ಟಿ. ನರಸೀಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ

| Published : Mar 26 2024, 01:05 AM IST

ಸಾರಾಂಶ

ಸಿಆರ್ ಪಿ ನವೀನ್ , ವ್ಯವಸ್ಥಾಪಕ ಸೋಮಣ್ಣ, ಕೆ.ಜಿ. ಸತೀಶ್, ಸೂರ್ಯ ನಾರಾಯಣ್, ಬಿ. ಕುಮಾರಸ್ವಾಮಿ, ಚೆನ್ನಪ್ಪ ಸೇರಿದಂತೆ ಹಲವರುಇದ್ದರು ಎಲ್ಲಾ ಕೇಂದ್ರ ಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು . ಯಾವುದೇ ಆತಂಕವಿಲ್ಲದೇ ವಿದ್ಯಾರ್ಥಿಗಳು ಮೊದಲ ಪರೀಕ್ಷೆ ಬರೆದರು.

ನರಸೀಪುರದ ಹೌಸಿಂಗ್ ಬೋರ್ಡ್ ನಲ್ಲಿರುವ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಬಿಇಒ ಶೋಭಾ ಅವರು ಗುಲಾಬಿ ನೀಡಿ ಸ್ವಾಗತಿಸಿದರು. ಕೇಂದ್ರದ ಅಧೀಕ್ಷಕ ಮಂಟೇಸ್ವಾಮಿ, ಸಂಸ್ಥೆಯ ವ್ಯವಸ್ಥಾಪಕ ಸೋಮಣ್ಣ, ಸಿಆರ್ ಪಿ ನವೀನ್, ಸತೀಶ್ ಮೊದಲಾದವರು ಇದ್ದಾರೆ.

ಎಸ್ಸಸ್ಸೆಲ್ಸಿ ಪರೀಕ್ಷೆಯು ಸೋಮವಾರದಿಂದ ತಾಲೂಕಿನ 13 ಕೇಂದ್ರಗಳಲ್ಲಿ ಆರಂಭವಾಯಿತು. ಪಟ್ಟಣದ ಹೌಸಿಂಗ್ ಬೋರ್ಡ್ ನ ಬಿಜಿಎಸ್ ಆದಿ ಚುಂಚನಗಿರಿ ಶಾಲಾ ಕೇಂದ್ರದಲ್ಲಿ ಬಿಇಒ ಜಿ. ಶೋಭಾ ಹಾಗೂ ಮುಖ್ಯ ಅಧೀಕ್ಷಕ ಮಂಟೇಸ್ವಾಮಿ ಅವರು ಪರೀಕ್ಷೆ ಗೆ ಹಾಜರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ ಸ್ವಾಗತಿಸಿ ಪರೀಕ್ಷೆಗೆ ಶುಭ ಕೋರಿದರು. ಸಿಆರ್ ಪಿ ನವೀನ್ , ವ್ಯವಸ್ಥಾಪಕ ಸೋಮಣ್ಣ, ಕೆ.ಜಿ. ಸತೀಶ್, ಸೂರ್ಯ ನಾರಾಯಣ್, ಬಿ. ಕುಮಾರಸ್ವಾಮಿ, ಚೆನ್ನಪ್ಪ ಸೇರಿದಂತೆ ಹಲವರುಇದ್ದರು ಎಲ್ಲಾ ಕೇಂದ್ರ ಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು . ಯಾವುದೇ ಆತಂಕವಿಲ್ಲದೇ ವಿದ್ಯಾರ್ಥಿಗಳು ಮೊದಲ ಪರೀಕ್ಷೆ ಬರೆದರು.