ಇಂದಿನಿಂದ ಬೇತು ಶ್ರೀ ಮಕ್ಕಿ ಶಾಸ್ತಾವು ದೇವರ ಉತ್ಸವ

| Published : May 02 2025, 12:14 AM IST

ಇಂದಿನಿಂದ ಬೇತು ಶ್ರೀ ಮಕ್ಕಿ ಶಾಸ್ತಾವು ದೇವರ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಇತಿಹಾಸ ಪ್ರಸಿದ್ಧ ಬೇತು ಗ್ರಾಮದ ಶ್ರೀ ಮಕ್ಕಿಶಾಸ್ತವು ದೇವರ ಎಡಮ್ಯಾರ್‌ ವಾರ್ಷಿಕ ಉತ್ಸವ ಮೇ 2ರಿಂದ ನಾಲ್ಕರ ವರೆಗೆ ಜರುಗಲಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ಧ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ದೇವರ ಎಡಮ್ಯಾರು ವಾರ್ಷಿಕ ಉತ್ಸವವು ಮೇ 2 ರಿಂದ 4 ನೇ ಭಾನುವಾರದವರೆಗೆ ಜರುಗಲಿದೆ.

2 ರಂದು ರಾತ್ರಿ 9ಗಂಟೆಗೆ ಶ್ರೀ ದೇವರನ್ನು ಕೊಟ್ಟಿ ಹಾಡುವುದು, 3 ರಂದು ಬೆಳಗ್ಗೆ 11-30 ಗಂಟೆಗೆ ಎತ್ತು ಪೋರಾಟ ಅಂದು ರಾತ್ರಿ 9-30 ಗಂಟೆಗೆ ಶ್ರೀ ಶಾಸ್ತಾವು ದೇವರ ದೀಪಾರಾಧನೆ (ಅಂದಿ ಬೊಳಕು) ನಡೆಯಲಿದೆ. 4 ರಂದು ಬೆಳಗ್ಗೆ 9-30 ಗಂಟೆಗೆ ಶ್ರೀ ಕಲ್ಯಾಟ ಅಜ್ಜಪ್ಪ ದೇವರ ಕೋಲ ಜರುಗಲಿದೆ. ಅಪರಾಹ್ನ 12. 30 ಗಂಟೆಗೆ ಭಕ್ತಾದಿಗಳಿಗೆ ಅನ್ನದಾನ ಅಪರಾಹ್ನ 1 ಗಂಟೆಗೆ ಶ್ರೀ ವಿಷ್ಣು ಮೂರ್ತಿ ದೇವರ ಕೋಲ ನಡೆಯಲಿದೆ ಎಂದು ದೇವಾಲಯದ ತಕ್ಕ ಮುಖ್ಯಸ್ಥರು ಹಾಗು ಆಡಳಿತ ಮಂಡಳಿ ತಿಳಿಸಿದೆ.