ಜಿಲ್ಲೆಯಲ್ಲಿ ಸುಸೂತ್ರವಾಗಿ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆ

| Published : Mar 26 2024, 01:06 AM IST

ಜಿಲ್ಲೆಯಲ್ಲಿ ಸುಸೂತ್ರವಾಗಿ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಇನ್ನು ಸೋಮವಾರ ಬೆಳಿಗ್ಗೆ ಪರೀಕ್ಷೆಗಳು ಆರಂಭವಾಗುವ ಮುನ್ನವೇ ಕೇಂದ್ರಗಳಿಗೆ ವಿದ್ಯಾರ್ಥಿಗಳು ಆಗಮಿಸಿದ್ದರು. ಕೆಲವು ಪೋಷಕರು ವಿದ್ಯಾರ್ಥಿಗಳನ್ನು ಕೇಂದ್ರಕ್ಕೆ ಕರೆ ತಂದು ಬಿಟ್ಟ ದೃಶ್ಯವೂ ಕಂಡು ಬಂದಿತು.

ಪ್ರಥಮಭಾಷೆ ಕನ್ನಡ ಪರೀಕ್ಷೆಗೆ 12841 ವಿದ್ಯಾರ್ಥಿಗಳು ಹಾಜರು । 149 ವಿದ್ಯಾರ್ಥಿಗಳು ಗೈರು

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲೆಯಲ್ಲಿ ಸೋಮವಾರದಿಂದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ಜರುಗಿತು.

ಪ್ರಥಮ ಭಾಷೆ ಪರೀಕ್ಷೆಯಲ್ಲಿ 12990 ವಿದ್ಯಾರ್ಥಿಗಳ ಪೈಕಿ 12841 ಮಂದಿ ಹಾಜರಾಗಿದ್ದು, 149 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದರು. ಯಾವೊಬ್ಬ ವಿದ್ಯಾರ್ಥಿಯೂ ಡಿಬಾರ್ ಆಗಿಲ್ಲ.

ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಣ ಮಂಡಳಿ ಪರೀಕ್ಷಾ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಆಳವಡಿಕೆ ಮಾಡಿತ್ತು. ಹಾಗಾಗಿ ಜಿಲ್ಲೆಯ 50 ಪರೀಕ್ಷಾ ಕೇಂದ್ರಗಳ ಎಲ್ಲಾ ಕೊಠಡಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಇದರ ಕಣ್ಗಾವಲಿನಲ್ಲಿ ವಿದ್ಯಾರ್ಥಿಗಳು ಎಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾರೆ. ಇದಕ್ಕಾಗಿ ರಾಮನಗರ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಕಂಟ್ರೋಲ್ ರೂಮ್ ಸಹ ತೆರೆಯಲಾಗಿತ್ತು.

ಇನ್ನು ಸೋಮವಾರ ಬೆಳಿಗ್ಗೆ ಪರೀಕ್ಷೆಗಳು ಆರಂಭವವಾಗುವ ಮುನ್ನವೇ ಕೇಂದ್ರಗಳಿಗೆ ವಿದ್ಯಾರ್ಥಿಗಳು ಆಗಮಿಸಿದ್ದರು. ಕೆಲವು ಪೋಷಕರು ವಿದ್ಯಾರ್ಥಿಗಳನ್ನು ಕೇಂದ್ರಕ್ಕೆ ಕರೆ ತಂದು ಬಿಟ್ಟ ದೃಶ್ಯವೂ ಕಂಡು ಬಂದಿತು. ಜತೆಗೆ, ಪರೀಕ್ಷಾ ಕೇಂದ್ರದ ಸುತ್ತಮುತ್ತಲು ವಿದ್ಯಾರ್ಥಿಗಳು ಕೊನೆ ಕ್ಷಣದ ತಯಾರಿ ನಡೆಸಿದ ದೃಶ್ಯವೂ ಕಂಡು ಬಂದಿತು. ನೋಂದಣಿ ಸಂಖ್ಯೆ ನೋಡಲು ವಿದ್ಯಾರ್ಥಿಗಳು ಮುಗಿಬಿದ್ದರು.

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯು ಶಾಂತಿಯುತವಾಗಿ ಆರಂಭ ಕಂಡಿದೆ. ಮೊದಲ ದಿನ ಯಾವುದೇ ಅಹಿತಕರ ಘಟನೆ ಜರುಗಿಲ್ಲ. ಜತೆಗೆ, ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿಲ್ಲ. ಇನ್ನು ಪರೀಕ್ಷಾ ಕೇಂದ್ರದಕ್ಕೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಜಿಲ್ಲೆಯ ಪ್ರತಿ ತಾಲೂಕಿಗೆ ಒಂದರಂತೆ ಅಂಬ್ಯುಲೆನ್ಸ್ ನಿಯೋಜನೆ ಮಾಡಲಾಗಿತ್ತು.

ಶಿಕ್ಷಣ ಇಲಾಖೆ ಉಪನಿರ್ದೇಶಕ ಪುರುಷೋತ್ತಮ್ ಅವರು ಸೋಮವಾರ ಮಾಗಡಿ ತಾಲೂಕಿನ ಸುಗ್ಗನಹಳ್ಳಿ, ಕುದೂರು, ತಿಪ್ಪಸಂದ್ರ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಸ್ಥಳೀಯ ಸಿಬ್ಬಂದಿಗೆ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಮುನ್ನಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಿದರು.------------------------------

ಬಾಕ್ಸ್ ...

ವಿದ್ಯಾರ್ಥಿಗಳ ಹಾಜರಾತಿ

ತಾಲೂಕು ಹಾಜರಾತಿ, ಗೈರು ಹಾಜರಾತಿ

ಚನ್ನಪಟ್ಟಣ 2936, 20

ಕನಕಪುರ 3936, 31

ಮಾಗಡಿ 2522, 39

ರಾಮನಗರ 3447, 59-------------------------------------------------------

ಒಟ್ಟು 12841, 149

-------------------------------------------------------

ಕೋಟ್...

ಜಿಲ್ಲೆಯಲ್ಲಿ ಸೋಮವಾರದಿಂದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಆರಂಭವಾಗಿದ್ದು, ಪ್ರಥಮ ಭಾಷೆ ವಿಷಯಕ್ಕೆ ಪರೀಕ್ಷೆ ಜರುಗಿದೆ. ಈ ವೇಳೆ ಯಾವುದೇ ಅಹಿತಕರ ಘಟನೆ ಜರುಗಿಲ್ಲ. ಸುಸೂತ್ರವಾಗಿ ಮೊದಲ ದಿನ ಪರೀಕ್ಷೆ ಮುಕ್ತಾಯವಾಗಿದೆ.

-ಪುರುಷೋತ್ತಮ, ಡಿಡಿಪಿಐ, ರಾಮನಗರ.

--------------------------------------