ಕೃಷಿ ಚಟುವಟಿಕೆ ಜೊತೆ ಹೈನುಗಾರಿಕೆಯನ್ನೂ ಆರಂಭಿಸಿದಲ್ಲಿ ಆರ್ಥಿಕ ಅಭಿವೃದ್ಧಿ: ಕುಮಾರ್‌

| Published : Oct 05 2024, 01:38 AM IST

ಕೃಷಿ ಚಟುವಟಿಕೆ ಜೊತೆ ಹೈನುಗಾರಿಕೆಯನ್ನೂ ಆರಂಭಿಸಿದಲ್ಲಿ ಆರ್ಥಿಕ ಅಭಿವೃದ್ಧಿ: ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಕೃಷಿ ಚಟುವಟಿಕೆಗಳ ಜೊತೆ ಹೈನುಗಾರಿಕೆ, ಮೀನುಗಾರಿಕೆ, ಕುರಿ-ಕೋಳಿ, ಮೇಕೆ ಸಾಕಾಣಿಕೆಯಂತಹ ಉದ್ದೆಮೆಗಳನ್ನೂ ಆರಂಭಿಸಬೇಕು. ಇದರಿಂದ ಆರ್ಥಿಕ ಸಬಲತೆ ಸಾಧಿಸಲು ಸಾಧ್ಯ ಎಂದು ತಾಲೂಕು ರೈತ ಸಂಘ ಕಾರ್ಯದರ್ಶಿ ಕುಮಾರ್ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಹಿರೇಕೋಗಲೂರಿನಲ್ಲಿ ಹೈನುಗಾರಿಕೆ ತರಬೇತಿ ಶಿಬಿರ - - - ಚನ್ನಗಿರಿ: ರೈತರು ಕೃಷಿ ಚಟುವಟಿಕೆಗಳ ಜೊತೆ ಹೈನುಗಾರಿಕೆ, ಮೀನುಗಾರಿಕೆ, ಕುರಿ-ಕೋಳಿ, ಮೇಕೆ ಸಾಕಾಣಿಕೆಯಂತಹ ಉದ್ದೆಮೆಗಳನ್ನೂ ಆರಂಭಿಸಬೇಕು. ಇದರಿಂದ ಆರ್ಥಿಕ ಸಬಲತೆ ಸಾಧಿಸಲು ಸಾಧ್ಯ ಎಂದು ತಾಲೂಕು ರೈತ ಸಂಘ ಕಾರ್ಯದರ್ಶಿ ಕುಮಾರ್ ಹೇಳಿದರು.

ಗುರುವಾರ ತಾಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೈತ ಕ್ಷೇತ್ರ ಕೃಷಿ ಪಾಠ ಶಾಲೆ ಕಾರ್ಯಕ್ರಮದಲ್ಲಿ ಹೈನುಗಾರಿಕೆ ತರಬೇತಿ ಕಾರ್ಯಗಾರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ರೈತರು ಕೇವಲ ಕೃಷಿ ಚಟುವಟಿಕೆಯನ್ನೇ ಅವಲಂಬಿಸಿದ್ದರೆ ಹೆಚ್ಚಿನ ಲಾಭಗಳು ದೊರೆಯುವುದಿಲ್ಲ. ಇಂತಹ ಹಲವು ವಿಧಗಳ ಕೃಷಿಯಾಧಾರಿತ ಉದ್ಯಮಗಳಿಂದ ಮಾತ್ರ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗಬಲ್ಲದು ಎಂದರು.

ಯೋಜನೆಯ ಕೃಷಿ ಮೇಲ್ವಿಚಾರಕ ಅಜ್ಜಪ್ಪ ಮಾತನಾಡಿ, ರೈತ ಕ್ಷೇತ್ರ ಪಾಠಶಾಲೆ ಕೃಷಿ ಅಧ್ಯಯನ ಪ್ರವಾಸಗಳ ಮೂಲಕ ರೈತರಿಗೆ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ಹೊಸ- ಹೊಸದಾದ ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳ ಬಗ್ಗೆ ಮಾಹಿತಿ ಕೊಡಿಸಲಾಗುತ್ತಿದೆ. ಇದರಿಂದ ರೈತರಲ್ಲಿ ಆರ್ಥಿಕ ಬೆಳವಣಿಗೆಗೆ ತುಂಬಾ ಸಹಕಾರಿಗುತ್ತದೆ ಎಂದು ಹೇಳಿದರು.

ಪಶು ವೈದ್ಯಾಧಿಕಾರಿ ಡಾ. ಶ್ರೀಕಂಠೇಶ್ವರ್ ಮಾತನಾಡಿ, ಹೈನುಗಾರಿಕೆಯಲ್ಲಿ ಜಾನುವಾರುಗಳನ್ನು ಆಯ್ಕೆ ಮಾಡಿಕೊಂಡು ಸ್ವಚ್ಛವಾದ ದನ ಕಟ್ಟುವ ಕೊಠಡಿ ನಿರ್ಮಿಸಬೇಕು. ಹಾಲು ಕರೆಯುವ ಪದ್ಧತಿ, ರೋಗ ನಿರೋಧಕ, ಚಿಕಿತ್ಸೆಗಳ ಬಗ್ಗೆ ಮಾಹಿತಿ ಅರಿಯಬೇಕು. ಹೈನುಗಾರಿಕೆ ಎನ್ನುವುದು ಮಹಿಳಾ ರೈತರಿಗೆ ಉತ್ತಮ ಸ್ವಯಂ ಉದ್ಯೋಗವೂ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ವೀಣಾ, ಸೇವಾ ಪ್ರತಿನಿಧಿಗಳು, ಆಯ್ದ 50ಕ್ಕೂ ಹೆಚ್ಚು ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.

- - - -3ಕೆಸಿಎನ್‌ಜಿ1:

ಹಿರೇಕೋಗಲೂರಿನಲ್ಲಿ ತಾಲೂಕು ರೈತ ಸಂಘ ಕಾರ್ಯದರ್ಶಿ ಕುಮಾರ್ ಹೈನುಗಾರಿಕೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿದರು.