ಸಾರಾಂಶ
ಪರಂಪರೆಯೊಂದಿಗೆ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.
ಕನ್ನಡಪ್ರಭ ವಾರ್ತೆ, ಕಡೂರುಪಟ್ಟಣದ ದೊಡ್ಡಪೇಟೆ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರಸ್ವಾಮಿ ಬ್ರಹ್ಮ ರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಭಾವದಿಂದ ಸುಸಂಪನ್ನವಾಯಿತು.ಕಡೂರು ಪಟ್ಟಣ ಸೇರಿದಂತೆ ಸಮೀಪದ ತುರುವನಹಳ್ಳಿ, ಚಿಕ್ಕಪಟ್ಟಣಗೆರೆ, ದೊಡ್ಡಪಟ್ಟಣಗೆರೆ, ಕೆ. ಹೊಸಹಳ್ಳಿ ಗ್ರಾಮಗಳ ಎಲ್ಲ ಸಮಾಜಗಳನ್ನು ಸೇರಿಸಿ 12 ಹರಿವಾಣದ ಬುಡಕಟ್ಟಿನ ಪರಿವಾರದೊಂದಿಗೆ ಸ್ವಾಮಿ ವೈಶಿಷ್ಟ್ಯತೆ ಮತ್ತು ಪರಂಪರೆಯೊಂದಿಗೆ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ರಥೋತ್ಸವ ಅಂಗವಾಗಿ ಬೆಳಿಗ್ಗೆ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ವಿಶೇಷ, ಸಾಂಪ್ರದಾಯಿಕ ಧಾರ್ಮಿಕ ಪೂಜೆ ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ ನಡೆಸಿ ಶ್ರೀ ವೀರಭದ್ರಸ್ವಾಮಿ ಹಾಗು ಶ್ರೀಭದ್ರ ಕಾಳಮ್ಮ ನನ್ನು ಪರಿವಾರ ಶ್ರೀ ಕೆಂಚಾಂಬ ದೇಗುಲದ ಬಳಿ ಹೂವಿನ ಸಿಂಗಾರದಿಂದ ವಿಶೇಷವಾಗಿ ಅಲಂಕೃತಗೊಂಡ ರಥದ ಬಳಿ ಮಧ್ಯಾಹ್ನ ಕರೆತಂದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಪ್ರಧಾನ ಗುರು ಎಚ್.ಎಂ. ಲೋಕೇಶ್ ನೇತೃತ್ವದಲ್ಲಿ ಬಲಿಪ್ರಧಾನ ಪೂಜೆ ನೆರವೇರಿದವು. ಬಳಿಕ 12 ಹರಿವಾಣದ ಬುಡಕಟ್ಟಿನ ಸಮಿತಿ ಅಧ್ಯಕ್ಷ ಭರತ್ ಕೆಂಪರಾಜ್ ಬಲಿ ಪ್ರಧಾನದ ಅಂಬು ಹೊಡೆವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಶಾಸಕ ಕೆ.ಎಸ್.ಆನಂದ್ ರಥಕ್ಕೆ ಪೂಜೆ ಸಲ್ಲಿಸಿದರು. ಸಾವಿರಾರು ಭಕ್ತರು ಶ್ರೀ ಸ್ವಾಮಿಗೆ ಜೈಕಾರ ಕೂಗುತ್ತಾ ರಥ ಎಳೆದು ಸಂಭ್ರಮಿಸಿ, ಬಾಳೆಹಣ್ಣನ್ನು ರಥದ ಕಳಸಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ಮಲ್ಲೇಶ್ವರದ ಶ್ರೀ ಸ್ವರ್ಣಾಂಬ, ಚೌಡ್ಲಾಪುರದ ಶ್ರೀ ಕರಿಯಮ್ಮ, ಶ್ರೀ ಬನಶಂಕರಿ ಹಾಗೂ ಶ್ರೀಕೆಂಚಾಂಬಿಕಾ, ತುರುವನಹಳ್ಳಿಯ ಶ್ರೀಭೈರವೇ ಶ್ವರ ಸ್ವಾಮಿ ರಥೋತ್ಸವ ನಡೆಯಿತು.ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, 12 ಹರಿವಾಣ ಸಮಿತಿ ಕಾರ್ಯಾಧ್ಯಕ್ಷ ಶರತ್ ಕೃ ಷ್ಣ ಮೂರ್ತಿ, ಪುರಸಭಾ ಸದಸ್ಯರಾದ ತೋಟದಮನೆ ಮೋಹನ್, ಈರಳ್ಳಿ ರಮೇಶ್, ಹಾಲಮ್ಮ ಸಿದ್ರಾಮಪ್ಪ, ಸಮಿತಿ ಪದಾಧಿಕಾರಿ ಗಳಾದ ಕರಬಡ್ಡೆ ರಾಜು, ಕೆ.ಜಿ.ಲೋಕೇಶ್ವರ್, ಪಂಗ್ಲಿ ಮಂಜು, ಸತೀಶ್, ಚೇತನ್, ದಳವಾಯಿ ನಿರಂಜನ್ ಸೇರಿದಂತೆ ಮತ್ತಿತರಿದ್ದರು.
-- ಬಾಕ್ಸ್ ಸುದ್ದಿಗೆ--₹3.25 ಲಕ್ಷಕ್ಕೆ ಬಾವುಟ ಹರಾಜುಈ ಭಾರಿ ಶ್ರೀ ವೀರಭದ್ರ ಸ್ವಾಮಿ ಬಾವುಟ ಹರಾಜು ಪ್ರಕ್ರಿಯೆಯಲ್ಲಿ ₹3.25 ಲಕ್ಷಕ್ಕೆ ಮಲ್ಲೇಶ್ವರ ಗ್ರಾಪಂ ಮಾಜಿ ಅಧ್ಯಕ್ಷ ಶಾಮಿಯಾನ ವಸಂತಕುಮಾರ್ ಬಾವುಟವನ್ನು ತಮ್ಮದಾಗಿಸಿಕೊಂಡರು.
16 ಕೆಕೆೆಡಿಯು1.ಕಡೂರು ಪಟ್ಟಣದ ಶ್ರೀ ವೀರಭದ್ರ ಸ್ವಾಮಿಯವರ ರಥೋತ್ಸವವೂ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆಯಿತು.