ಎಸ್.ಎಸ್.ಎಲ್.ಸಿ. ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 95 ಮಂದಿ ಗೈರು

| Published : Mar 26 2024, 01:03 AM IST

ಎಸ್.ಎಸ್.ಎಲ್.ಸಿ. ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 95 ಮಂದಿ ಗೈರು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಒಟ್ಟು 51 ಪರೀಕ್ಷಾ ಕೇಂದ್ರಗಳಲ್ಲಿ 13,701 ಜನ ಪರೀಕ್ಷೆ ತೆಗೆದುಕೊಂಡಿದ್ದು, ಅವರಲ್ಲಿ 13606 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿಜಿಲ್ಲಾದ್ಯಂತ ಸೋಮವಾರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಗಳು ಆರಂಭಗೊಂಡಿದ್ದು, ಮೊದಲ ದಿನ ಕನ್ನಡ ಭಾಷಾ ಪರೀಕ್ಷೆಯಲ್ಲಿ ಒಟ್ಟು 95 ಮಂದಿ ಗೈರು ಹಾಜರಾಗಿದ್ದರು.

ಜಿಲ್ಲೆಯಲ್ಲಿ ಒಟ್ಟು 51 ಪರೀಕ್ಷಾ ಕೇಂದ್ರಗಳಲ್ಲಿ 13,701 ಜನ ಪರೀಕ್ಷೆ ತೆಗೆದುಕೊಂಡಿದ್ದು, ಅವರಲ್ಲಿ 13606 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.ಬೈಂದೂರು ತಾಲೂಕಿನಲ್ಲಿ ಒಟ್ಟು 2055 ವಿದ್ಯಾರ್ಥಿಗಳು ನೋಂದಾಯಿಸಿ, 2046 ಹಾಜರಾಗಿ, 9 ವಿದ್ಯಾರ್ಥಿಗಳು ಗೈರಾಗಿದ್ದರು. ಕುಂದಾಪುರ ತಾಲೂಕಿನಲ್ಲಿ 2683 ವಿದ್ಯಾರ್ಥಿಗಳು ನೋಂದಾಯಿಸಿದ್ದು, 2666 ಪರೀಕ್ಷೆಗೆ ಹಾಜರಾಗಿ, 17 ಮಂದಿ ಗೈರು, ಕಾರ್ಕಳ ತಾಲೂಕಿನಲ್ಲಿ 2675 ಮಂದಿ ಪರೀಕ್ಷೆಗೆ ನೋಂದಾಯಿಸಿ, 2657 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 18 ಜನ ಗೈರು, ಬ್ರಹ್ಮಾವರ ತಾಲೂಕಿನಲ್ಲಿ 2759 ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, 2727 ಮಂದಿ ಪರೀಕ್ಷೆ ಬರೆದಿದ್ದು, 32 ಜನ ಗೈರು ಹಾಗೂ ಉಡುಪಿ ತಾಲೂಕಿನಲ್ಲಿ 3529 ಮಂದಿ ಪರೀಕ್ಷೆಗೆ ನೋಂದಾಯಿಸಿ, 3510 ಜನ ಹಾಜರಾಗಿ, 19 ಗೈರುಹಾಜರಾಗಿದ್ದರು.* ಪರೀಕ್ಷೆಗೆ ಸಹಾಯವಿಶೇಷ ಎಂದರೆ ಉಡುಪಿ ನಗರದ ನಿಟ್ಟೂರು ಹೈಸ್ಕೂಲಿನ ಮಾನಸಿಕ ವಿಕಲಚೇತನ ವಿದ್ಯಾರ್ಥಿನಿ ಮಧು ಕಂಕನವಾಡಿ ಪರವಾಗಿ 9ನೇ ತರಗತಿಯ ವಿದ್ಯಾರ್ಥಿನಿ ಭಾಗ್ಯಶ್ರೀ ಪರೀಕ್ಷೆ ಬರೆದರೆ, ಭಾನುವಾರವಷ್ಟೆ ಬಿದ್ದು ತೀವ್ರತರವಾಗಿ ಗಾಯಗೊಂಡಿದ್ದ ಪರ್ಕಳ ಇಂಗ್ಲಿಷ್ ಮೀಡಿಯಂ ಹೈಸ್ಕೂಲಿನ ವಿದ್ಯಾರ್ಥಿನಿ ಭವಿಷ್ಯ ಅವರು ಸ್ತುತಿ ಶೆಟ್ಟಿ ಸಹಾಯದಿಂದ ಪರೀಕ್ಷೆ ಬರೆದಿದ್ದಾರೆ.

ನಗರದ ಮಣಿಪಾಲ ಜೂನಿಯರ್ ಕಾಲೇಜಿಗೆ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡಿಡಿಪಿಐ ಗಣಪತಿ, ಶಿಕ್ಷಣಾಧಿಕಾರಿಗಳು, ಮೇಲ್ವಿಚಾರಕರು ಹಾಗೂ ಇತರರು ಉಪಸ್ಥಿತರಿದ್ದರು.