ಸಾರಾಂಶ
ಶಿಕ್ಷಣದ ಜೊತೆಗೆ ಕ್ರೀಡೆಗೂ ಸಮಾನ ಆದ್ಯತೆ ಸಿಗಬೇಕು.
ಹಗರಿಬೊಮ್ಮನಹಳ್ಳಿ: ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಉತ್ತೇಜನ ನೀಡುವ ಅಗತ್ಯವಿದೆ ಎಂದು ಶಾಸಕ ಕೆ.ನೇಮರಾಜ ನಾಯ್ಕ ಹೇಳಿದರು.
ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಶಿಕ್ಷಣದ ಜೊತೆಗೆ ಕ್ರೀಡೆಗೂ ಸಮಾನ ಆದ್ಯತೆ ಸಿಗಬೇಕು. ಕ್ಷೇತ್ರದ ಎಲ್ಲ ಪ್ರಾಥಮಿಕ ಪ್ರೌಢಶಾಲೆಗಳಲ್ಲಿ, ಮಕ್ಕಳ ಆಟವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸುಸಜ್ಜಿತ ಮೈದಾನ ನಿರ್ಮಾಣ ಮಾಡಲಾಗುವುದು. ಕ್ರೀಡೆಯಲ್ಲಿ ಮಕ್ಕಳು ದೈಹಿಕ ಶಿಕ್ಷಕರಿಂದ ಉತ್ತಮ ತರಬೇತಿ ಪಡೆದು, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು. ಕ್ರೀಡೆಯ ನಿರ್ಣಾಯಕರು ಪ್ರಾಮಾಣಿಕ ತೀರ್ಪುಗಳನ್ನು ನೀಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ಮಾತನಾಡಿ, ಕ್ರೀಡೆ ಮಕ್ಕಳಲ್ಲಿ ಉತ್ಸಾಹವನ್ನು ಹೆಚ್ಚಿಸುವುದರ ಜೊತೆಗೆ ನಿರಂತರವಾಗಿ ಕ್ರಿಯಾಶೀಲರನ್ನಾಗಿಸುತ್ತದೆ. ಉತ್ತಮ ದೈಹಿಕ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಪೂರಕ. ಕ್ರೀಡೆಯಿಂದ ಮಕ್ಕಳಿಗೆ ಸ್ಪರ್ದಾತ್ಮಕ ಮನೋಭಾವ ಬೆಳೆದು ಚಾಣಾಕ್ಷತನ ವೃದ್ಧಿಸುತ್ತದೆ ಎಂದರು.ನಂದಿಪುರ ಮಹೇಶ್ವರ ಸ್ವಾಮೀಜಿ, ಹಾಲಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಪಂ ಇಒ ಡಾ.ಜಿ.ಪರಮೇಶ್ವರ, ಬಿಆರ್‌ಸಿ ಪ್ರಭಾಕರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜಕುಮಾರ ನಾಯ್ಕ, ಟಿಪಿಒ ಸೋಮಶೇಖರ, ಇಸಿಒ ಎನ್.ವಿ.ಶಿವಲಿಂಗ ಸ್ವಾಮಿ, ಡಿಪಿಇಒ ಕೊಟ್ರೇಶ್ ಇದ್ದರು. ಬಿಆರ್‌ಪಿ ರುದ್ರಪ್ಪ, ಇಸಿಒ ಗುರುಬಸವರಾಜ ನಿರ್ವಹಿಸಿದರು.