ಶ್ರೀ ರೇವಣಸಿದ್ದೇಶ್ವರರು11ನೇ ಶತಮಾನದ ಪವಾಡಪುರುಷ: ಎಂ.ನರೇಂದ್ರ

| Published : Mar 23 2024, 01:03 AM IST

ಶ್ರೀ ರೇವಣಸಿದ್ದೇಶ್ವರರು11ನೇ ಶತಮಾನದ ಪವಾಡಪುರುಷ: ಎಂ.ನರೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಜಗದ್ಗುರು ರೇವಣಸಿದ್ದೇಶ್ವರರು ಶಿವಸಿದ್ಧ ಸಂಪ್ರದಾಯಕ್ಕೆ ಸೇರಿದವರಾಗಿದ್ದು. ಹಾಲುಮತ ಹಾಗೂ ವೀರಶೈವ ಸಮಾಜಗಳೆರಡು ಒಪ್ಪಿಕೊಂಡಿರುವ ಅಗ್ರಗಣ್ಯರಾಗಿದ್ದಾರೆ ಎಂದು ಪುರಸಭೆ ಹಾಗೂ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಂ ನರೇಂದ್ರ ಹೇಳಿದ್ದಾರೆ.

ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶ್ರೀ ರೇವಣಸಿದ್ದೇಶ್ವರ ಜಯಂತಿ

ಕನ್ನಡಪ್ರಭ ವಾರ್ತೆ, ತರೀಕೆರೆ

ಜಗದ್ಗುರು ರೇವಣಸಿದ್ದೇಶ್ವರರು ಶಿವಸಿದ್ಧ ಸಂಪ್ರದಾಯಕ್ಕೆ ಸೇರಿದವರಾಗಿದ್ದು. ಹಾಲುಮತ ಹಾಗೂ ವೀರಶೈವ ಸಮಾಜಗಳೆರಡು ಒಪ್ಪಿಕೊಂಡಿರುವ ಅಗ್ರಗಣ್ಯರಾಗಿದ್ದಾರೆ ಎಂದು ಪುರಸಭೆ ಹಾಗೂ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಂ ನರೇಂದ್ರ ಹೇಳಿದ್ದಾರೆ. ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಚರಿಸಲಾದ ಶ್ರೀ ರೇವಣಸಿದ್ದೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 11ನೇ ಶತಮಾನದಲ್ಲಿಯೇ ಶ್ರೀ ರೇವಣಸಿದ್ದೇಶ್ವರರು ಭಕ್ತಿ ಪರಂಪರೆಯನ್ನು ಅಳವಡಿಸಿಕೊಂಡು ನಾತಪಂಥದ ಮೂಲಕ ಶಿವಧ್ಯಾನ ಮಾಡಿ ಪವಾಡ ಪುರುಷರಾಗಿ ಗೊಡ ವಿದ್ಯೆಗಳಲ್ಲಿ ಶ್ರೇಷ್ಠನಾತನ ಹೆಸರು ಪಡೆದಿದ್ದವರು.

12ನೇ ಶತಮಾನದಲ್ಲಿ ಶ್ರೀ ರೇವಣಸಿದ್ದ ಹಾಗೂ ಶ್ರೀ ಸಿದ್ದರಾಮ ಸಮ ಕಾಲೀನರು ಎಂಬುದು ರೇವಣಸಿದ್ದೇಶ್ವರನ ಕುರಿತು ಬರೆದ ರೇವಣಸಾಂಗತ್ಯ, ರೇವಣಸಿದ್ದೇಶ್ವರ ರಗಳೆ ಹಾಗೂ ಜಾನಪದ ಹಾಲುಮತ ಪುರಾಣ ಇವುಗಳಲ್ಲಿ ಉಲ್ಲೇಖವಾಗಿದೆ. ಅಲ್ಲದೆ ಹರಿಹರ ಕವಿಯೂ ಸಹ ಇವರ ಬಗ್ಗೆ ತಮ್ಮ ಮೊಟ್ಟಮೊದಲ ಕಾವ್ಯದಲ್ಲಿ ಉಲ್ಲೇಖ ಮಾಡಿರುತ್ತಾರೆ. ಇವರ ಟಗರು ಪವಾಡಕ್ಕೆ ರೇವಣಸಿದ್ದ ಪುರಾಣವೆಂದು ಕರೆಯುತ್ತಾರೆ ಎಂದು ತಿಳಿಸಿ ನಮ್ಮ ಪೂರ್ವಿಕರು ಇವರ ಹೆಸರಿನಲ್ಲಿ ನೂರು ವರ್ಷಗಳ ಹಿಂದೆ ಸಹಕಾರ ಸಂಘವನ್ನು ತರೀಕೆರೆಯಲ್ಲಿ ಸ್ಥಾಪನೆ ಮಾಡಿರುವುದು ಅತ್ಯಂತ ಶ್ಲಾಘನೀಯ ಸಮಾಜ ಸೇವ ಕಾರ್ಯ ಎಂದು ತಿಳಿಸಿದರು

ಸಂಘದ ಅಧ್ಯಕ್ಷ ಎನ್ ರಮೇಶ್, ಉಪಾಧ್ಯಕ್ಷ ಪರಶುರಾಮ್ ಹಾಗೂ ನಿರ್ದೇಶಕರಾದ ಮಂಜುನಾಥ್, ರಾಮಚಂದ್ರ. ಟಿ.ಎಸ್.ಪ್ರಕಾಶ್ ವರ್ಮ, ಗಿರಿರಾಜ್,ಸಂಘದ ಕಾರ್ಯದರ್ಶಿ ಮೋಹನ್ ರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

22ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಏರ್ಪಡಿಸಲಾಗಿದ್ದು ಶ್ರೀ ರೇವಣ ಸಿದ್ದೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಂ.ನರೇಂದ್ರ, ಸಂಘದ ಅಧ್ಯಕ್ಷ ಎನ್ ರಮೇಶ್ ಹಾಗೂ ಸಂಘದ ನಿರ್ದೇಶಕರು ಇದ್ದರು.