ಪೋಷಕರು, ಶಿಕ್ಷಕರ ಆಶಯ ಈಡೇರಿಸಿ ಕಲಿತ ಶಾಲಾ ಕಾಲೇಜುಗಳಿಗೆ ಉತ್ತಮ ಹೆಸರು ತಂದು

ಫೋಟೋ- 27ಎಂವೈಎಸ್‌ 56-------------ಕನ್ನಡಪ್ರಭ ವಾರ್ತೆ ಕೆ.ಆರ್. ನಗರವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಅಧ್ಯಯನದ ವಿಷಯ ಹೊರತು ಪಡಿಸಿ ಇತರ ವಿಚಾರಗಳ ಬಗ್ಗೆ ಹೆಚ್ಚು ಗಮನ ಹರಿಸಬಾರದು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.ಪಟ್ಟಣದ ಶ್ರೀಕೃಷ್ಣ ರಾಜೇಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2025-26 ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಶಿಕ್ಷಣ ಪಡೆದರೆ ಎಲ್ಲವನ್ನು ಸಾಧಿಸಬಹುದು ಎಂದರು.ಪೋಷಕರು, ಶಿಕ್ಷಕರ ಆಶಯ ಈಡೇರಿಸಿ ಕಲಿತ ಶಾಲಾ ಕಾಲೇಜುಗಳಿಗೆ ಉತ್ತಮ ಹೆಸರು ತಂದು ತಾವುಗಳು ಸಹ ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ವಿದ್ಯಾರ್ಥಿಗಳ ಚಿತ್ತ ಇರಬೇಕೆಂದು ಸಲಹೆ ನೀಡಿದ ಅವರು, ಈ ವಿಚಾರದಲ್ಲಿ ನೀವು ಇತರರಿಗೆ ಮಾದರಿಯಾಗಬೇಕೆಂದರು.ಶತಮಾನಗಳ ಇತಿಹಾಸ ಹೊಂದಿರುವ ಶ್ರೀಕೃಷ್ಣ ರಾಜೇಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಿತವರು ಉತ್ತಮ ಮತ್ತು ಉನ್ನತ ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ನೆಲೆಸಿದ್ದು ಅವರ ಸಾಲಿಗೆ ಈಗ ಕಲಿಯುತ್ತಿರುವವರು ಸೇರಬೇಕೆಂದು ಬಯಸಿದ ಶಾಸಕರು, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಇತ್ತೀಚೆಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಇದಕ್ಕೆ ನಮ್ಮ ಉಪನ್ಯಾಸಕರು ಮತ್ತು ಶಿಕ್ಷಕರ ಪರಿಶ್ರಮ ಕಾರಣ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಚರಿತ್ರೆ ವಿಭಾಗದ ಮುಖ್ಯಸ್ಥ ಪ್ರೊ.ಎನ್. ಚನ್ನಸ್ವಾಮಿ ಸೋಸಲೆ ಮಾತನಾಡಿ, ಉದ್ಯೋಗಕ್ಕಾಗಿ ಮಾತ್ರ ಓದು ಎಂಬ ಕಲ್ಪನೆಯನ್ನು ವಿದ್ಯಾರ್ಥಿಗಳು ಮನಸ್ಸಿನಿಂದ ತೆಗೆದು ಹಾಕಿ ಮನೋವಿಕಾಸ, ಇತಿಹಾಸ, ಚರಿತ್ರೆ ಹಾಗೂ ವಾಸ್ತವ ಅರಿತು ಉತ್ತಮ ಬದುಕು ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದರು.ಪ್ರಾಂಶುಪಾಲ ಎಂ.ಸಿ. ಚಂದ್ರಶೇಖರ್‌, ಪ್ರೌಡಶಾಲಾ ವಿಭಾಗದ ಉಪ-ಪ್ರಾಂಶುಪಾಲ ಕೆ.ವೈ. ನಾರಾಯಣಪ್ರಸಾದ್, ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಸಾಕರಾಜು, ಸದಸ್ಯರಾದ ಬಿ.ಎಂ. ಮುರುಳಿ, ದಶರಥ, ಶಿವಣ್ಣನಾಯಕ, ರಮೇಶ್, ಸಾಲಿಗ್ರಾಮ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್, ಕ್ಷೇತ್ರದ ಕಾಂಗ್ರೆಸ್ ವಕ್ತಾರ ಸೈಯದ್‌ ಜಾಬೀರ್, ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.