ಸಾರಾಂಶ
ಮಂಗಳೂರು ನಗರ ಪೊಲೀಸ್ಸ್ ಕಮಿಷನರೇಟ್ಟ್ ವ್ಯಾಪ್ತಿಯ ಪೊಲೀಸರ ವಾರ್ಷಿಕ ಕ್ರೀಡಾಕೂಟಕ್ಕೆ ಅಥ್ಲೀಟ್ಟ್ ಎಂ.ಆರ್ರ್. ಪೂವಮ್ಮ ಚಾಲನೆ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ನಗರ ಪೊಲೀಸ್ ಕಮೀಷನರೇಟ್‌ನ ವಾರ್ಷಿಕ ಪೊಲೀಸ್ ಕ್ರೀಡಾಕೂಟ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ನಡೆಯಿತು. ಅಂತಾರಾಷ್ಟ್ರೀಯ ಕ್ರೀಡಾಪಟು ಎಂ.ಆರ್. ಪೂವಮ್ಮ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಪೂವಮ್ಮ, ಸಣ್ಣ ವಯಸ್ಸಿನಲ್ಲೇ ಮಕ್ಕಳು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳುವಂತೆ ಹೆತ್ತವರು ಪ್ರೇರಣೆ ನೀಡಬೇಕು. ಶಿಕ್ಷಣದೊಂದಿಗೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದರೆ ಸುಲಭವಾಗಿ ಉದ್ಯೋಗ ಪಡೆಯಲು ಸಾಧ್ಯ ಎಂದು ಸಲಹೆ ನೀಡಿದರು.
ಮಂಗಳೂರು ಸಿಎಆರ್‌ನ ಆರ್‌ಎಸ್‌ಐ ಸಂತೋಷ್ ನೇತೃತ್ವದಲ್ಲಿ ಕ್ರೀಡಾಪಟುಗಳು ಕ್ರೀಡಾ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಉಪ ಪೊಲೀಸ್ ಆಯುಕ್ತ ಉಮೇಶ್ ಪಿ, ಸಹಾಯಕ ಆಯುಕ್ತರಾದ ಗೀತಾ ಕುಲಕರ್ಣಿ, ಪಿಎ ಹೆಗಡೆ, ಧನ್ಯಾ ನಾಯ್ಕ, ಸಿಐಎಸ್‌ಎಫ್ ಡೆಪ್ಯುಟಿ ಕಮಾಂಡೆಂಟ್ ಪಾಠಕ್, ಎಂಆರ್‌ಪಿಎಲ್‌ನ ಡೆಪ್ಯುಟಿ ಕಮಾಡೆಂಟ್ ವಿಕ್ರಂ, ನಿವೃತ್ತ ಡಿಸಿಪಿ ಡಾ. ಧರ್ಮಯ್ಯ, ನಿವೃತ್ತ ಎಸ್‌ಪಿ ಹರಿಶ್ಚಂದ್ರ,ನಿವೃತ್ತ ಕಮಾಡೆಂಟ್ ಡಾ. ಶಿವಪ್ರಸಾದ್ ರೈ, ಪಬ್ಲಿಕ್ ಪ್ರಾಸಿಕ್ಯೂಟರ್ ಮೋಹನ್ ಕುಮಾರ್ ಮತ್ತು ಜ್ಯೋತಿ ನಾಯಕ್, ನಿವೃತ್ತ ಪೊಲೀಸ್ ಅಧಿಕಾರಿಗಳಾದ ವಿಶ್ವನಾಥ ಪಂಡಿತ್, ತಿಲಕಚಂದ್ರ ಇದ್ದರು.ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸ್ವಾಗತಿಸಿದರು. ಉಪ ಪೊಲೀಸ್ ಆಯುಕ್ತ ದಿನೇಶ್ ಕುಮಾರ್ ಬಿಪಿ ವಂದಿಸಿದರು.ಕ್ರೀಡಾಕೂಟದ ಸಮಾರೋಪ ಸಮಾರಂಭ ನ.28ರಂದು ಸಂಜೆ 4 ಗಂಟೆಗೆ ನಡೆಯಲಿದೆ. ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.