಹಾಜಿ (2:05:21)

ಪುರುಷರ 10 ಕಿ.ಮಿ. ಓಟ: ಪ್ರಥಮ: ಮಿತೇಶ್ ಸಿ.ಜಿ. (0:38:03), ದ್ವಿತೀಯ: ಸಂತೋಷ್ ಕುಮಾರ್ (0:41:05), ತೃತೀಯ: ಮುಗೇಶ್ ಎಂ.ಯು. (0:43:16)

ಮಹಿಳೆಯರ 10 ಕಿ.ಮಿ. ಓಟ: ಪ್ರಥಮ: ಪ್ರೀತಿ ಮೊಗವೀರ (0:58:44), ದ್ವಿತೀಯ: ಸಾನ್ವಿ ಸಂಭಾಜಿ (0:59:47), ತೃತೀಯ - ಸ್ವಾತಿ ಪಿ.ಎಂ. (1:04:08) ಬಹುಮಾನ ವಿತರಣೆ:

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಅಜ್ಜರಕಾಡು ಜಿಲ್ಲಾ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಮ್ಯಾರಥಾನ್‌ಗೆ ಚಾಲನೆ ನೀಡಿ, ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿದರು, ಮಾಜಿ ಶಾಸಕ ರಘುಪತಿ ಭಟ್, ಜಿಲ್ಲಾ ಯುವಜನ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅದ್ಯಕ್ಷ ಅಶೋಕ್ ಕುಮಾರ್ ಉಪಸ್ಥಿತರಿದ್ದರು.