ಸೇಂಟ್ ಜಾನ್ಸ್ ಶಾಲೆ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

| Published : Jan 28 2024, 01:15 AM IST

ಸಾರಾಂಶ

ಪರೀಕ್ಷಾ ಸಿದ್ಧತೆಯ ಸಲಹೆಗಳ ನೀಡಿ, ಉತ್ತಮ ಹವ್ಯಾಸಗಳ ರೂಢಿಸಿಕೊಳ್ಳುವುದರೊಂದಿಗೆ ನಿಮ್ಮ ಜ್ಞಾನ ಜ್ಯೋತಿ ವಿಶ್ವದಾದ್ಯಂತ ಪಸರಿಸಬೇಕು ಎಂದು ಡಾ.ಎಚ್.ವಿ.ವಾಮದೇವಪ್ಪ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ದಾವಣಗೆರೆ: ನಗರದ ಸೇಂಟ್ ಜಾನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿ ಗಳಿಸಿ ಶಾಲೆ, ಪೋಷಕರಿಗೆ ಕೀರ್ತಿ ತಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಟ್ರೂತ್‌ವೇ ಫೆಲೋಶಿಪ್ ಚರ್ಚ್ ಫಾಶ್ಟರ್ ರೂಬಿ ನಿರ್ಮಲಾ ಪ್ರತಿಜ್ಞಾವಿಧಿ ನೆರವೇರಿಸಿದರು. ಈ ಸಂದರ್ಭದಲ್ಲಿ ಸಿರಿಗೆರೆ ಎಸ್‌ಟಿಜೆ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ.ಎಚ್.ವಿ.ವಾಮದೇವಪ್ಪ ಮಾತನಾಡಿ, ಪರೀಕ್ಷಾ ಸಿದ್ಧತೆಯ ಸಲಹೆಗಳ ನೀಡಿ, ಉತ್ತಮ ಹವ್ಯಾಸಗಳ ರೂಢಿಸಿಕೊಳ್ಳುವುದರೊಂದಿಗೆ ನಿಮ್ಮ ಜ್ಞಾನ ಜ್ಯೋತಿ ವಿಶ್ವದಾದ್ಯಂತ ಪಸರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಈ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ.ಸಂತೋಷ್ ಮಾತನಾಡಿ, ದುಶ್ಚಟಗಳಿಗೆ ಒಳಗಾಗದೇ ಉತ್ತಮ ಭವಿಷ್ಯದ ದಿನಗಳ ಕಡೆ ನಿಮ್ಮ ನಡೆ ಇರಲಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

2023ನೇ ಶೈಕ್ಷಣಿಕ ಸಾಲಿನ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನಾ ಫಲಕಗಳನ್ನು ನೀಡಲಾಯಿತು. ಹಾಗೂ ಹುಲ್ಲುಮನೆ ರಾಮಪ್ಪ ಭೀಮಪ್ಪ ಚಿನ್ನದ ಪದಕಗಳನ್ನು ಸಿ.ಎಂ.ರುಚಿತಾ, ಎಲ್.ಭೂಮಿಕಾರಿಗೆ ನೀಡಿ ಗೌರವಿಸಿದರು.

ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಅನಿಲ್ ಕುಮಾರ್, ಕಾರ್ಯದರ್ಶಿ ಟಿ.ಎಂ.ಉಮಾಪತಯ್ಯ, ಖಜಾಂಚಿ ಪ್ರವೀಣ್ ಹುಲ್ಲುಮನೆ, ಪ್ರಾಚಾರ್ಯ ಆರ್.ಸಯ್ಯದ್ ಆರಿಫ್, ಪ್ರೀತಿ ಟಿ.ರೈ, ಉಪ ಪ್ರಾಚಾರ್ಯೆ ಎಸ್.ಎಂ.ನೇತ್ರಾವತಿ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.......