ಸಾರಾಂಶ
- ಪ್ರಥಮ ಬಾರಿಗೆ ಪರೀಕ್ಷೆ ಬರೆಯಲಿರುವ 2927 ವಿದ್ಯಾರ್ಥಿಗಳು
- ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ 138 ಶಿಕ್ಷಕರ ನೇಮಕ- ಪರೀಕ್ಷಾ ಕೇಂದ್ರದ ಸುತ್ತ 200 ಅಡಿವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ
- - - ಕನ್ನಡಪ್ರಭ ವಾರ್ತೆ ಹೊನ್ನಾಳಿ2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಈ ಬಾರಿ ಮಾರ್ಚ್ 25ರಿಂದ ಏಪ್ರಿಲ್ 6ರವರೆಗೆ ನ್ಯಾಮತಿ ಮತ್ತು ಹೊನ್ನಾಳಿ ಅವಳಿ ತಾಲೂಕಿನಲ್ಲಿ 7 ಸರ್ಕಾರಿ ಪ್ರೌಢಶಾಲೆಗಳು ಹಾಗೂ ಅನುದಾನಿತ ಪ್ರೌಢಶಾಲೆಗಳು 4 ಸೇರಿದಂತೆ ಒಟ್ಟು 11 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 3191 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ನಂಜರಾಜ್ ಹೇಳಿದರು.
ಪ್ರಥಮ ಬಾರಿಗೆ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು 1357 ಗಂಡು ಮಕ್ಕಳು, 1570 ಹೆಣ್ಣುಮಕ್ಕಳು ಒಟ್ಟು 2927, ಪುನರಾವರ್ತಿತ 164 ಗಂಡು, 59 ಹೆಣ್ಣುಮಕ್ಕಳು ಸೇರಿದಂತೆ ಒಟ್ಟು 223 ಮಕ್ಕಳು, ಇದೇ ರೀತಿ ಖಾಸಗಿ ವಿದ್ಯಾರ್ಥಿಗಳ ಪೈಕಿ 17 ಗಂಡು, 4 ಹೆಣ್ಣು ಸೇರಿದಂತೆ ಒಟ್ಟು 21 ಮಕ್ಕಳು ಇದ್ದು, ಪುನರಾವರ್ತಿತ ಖಾಸಗಿ ವಿದ್ಯಾರ್ಥಿಗಳ ಪೈಕಿ 18 ಗಂಡು, 2 ಹೆಣ್ಣು ಒಟ್ಟು 20 ಮಕ್ಕಳು, ಹೀಗೆ ಎಲ್ಲ ಸೇರಿ 1556 ಗಂಡು ಮಕ್ಕಳು ಹಾಗೂ 1635 ಹೆಣ್ಣುಮಕ್ಕಳು ಒಟ್ಟಾರೆಯಾಗಿ 3191 ಮಕ್ಕಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು.ಪರೀಕ್ಷೆ ಬರೆಯಲಿರುವ ಎಲ್ಲ ವಿದ್ಯಾರ್ಥಿಗಳಿಗೆ 149 ಸುವ್ಯವಸ್ಥಿತವಾದ ಕೊಠಡಿಗಳು ಹಾಗೂ ಪೀಠೋಪಕರಣಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದರು.
ಪರೀಕ್ಷಾ ಕೇಂದ್ರದ ಸುತ್ತ 200 ಅಡಿವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಪರೀಕ್ಷಾ ಕಾರ್ಯದ ಸುಗಮಕ್ಕೆ ರಕ್ಷಣಾ ವ್ವವಸ್ಥೆ ಮಾಡಲಾಗಿದೆ. ಪ್ರತಿ ಕೇಂದ್ರಕ್ಕೆ 1 ಪೊಲೀಸ್, 1 ಹೋಮ್ ಗಾರ್ಡ್‌ನಂತೆ ಒಟ್ಟು 22 ಸಿಬ್ಬಂದಿ ನಿಯೋಜಿಸಲಾಗಿದೆ. 11 ಆಶಾ ಕಾರ್ಯಕರ್ತೆಯರು, 11 ಆರೋಗ್ಯ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.138 ಶಿಕ್ಷಕರನ್ನು ಪರೀಕ್ಷಾ ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಕ ಮಾಡಿಕೊಂಡಿದ್ದು, 11 ಜನ ಸ್ಥಾನಿಕ ಜಾಗೃತದಳ, 5 ಜನ ಮಾರ್ಗಾಧಿಕಾರಿಗಳು ಹಾಗೂ ತಾಲೂಕುಮಟ್ಟದ ಅಧಿಕಾರಿಗಳನ್ನು ಸಂಚಾರಿ ಜಾಗೃತ ದಳದ ತಂಡದಲ್ಲಿ ನಿಯೋಜನೆ ಮಾಡಿಕೊಳ್ಳಲಾಗಿದೆ. 5 ಇಲಾಖೆ ವಾಹನಗಳಲ್ಲಿ ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳನ್ನು ಸರಬರಾಜು ಮಾಡಲು ಬಳಸಿಕೊಳ್ಳಲಾಗುವುದು, ಗೈರುಹಾಜರಿ ಹಾಗೂ ಸ್ವೀಕೃತಿ ಕೇಂದ್ರಗಳ ನಿರ್ವಹಣೆಗಾಗಿ ಶಿಕ್ಷಣ ಸಂಯೋಜಕ ಎಸ್.ಎಚ್. ಬಸವರಾಜ್ ಅವರನ್ನು ನಿಯೋಜನೆ ಮಾಡಿದ್ದು, ಸಹಾಯವಾಣಿ ಸಂಖ್ಯೆ: 9743875176 ಆಗಿರುತ್ತದೆ ಎಂದು ಬಿಇಒ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಇಸಿಒ ಮುದ್ದನಗೌಡ, ಬಸವರಾಜ್ ಮುಂತಾದವರು ಇದ್ದರು.- - - (-ಫೋಟೋ: ಸಾಂದರ್ಭಿಕ ಚಿತ್ರ)