ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: 90 ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆ

| Published : Mar 24 2024, 01:36 AM IST

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: 90 ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಪರೀಕ್ಷೆ ಬರೆಯಲಿರುವ ಜಿಲ್ಲೆಯ 560 ಶಾಲೆಗಳ ಒಟ್ಟು 29645 ವಿದ್ಯಾರ್ಥಿಗಳು. 1309 ಪರೀಕ್ಷಾ ಕೋಣೆಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ. ಜಿಲ್ಲೆಯಲ್ಲಿ 90 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಸುಮಾರು 560 ಪ್ರೌಢ ಶಾಲೆಗಳ ಒಟ್ಟು 29645 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿ ಇದರಲ್ಲಿ 27194- ಹೊಸಬರು ಹಾಗೂ 2451 -ಪುನರಾವರ್ತಿತ (ರಿಪೀಟರ್) ವಿದ್ಯಾರ್ಥಿಗಳಿದ್ದಾರೆ.

ಮೌಲಾನಾ ಸಾಬ್‌

ಕನ್ನಡಪ್ರಭ ವಾರ್ತೆ ಬೀದರ್‌

ಇದೇ ಮಾ. 25ರಿಂದ ಜಿಲ್ಲೆಯ 90 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭಗೊಂಡು ಏ.6ರ ವರೆಗೆ ನಡೆಯಲಿದ್ದು ಇದಕ್ಕಾಗಿ ಶಿಕ್ಷಣ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಜಿಲ್ಲೆಯಲ್ಲಿ 90 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸುಮಾರು 560 ಪ್ರೌಢ ಶಾಲೆಗಳ ಒಟ್ಟು 29645 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿ ಇದರಲ್ಲಿ 27194- ಹೊಸಬರು ಹಾಗೂ 2451 -ಪುನರಾವರ್ತಿತ (ರಿಪೀಟರ್) ವಿದ್ಯಾರ್ಥಿಗಳಿದ್ದಾರೆ.

ತಾಲೂಕುವಾರು ವಿದ್ಯಾರ್ಥಿಗಳ, ಪರೀಕ್ಷಾ ಕೇಂದ್ರ, ಶಾಲೆಗಳ ಅಂಕಿ ಅಂಶ: ಔರದ್‌ ತಾಲೂಕಿನ 13 ಪರೀಕ್ಷಾ ಕೇಂದ್ರಗಳಲ್ಲಿ 68 ಶಾಲೆಗಳ ಒಟ್ಟು 3598 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬಸವಕಲ್ಯಾಣ ತಾಲೂಕಿನ 17 ಪರೀಕ್ಷಾ ಕೇಂದ್ರಗಳಲ್ಲಿ 110 ಶಾಲೆಗಳ ಒಟ್ಟು 5917 ವಿದ್ಯಾರ್ಥಿಗಳು ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆಗೆ ಹಾಜರಿರುವರಿದ್ದಾರೆ.

ಭಾಲ್ಕಿ ತಾಲೂಕಿನ 16 ಪರೀಕ್ಷಾ ಕೇಂದ್ರಗಳಲ್ಲಿ 88 ಶಾಲೆಗಳ ಒಟ್ಟು 4953 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೀದಕ್ ತಾಲೂಕಿನ 26 ಪರೀಕ್ಷಾ ಕೇಂದ್ರಗಳಲ್ಲಿ 159 ಶಾಲೆಗಳ ಒಟ್ಟು 8618 ವಿದ್ಯಾರ್ಥಿಗಳು ಪರೀಕ್ಷೆಗೆ ಬರಲಿದ್ದಾರೆ ಹುಮನಾಬಾದ್‌ ತಾಲೂಕಿನ 18 ಪರೀಕ್ಷಾ ಕೇಂದ್ರಗಳಲ್ಲಿ 135 ಶಾಲೆಗಳ ಒಟ್ಟು 6559 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಜಿಲ್ಲೆಯಲ್ಲಿ 5 ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳು: ಜಿಲ್ಲೆಯ 90 ಪರೀಕ್ಷಾ ಕೇಂದ್ರಗಳ ಪೈಕಿ ಪ್ರತಿ ತಾಲೂಕಿಗೊಂದು ಕೇಂದ್ರ ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರ ಎಂದು ಗುರುತಿಸಲಾಗಿದೆ. ಔರಾದ್‌ ತಾಲೂಕಿನಲ್ಲಿ 3 ಸೂಕ್ಷ್ಮ, 9 ಸಾಮಾನ್ಯ ಕೇಂದ್ರಗಳಿವೆ.

