ಶೃಂಗೇರಿತಾಲೂಕಿನಲ್ಲಿ ಪುಷ್ಯಮಳೆ ಆರ್ಭಟ ಜೋರಾಗಿದ್ದು ಭಾನುವಾರ ಮತ್ತೆ ಅಬ್ಬರಿಸಿತು. ಶನಿವಾರ ತುಂಗಾನದಿ ಪ್ರವಾಹದಿಂದ ಬಹುತೇಕ ಪ್ರದೇಶಗಳು ಜಲಾವೃತಬವಾಗಿ ರಸ್ತೆ ಸಂಪರ್ಕ ಕಡಿತ ಭಾನುವಾರವೂ ಮುಂದುವರಿಯಿತು.ಶ ನಿವಾರ ರಾತ್ರಿಯಿಡಿ ಮಳೆ ಅಬ್ಬರ, ತುಂಗಾ ನದಿಯ ಪ್ರವಾಹದಿಂದ ಜನಜೀವನ ತತ್ತರಿಸಿದೆ.

ನಿಲ್ಲದ ಮಳೆ ಆರ್ಭಟ । ತಗ್ಗುಪ್ರದೇಶಗಳು ಜಲಾವೃತ ಜನಜೀವನ ಅಸ್ತವ್ಯಸ್ತ.

ಕನ್ನಡಪ್ರಭ ವಾರ್ತೆ ಶೃಂಗೇರಿ

ತಾಲೂಕಿನಲ್ಲಿ ಪುಷ್ಯಮಳೆ ಆರ್ಭಟ ಜೋರಾಗಿದ್ದು ಭಾನುವಾರ ಮತ್ತೆ ಅಬ್ಬರಿಸಿತು. ಶನಿವಾರ ತುಂಗಾನದಿ ಪ್ರವಾಹದಿಂದ ಬಹುತೇಕ ಪ್ರದೇಶಗಳು ಜಲಾವೃತಬವಾಗಿ ರಸ್ತೆ ಸಂಪರ್ಕ ಕಡಿತ ಭಾನುವಾರವೂ ಮುಂದುವರಿಯಿತು.ಶ ನಿವಾರ ರಾತ್ರಿಯಿಡಿ ಮಳೆ ಅಬ್ಬರ, ತುಂಗಾ ನದಿಯ ಪ್ರವಾಹದಿಂದ ಜನಜೀವನ ತತ್ತರಿಸಿದೆ.

ಪಶ್ಚಿಮಘಟ್ಟಗಳ ತಪ್ಪಲು ತುಂಗಾನದಿ ಉಗಮಸ್ಥಳವಾದ ಎಸ್.ಕೆ.ಬಾರ್ಡರ್, ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ನೆಮ್ಮಾರು, ಕಿಗ್ಗಾ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗೆ ಯಿಂದ ಪ್ರವಾಹ ಇಳಿಯದೇ ಭಾನುವಾರವೂ ಜಲದಿಗ್ಬಂಧನ ಮುಂದುವರಿದಿತ್ತು.

ಗಾಂಧಿ ಮೈದಾನಕ್ಕೆ ಶನಿವಾರ ರಾತ್ರಿಯಿಂದ ತುಂಗಾನದಿ ಪ್ರವಾಹದ ನುಗ್ಗಿ ಭಾನುವಾರ ಸಂಪೂರ್ಣ ಜಲಾವೃತವಾಗಿತ್ತು. ಶ್ರೀಮಠದ ಬೋಜನಾ ಶಾಲೆ, ಶ್ರೀಮಠದಿಂದ ನರಸಿಂಹವನಕ್ಕೆ ಹೋಗುವ ದಾರಿ, ಸಂಧ್ಯಾವಂದನ ಮಂಟಪಕ್ಕೆ ನೀರು ತುಂಬಿ ಶ್ರೀ ಕಪ್ಪೆ ಶಂಕರ ದೇವಾಲಯ ಸಂಪೂರ್ಣ ಮುಳುಗಡೆಯಾಗಿತ್ತು.

ಗಾಂಧಿ ಮೈದಾನ ಕಲ್ಕಟ್ಟೆ ಸಂಪರ್ಕ ಕಲ್ಪಿಸುವ ತೂಗುಸೇತುವೆ ತುಂಗೆಯ ಪ್ರವಾಹಕ್ಕೆ ಸಿಲುಕಿದ್ದರಿಂದ ಸಂಪರ್ಕ ಮತ್ತೆ ಕಡಿತಗೊಂಡಿತ್ತು. ಜನನಿಬಿಡ ಕುರುಬಗೇರಿ ಸಂಪೂರ್ಣ ಜಲಾವೃತವಾಗಿ ಅಂಗಡಿ, ಮನೆಗಳಿಗೆ ಪ್ರವಾಹದ ನೀರು ನುಗ್ಗಿಸ ಜತೆಗೆ ಕುರುಬಗೇರಿ- ಶೃಂಗೇರಿ ರಸ್ತೆ ಸಂಪರ್ಕ ಕಡಿತಗೊಂಡಿತು. ಭಾರತೀ ಬೀದಿ, ಕೆವಿಆರ್ ವೃತ್ತ ಸಂಪರ್ಕ ಪ್ಯಾರಲಲ್ ರಸ್ತೆ ಮೇಲೂ ಪ್ರವಾಹ ಹರಿದು ರಸ್ತೆ ಸಂಪೂರ್ಣ ಜಲಾವೃತಗೊಂಡಿತು. ಶೃಂಗೇರಿ ವಿದ್ಯಾರಣ್ಯಪುರ ರಸ್ತೆ, ನೆಮ್ಮಾರು ಹೊಳೆಹದ್ದು ತೂಗುಸೇತುವೆಯ ಸಂಪರ್ಕ ಭಾನುವಾರ ಕಡಿತಗೊಂಡಿತ್ತು.

2 ಶ್ರೀ ಚಿತ್ರ 2-ಶೃಂಗೇರಿ ಶ್ರೀ ಮಠದ ಸಮೀಪ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ನದಿಯ ಪ್ರವಾಹ.

2 ಶ್ರೀ ಚಿತ್ರ 3-ಶೃಂಗೇರಿ ಪಟ್ಟಣದ ಜನನಿಬಿಡ ಪ್ರದೇಶ ಕುರುಬಗೇರಿಯಲ್ಲಿ ತುಂಗಾ ನದಿಯ ಪ್ರವಾಹ .