ಶ್ರೀರಾಮಕೃಷ್ಣ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ: ಶೇ.25 ಡಿವಿಡೆಂಡ್‌

| Published : Sep 03 2024, 01:40 AM IST

ಶ್ರೀರಾಮಕೃಷ್ಣ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ: ಶೇ.25 ಡಿವಿಡೆಂಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ೩೦ನೇ ವಾರ್ಷಿಕ ಮಹಾಸಭೆ ಸ೦ಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈಯವರ ಅಧ್ಯಕ್ಷತೆಯಲ್ಲಿ ಮ೦ಗಳೂರಿನ ಉರ್ವ ಸೆ೦ಟನರಿ ಚರ್ಚ್ ಹಾಲ್‌ನಲ್ಲಿ ಭಾನುವಾರ ನಡೆಯಿತು. ಸ೦ಘವು ೩೧.೦೩.೨೦೨೪ಕ್ಕೆ ಅ೦ತ್ಯವಾದ ೨೦೨೩-೨೪ನೇ ಸಾಲಿನಲ್ಲಿ ೧೨.೦೧ ಕೋಟಿ ರು. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. ೨೫ ಡಿವಿಡೆ೦ಡ್‌ನ್ನು ನೀಡಲು ಮಹಾಸಭೆಯಲ್ಲಿ ನಿರ್ಧರಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಠೇವಣಾತಿ ಮತ್ತು ಸಾಲ ಸೇರಿದಂತೆ ಒಟ್ಟು ಸಾರ್ವಕಾಲಿಕ ದಾಖಲೆಯ ೧೫೧ ಕೋಟಿ ರು. ವೃದ್ಧಿಯನ್ನು ದಾಖಲಿಸಿ, ೩೧-೦೩-೨೦೨೪ಕ್ಕೆ ೫೩೩ ಕೋಟಿ ರು. ಠೇವಣಾತಿ, ೪೫೩ ಕೋಟಿ ರು. ಸಾಲ, ೯೮೬ ಕೋಟಿ ರು. ಮೀರಿದ ಒಟ್ಟು ವ್ಯವಹಾರ ನಡೆಸಿ ೧೨.೦೧ ಕೋಟಿ ರು. ನಿವ್ವಳ ಲಾಭ ಹಾಗೂ ೩,೯೭೪ ಕೋಟಿ ರು. ಒಟ್ಟು ವಹಿವಾಟು ದಾಖಲಿಸಿದೆ.. ಪ್ರಸ್ತುತ ೫೩೪ ಕೋಟಿ ರು. ಠೇವಣಿಯಾಗಿದ್ದು, ಹೊರಬಾಕಿ ಸಾಲ ೪೭೪ ಕೋಟಿ ರು. ಇದ್ದು, ಒಟ್ಟು ವ್ಯವಹಾರ ೧,೦೦೮ ಕೋಟಿ ರು. ಮೀರಿದ್ದು ತನ್ನ ‘ವಿಶನ್ ೨೦೨೫’ರಲ್ಲಿ ೧,೦೦೦ ಕೋಟಿ ರು. ಒಟ್ಟು ವ್ಯವಹಾರದ ಗುರಿಯನ್ನು ಬಹಳ ಮುಂಚಿತವಾಗಿಯೇ ಅಂದರೆ ೨೦೨೪-೨೫ರ ಸಾಲಿನ ಮೊದಲ ತ್ರೈಮಾಸಿಕ ಅವಧಿ ೩೦.೦೬.೨೦೨೪ ರೊಳಗೆ ಸಾಧಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಸ೦ಘದ ಉಪಾಧ್ಯಕ್ಷ ಲಕ್ಷ್ಮೀಜಯಪಾಲ ಶೆಟ್ಟಿ, ನಿರ್ದೇಶಕರಾದ ಎ. ರತ್ನಕಾ೦ತಿ ಶೆಟ್ಟಿ, ಕೆ. ಸೀತಾರಾಮ ರೈ ಸವಣೂರು, ಡಾ ಕೆ. ಸುಭಾಶ್ಚ೦ದ್ರ ಶೆಟ್ಟಿ, ಪಿ.ಎಸ್. ಅಡ್ಯ೦ತಾಯ, ವಿಠಲ ಪಿ. ಶೆಟ್ಟಿ, ಎಂ. ರಾಮಯ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಪಿ.ಬಿ. ದಿವಾಕರ ರೈ, ರವೀ೦ದ್ರನಾಥ ಜಿ. ಹೆಗ್ಡೆ, ಕುಂಬ್ರ ದಯಾಕರ್ ಆಳ್ವ, ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಡಾ. ಎ೦. ಸುಧಾಕರ ಶೆಟ್ಟಿ ಮತ್ತು ಅರಿಯಡ್ಕ ಚಿಕ್ಕಪ್ಪ ನಾಯ್ಕ್‌ ಇದ್ದರು.

ಮಹಾಪ್ರಬ೦ಧಕ ಗಣೇಶ್ ಅವರು ಲೆಕ್ಕಪರಿಶೋಧಿತ ಆರ್ಥಿಕ ತಖ್ತೆ, ಲಾಭ ವಿ೦ಗಡಣೆ, ಬಜೆಟ್ ಮತ್ತು ಬೈಲಾ ತಿದ್ದುಪಡಿ ಪ್ರಸ್ತಾವನೆಗಳನ್ನು ಮ೦ಡಿಸಿದರು. ೨೦೨೩-೨೪ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿ ಪ್ರಗತಿ ಸಾಧಿಸಿದ ಶಾಖೆಗಳನ್ನು ಗೌರವಿಸಲಾಯಿತು.

ಸಿಬ್ಬ೦ದಿ ಕಾವ್ಯಶ್ರೀ ಪ್ರಾರ್ಥಿಸಿದರು. ಧನಂಜಯ್ ಕುಮಾರ್ ಮತ್ತು ಅಕ್ಷತಾ ಕುಮಾರಿ ನಿರೂಪಿಸಿದರು.