ಬಸವಕಲ್ಯಾಣ ತಾಲೂಕಿನಲ್ಲಿ 3 ಸೂಕ್ಷ್ಮ ಹಾಗೂ 13 ಸಾಮಾನ್ಯ, ಭಾಲ್ಕಿ ತಾಲೂಕಿನಲ್ಲಿ 3 ಸೂಕ್ಷ್ಮ ಹಾಗೂ12 ಸಾಮಾನ್ಯ, ಬೀದರ್‌ ತಾಲೂಕಿನಲ್ಲಿ 4 ಸೂಕ್ಷ್ಮ ಹಾಗೂ 21 ಸಾಮಾನ್ಯ ಹಾಗೂ ಹುಮನಾಬಾದ್‌ ತಾಲೂಕಿನಲ್ಲಿ 3 ಸೂಕ್ಷ್ಮ ಹಾಗೂ 14 ಸಾಮಾನ್ಯ ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದೆ. ಪ್ರಥಮ ಪ್ರಯೋಗದಂತೆ ಎಲ್ಲ 90 ಪರೀಕ್ಷಾ ಕೇಂದ್ರಗಳನ್ನು ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಜಿಲ್ಲಾಮಟ್ಟದಲ್ಲಿ 10 ಜಾಗೃತ ದಳ ತಂಡ: ಎಸ್ಸೆಸ್ಸೆಲ್ಸಿ ಪರೀಕ್ಷೆ ಸೂಸುತ್ರವಾಗಿ ನಡೆಸಲು ಜಿಲ್ಲಾಡಳಿತದಿಂದ 5 ಹಾಗೂ ಶಿಕ್ಷಣ ಇಲಾಖೆಯಿಂದ 5 ಜಾಗೃತ ದಳಗಳನ್ನು ರಚಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸಿಟಿಂಗ್‌ ಜಾಗೃತ ದಳ ಇದ್ದೆ ಇರುತ್ತದೆ. ಜಿಲ್ಲೆಯ 90 ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆಯ ಪತ್ರಿಕೆಗಳನ್ನು ವಿತರಿಸಲು 39 ಮಾರ್ಗಾಳುಗಳನ್ನು ನೇಮಿಸಲಾಗಿದೆ.ನಕಲು ಮುಕ್ತ ಪರೀಕ್ಷೆಗೆ ಎಲ್ಲರೂ ಸಹಕರಿಸಿ

ಜಿಲ್ಲೆಯಲ್ಲಿ ಮಾ. 25ರಿಂದ ಆರಂಭವಾಗುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ನಕಲು ಮುಕ್ತ ನಡೆಸಲು ವಿದ್ಯಾರ್ಥಿಗಳ ಪೋಷಕರು ಹಾಗೂ ಪಾಲಕರು ಸಹಕರಿಸಬೇಕು. ಪರೀಕ್ಷಾ ಕೇಂದ್ರಗಳತ್ತ ಅನಗತ್ಯ ಯಾರೂ ಸುಳಿಯದೇ ಮಕ್ಕಳಿಗೆ ಸುಸೂತ್ರವಾಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು. ವಿದ್ಯಾರ್ಥಿಗಳು ಪರೀಕ್ಷೆಗೆ ಹೆದರದೆ ಮುಕ್ತವಾಗಿ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ತರುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಲಿ.

ಸಲೀಂ ಪಾಶಾ, ಡಿಡಿಪಿಐ, ಬೀದರ್‌