ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಸ್ಟಾರ್ಟ್ ಅಪ್ ಕಂಪನಿ ಆರಂಭಿಸಿ ಉದ್ಯೋಗದಾತರಾಗಬೇಕು ಎಂದು ಪ್ರಾಧ್ಯಾಪಕ ಪ್ರೊ.ಪಿ. ಪರಮಶಿವಯ್ಯ ಹೇಳಿದರು.ನಗರದ ವಿವಿ ಕಲಾ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ನಿರ್ವಹಣಾ ವಿಭಾಗವು ಶನಿವಾರ ಆಯೋಜಿಸಿದ್ದ ‘ಸಂಕಲ್ಪ-2024’ ಸಾಂಪ್ರದಾಯಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾಲೇಜು ಜೀವನ ವಿಭಿನ್ನ ಅನುಭವಗಳನ್ನು ದಯಪಾಲಿಸುತ್ತದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅನುಭವಗಳು ಉದ್ಯೋಗ ಸಂಬಂಧಿ ಕಲ್ಪನೆಗಳನ್ನು ಕೊಡುತ್ತವೆ. ಕಲ್ಪನೆಗಳನ್ನು ಹೂಡಿಕೆ ಮಾಡಿದಾಗ ಉದ್ಯೋಗಿಯಿಂದ ಉದ್ಯೋಗದಾತರಾಗಿ ಹೊರಹೊಮ್ಮಬಹುದು ಎಂದು ತಿಳಿಸಿದರು.
ವಾಣಿಜ್ಯ ನಿಕಾಯದ ಡೀನ್ ಪ್ರೊ.ಶೇಖರ್ ಬಿ.ಮಾತನಾಡಿ, ಹೃದಯಕ್ಕೆ ಹರಿದ ಶಿಕ್ಷಣ ಜೀವನವನ್ನು ರೂಪಿಸುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿ, ನಾಯಕತ್ವ ಗುಣವನ್ನು ವಿಸ್ತಾರವಾಗಿ ವೃದ್ಧಿಸುವ ಸಮಗ್ರ ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು.ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಮಾತನಾಡಿ, ಸರ್ವವನ್ನು ಒಳಗೊಂಡು, ಸರ್ವಧರ್ಮವನ್ನು ಪೋಷಿಸಿಕೊಂಡು ಬಂದಿರುವ ಭಾರತದೇಶ ವಿವಿಧತೆಯಲ್ಲಿ ಏಕತೆಯ ಮಂತ್ರವನ್ನು ವಿಶ್ವಕ್ಕೆ ಸಾರಿದೆ ಎಂದರು. ಡಾ.ಸಿ.ಶೋಭಾ, ಸಹ ಪ್ರಾಧ್ಯಾಪಕಿ ಡಾ. ವನಜಾಕ್ಷಿ, ಸಹಾಯಕ ಪ್ರಾಧ್ಯಾಪಕ ಚಂದ್ರಮೌಳಿ, ಸಹಾಯಕ ಗ್ರಂಥಪಾಲಕಿ ಡಾ. ಸುಮಾದೇವಿ ಎಸ್.,ದೈಹಿಕ ಶಿಕ್ಷಣ ಮತ್ತುಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಡಾ. ಆರ್.ಸುದೀಪ್‌ಕುಮಾರ್ ಉಪಸ್ಥಿತರಿದ್ದರು.