ಶ್ರೀ ಶನಿಮಹಾತ್ಮಸ್ವಾಮಿ ವಿಜೃಂಭಣೆಯ ಬ್ರಹ್ಮರಥೋತ್ಸವ

| Published : Sep 01 2024, 01:51 AM IST

ಸಾರಾಂಶ

ಶ್ರೀ ಶನಿಮಹಾತ್ಮಸ್ವಾಮಿಗೆ ಬ್ರಹ್ಮರಥೋತ್ಸವದ ಅಂಗವಾಗಿ ಸ್ವಾಮಿಗೆ ಪ್ರಾತಃಕಾಲದಲ್ಲಿದೇವಾಲಯದ ಅರ್ಚಕರು ಪಂಚಾಮೃತಾಭಿಷೇಕ ಘಂಟಾನಾಧ, ಸುಪ್ರಭಾತ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವಜ್ರಾಂಗಿಯನ್ನು ತೊಡಿಸಿ ದೇವಾಲಯವನ್ನು ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಶ್ರಾವಣಮಾಸದ ಕೊನೆಯ ಶನಿವಾರ ನಗರದ ಶ್ರೀ ಜೇಷ್ಠಾದೇವಿ ಸಮೇತ ಶ್ರೀ ಶನಿಮಹಾತ್ಮಸ್ವಾಮಿ ದೇವರ 43ನೇ ಬ್ರಹ್ಮರಥೋತ್ಸವ ಬಹಳ ವಿಜೃಂಭಣೆಯಿಂದ ಶನಿವಾರ ಮಧ್ಯಾಹ್ನ ನೆರವೇರಿತು.

ಬಹುತೇಕ ನಗರದ ಎಲ್ಲಾ ದೇವಾಲಯಗಳಲ್ಲೂ ಭಕ್ತರ ದಂಡು ಕಂಡುಬಂದಿತು. ಶ್ರೀ ಜೇಷ್ಠಾದೇವಿ ಸಮೇತ ಶ್ರೀ ಶನಿಮಹಾತ್ಮಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ದಂತೆ ಈ ವರ್ಷವು ಸಹ ವಿಶೇಷ ಪೂಜಾ ಕೈಂಕರ್ಯಗಳನ್ನು ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹುಸಂಭ್ರಮದಿಂದ ಬ್ರಹ್ಮರಥೋತ್ಸವ ನಡೆಯಿತು.

ಶ್ರೀ ಶನಿಮಹಾತ್ಮಸ್ವಾಮಿಗೆ ಬ್ರಹ್ಮರಥೋತ್ಸವದ ಅಂಗವಾಗಿ ಸ್ವಾಮಿಗೆ ಪ್ರಾತಃಕಾಲದಲ್ಲಿದೇವಾಲಯದ ಅರ್ಚಕರು ಪಂಚಾಮೃತಾಭಿಷೇಕ ಘಂಟಾನಾಧ, ಸುಪ್ರಭಾತ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವಜ್ರಾಂಗಿಯನ್ನು ತೊಡಿಸಿ ದೇವಾಲಯವನ್ನು ವಿಶೇಷವಾಗಿ ಹೂವಿನ ಅಲಂಕಾರ ಮತ್ತು ತಳಿರು ತೋರಣಗಳ ಶೃಂಗಾರ ಭಕ್ತರ ಗಮನಸೆಳೆಯುತ್ತಿತ್ತು. ಬ್ರಹ್ಮರಥೋತ್ಸವದ ಅಂಗವಾಗಿ ರಥವನ್ನು ಹೂವಿನಿಂದ ಸಿಂಗಾರ ಮಾಡಲಾಗಿತ್ತು. ದೇವಾಲಯದಲ್ಲಿ ನಡೆದ ಹೂಮ ಹವನಾದಿಗಳನಂತರ ಸ್ವಾಮಿಯನ್ನುರಥದಲ್ಲಿ ಕುಳ್ಳರಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರರಥಕ್ಕೆ ಚಾಲನೆ ನೀಡಲಾಯಲಿತು.

ರಥದ ಸುತ್ತ ದೇವರನ್ನು ಹೊತ್ತ ಪಲ್ಲಕ್ಕಿಯನ್ನು ಪ್ರದಕ್ಷಿಣೆ ಹಾಕಿ ನಂತರ, ದೇವರ ಮೂರ್ತಿಯನ್ನು ರಥದ ಒಳಗಡೆ ಕೂರಿಸಲಾಯಿತು. ನೆರೆದ ಭಕ್ತ ಸಮೂಹವು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ದೇವರನ್ನು ಸ್ಮರಿಸುತ್ತಾ ರಥವನ್ನು ಎಳೆದರು. ಭಕ್ತರ ಘೋಷಣೆ ಮುಗಿಲು ಮುಟ್ಟಿತು. ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಉತ್ತತ್ತಿ, ಬಾಳೆಹಣ್ಣನ್ನು ಬೀಸಿ ನಮಸ್ಕರಿಸಿದರು. ಪಲ್ಲಕ್ಕಿ, ಡೊಳ್ಳು ಕುಣಿತ, ಮಹಿಳಾ ವೀರಗಾಸೆ, ಕಾಂತಾರ ಅಲಂಕಾರ ಇವೆಲ್ಲವು ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತ ಹೆಚ್ಚಿನ ಕಳೆತಂದುಕೊಟ್ಟವು. ನಾನಾ ಕಡೆಯಿಂದ ಬಂದ ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದುಕೊಂಡು ಹೂವು ಕಾಯಿ ಅರ್ಪಿಸಿದರು.

ಗ್ರಾಮೀಣ ಭಾಗದ ಜನರು ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಅತ್ಯಂತ ಉತ್ಸಾಹದಿಂದ ಬ್ರಹ್ಮರಥೋತ್ಸವದಲ್ಲಿ ಭಾಗವಸಿದ್ದು, ಬೆಂಡು ಬತ್ತಾಸು ಮತ್ತು ಮಕ್ಕಳ ಆಟಿಕೆ ಸಾಮಾನುಗಳ ಖರೀದಿಯು ನಡೆದಿತ್ತು. ರಥೋತ್ಸವದಲ್ಲಿ ದುಡಿದ ದೇಹ ಮತ್ತು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತಿತ್ತು. ದೇವಾಸ್ಥಾನದ ಸೇವಾ ಸಮಿತಿ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿತ್ತು.

ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಸ್ಥಾನ, ಶ್ರೀ ನದಿದಡ ಆಂಜನೇಯಸ್ವಾಮಿದೇವಾಲಯ ನಗರದಎಲ್ಲಾ ದೇವಾಲಯಗಳಲ್ಲೂ ಶ್ರಾವಂ ಮಾಸದ ವಿಶೇಷ ಅಲಂಕಾರ ಪೂಜೆಗಳನ್ನು ನೆರವೇರಿದ್ದವು. ಬ್ರಹ್ಮರಥೋತ್ಸವಕ್ಕೆ ಅಗಮಿಸಿದ್ದ ಭಕ್ತಸಾಗರಕ್ಕೆ ಗೌರಿಬಿದನೂರು ಪೊಲೀಸರು ಭದ್ರತೆಯ ಜೊತೆಗೆ ಭಕ್ತರು ಮತ್ತು ವಾಹನ ಸವಾರರು ಗೊಂದಲಕ್ಕೆ ಒಳಗಾಗದಂತೆ ವ್ಯವಸ್ಥೆ ಮಾಡಿದರು.