ಸಾರಾಂಶ
, ಆಡು ಮುಟ್ಟದ ಸೊಪ್ಪಿಲ್ಲ ರಾಜೇಂದ್ರ ಶ್ರೀಗಳು ಸಾಧಿಸದ ಕ್ಷೇತ್ರವಿಲ್ಲ ಎನ್ನುತ್ತಾ, ತಮಗೆ ಹರಿದ ಬಟ್ಟೆಯಿದ್ದರೂ ವಿದ್ಯಾರ್ಥಿಗಳಿಗೆ ಮೊದಲ ಉಚಿತ ವಸತಿ ನಿಲಯ ಸ್ಥಾಪಿಸಿದರು
ಕನ್ನಡಪ್ರಭ ವಾರ್ತೆ ಮೈಸೂರು
ತಾಲೂಕಿನ ಬರಡನಪುರ ಗ್ರಾಮದ ಶ್ರೀ ಮಹಾಂತೇಶ್ವರ ಮಠದಲ್ಲಿ ಜಿಲ್ಲಾ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಶ್ರೀ ಮಹಾಂತೇಶ್ವರ ಮಠ ಹಾಗೂ ದೇಚಿ ಕ್ರಿಯೇಷನ್ಸ್ವತಿಯಿಂದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ 110ನೇ ಜಯಂತಿ, ದತ್ತಿ ಉಪನ್ಯಾಸ ಮತ್ತು ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.ಬರಡನಪುರ ಶ್ರೀ ಮಹಾಂತೇಶ್ವರ ಮಠದ ಶ್ರೀ ಪರಶಿವಮೂರ್ತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಎಲ್ಲಾ ಕಲಾವಿದರನ್ನು ಸನ್ಮಾನಿಸಿ ಮಾತನಾಡಿ, ಶರಣ ಪಥದಲ್ಲಿ ಸಾಗಬೇಕು ಎಂದರು.
ರಾಜೇಂದ್ರ ಶ್ರೀಗಳ ಬದುಕು-ಸಾಧನೆ-ಬಹುಮುಖಿ ಚಿಂತನೆ ಎಂಬ ವಿಷಯದ ಕುರಿತು ಗಾವಡಗೆರೆಯ ಶ್ರೀ ಗುರುಲಿಂಗ ಜಂಗಮ ದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ರಾಜೇಂದ್ರ ಶ್ರೀಗಳು ಸಾಧಿಸದ ಕ್ಷೇತ್ರವಿಲ್ಲ ಎನ್ನುತ್ತಾ, ತಮಗೆ ಹರಿದ ಬಟ್ಟೆಯಿದ್ದರೂ ವಿದ್ಯಾರ್ಥಿಗಳಿಗೆ ಮೊದಲ ಉಚಿತ ವಸತಿ ನಿಲಯ ಸ್ಥಾಪಿಸಿದರು. ಆಸ್ಪತ್ರೆ, ವಿದ್ಯಾಸಂಸ್ಥೆ, ಶರಣ ಸಾಹಿತ್ಯ ಪರಿಷತ್ತು, ನೌಕರರ ಸಂಘ, ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ ವಲಯ ಎಲ್ಲಾ ಆಯಾಮಗಳಲ್ಲೂಹಲವು ಮೊದಲುಗಳನ್ನು ಸಾಧಿಸಿದಸಂತ, ಒಬ್ಬ ವ್ಯಕ್ತಿ ಅತಿದೊಡ್ಡ ಶಕ್ತಿಯಾಗಿ ತಮ್ಮ ಜೀವಿತದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಬಹುದೆಂದರೆ ಅದು ರಾಜೇಂದ್ರ ಶ್ರೀಗಳಿಗಿದ್ದ ಆತ್ಮಬಲ ಎಂದು ಅವರು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಕವಯತ್ರಿ ಡಾ. ಲತಾ ರಾಜಶೇಖರ್ ಮಾತನಾಡಿ, ಶರಣ ಪರಂಪರೆ ಹಾಗೂ ಲಿಂಗಾಯತ ಮಠಗಳ ತ್ರಿವಿಧ ದಾಸೋಹದಿಂದಈನೆಲದ ಅನೇಕ ಶೋಷಿತ ವರ್ಗದ ಜನರು ಬದುಕುಳಿದರು, ಸುಸಂಸ್ಕೃತರಾದರು, ವಿದ್ಯಾವಂತರಾದರು ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ಲತಾ ರಾಜಶೇಖರ್ ಅವರ ಬಸವ ಮಹಾದರ್ಶನ ಕೃತಿಯನ್ನು ಕುರಿತಾದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ನಡೆಯಬೇಕು ಎಂದರು.ಕಾರ್ಯಕ್ರಮದಲ್ಲಿ ಆಶಯನುಡಿಗಳನ್ನಾಡಿದ ಎಂ. ಚಂದ್ರಶೇಖರ್, ರಾಜೇಂದ್ರ ಶ್ರೀಗಳವರಿಂದ ಸ್ಥಾಪಿತವಾದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯನ್ನು ಸ್ಮರಿಸಿದರು.
ದೇವರಾಜು ಪಿ. ಚಿಕ್ಕಹಳ್ಳಿ ಮಾತನಾಡಿ, ಈ ಜಗತ್ತು ಶರಣ ಪರಂಪರೆಯ ಮುಂದುವರಿದ ಭಾಗವಾದಲ್ಲಿ ಜಗದ ಎಲ್ಲಾ ಕಷ್ಟಗಳೂ ತೊಲಗಲಿವೆ. ಯುವ ಜನತೆ ವ್ಯಸನಗಳಿಂದ ದೂರಾಗಿ ಉನ್ನತ ಮಟ್ಟದ ಚಿಂತನೆಗಳಿಂದ ಈ ದೇಶವನ್ನು ಬೆಳೆಸಿ ಉಳಿಸಬೇಕುಎಂದರು.ವೇದಿಕೆಯಲ್ಲಿ ಪುರ ಗ್ರಾಮದ ಶ್ರೀಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಬರಡನಪುರದ ಶ್ರೀ ಮಹಾಂತೇಶ್ವರ ಮಠದ ಕಿರಿಯ ಶ್ರೀಗಳು ಹಾಗೂ ಡಾ. ರಾಜಶೇಖರ್ ಇದ್ದರು.
ಕಾರ್ಯಕ್ರಮದ ಬಳಿಕ ದೇಚಿ ಕ್ರಿಯೇಷನ್ಸ್ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ಬೆಪ್ತಕ್ಕಡಿ ಬೋಳೇಶಂಕರ ನಾಟಕ ಪ್ರದರ್ಶನಗೊಂಡಿತು. ನಾಟಕ ನಿರ್ವಹಣೆಯಲ್ಲಿ ಪಿ. ಶ್ರೇಯಸ್, ಮಂಜು ಸಿರಿಗೇರಿ ಹಾಗೂ ಪ್ರೇಮ್ ಸಾಗರ್ ಇದ್ದರು.