ಸಾರಾಂಶ
ಸಾವಳಗಿ: ಗ್ರಾಮದ ಆರಾಧ್ಯದೇವಿ ಅಂಭಾಭವಾನಿ ದೇವಿ ದೇವಸ್ಥಾನ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಪೊಲೀಸ್ ಠಾಣೆಯ ಪಿಎಸ್‌ಐ ಗಂಗಾಧರ ಪೂಜೇರಿ ಜಾತ್ರೆಗೆ ಚಾಲನೆ ನೀಡಿದರು. ಬೆಳಗ್ಗೆ ರಥಸಪ್ತಮಿ ಹಾಲು ಉಕ್ಕಿಸುವುದು, ಶಾಂತಿಪುಷ್ಠಿ, ಮಹಾಭಿಷೇಕ, ಚಂಡಿಕಾಮಂಡಲ, ಪುಣ್ಯವಾಚನ, ಚಂಡಿಕಾ ಪಾರಾಯಣ, ರಾತ್ರಿ ಸಂಗಮೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಿದವು.
ಕನ್ನಡಪ್ರಭ ವಾರ್ತೆ ಸಾವಳಗಿ
ಗ್ರಾಮದ ಆರಾಧ್ಯದೇವಿ ಅಂಭಾಭವಾನಿ ದೇವಿ ದೇವಸ್ಥಾನ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಪೊಲೀಸ್ ಠಾಣೆಯ ಪಿಎಸ್‌ಐ ಗಂಗಾಧರ ಪೂಜೇರಿ ಜಾತ್ರೆಗೆ ಚಾಲನೆ ನೀಡಿದರು. ಬೆಳಗ್ಗೆ ರಥಸಪ್ತಮಿ ಹಾಲು ಉಕ್ಕಿಸುವುದು, ಶಾಂತಿಪುಷ್ಠಿ, ಮಹಾಭಿಷೇಕ, ಚಂಡಿಕಾಮಂಡಲ, ಪುಣ್ಯವಾಚನ, ಚಂಡಿಕಾ ಪಾರಾಯಣ, ರಾತ್ರಿ ಸಂಗಮೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಿದವು.ಶನಿವಾರ ಮಂಡಲ ಚಂಡಿಯಾಗ, ಪೂರ್ಣಾಹುತಿ, ಮಹಾನೈವೇಧ್ಯ, ಮಹಾಮಂಗಳಾರತಿ, ಕೆಂಚಪ್ಪ ಗೊಂಧಳಿ ಇವರಿಂದ ಗೊಂಧಳಿ ಕಾರ್ಯಕ್ರಮ ಜರುಗಿದವು. ಭಾನುವಾರ ಫಾಲಕಿ ಉತ್ಸವ ಜರುಗಿತು. ಹಲಗಿ ಮೇಳ, ಮಲ್ಲಿಕಾರ್ಜುನ ಝಾಂಜ್ ಪಥಕ್, ಸಂಬಳ ವಾದನ, ಭಜಂತ್ರಿ ಅವರ ಬ್ಯಾಂಜೊ ವಾದ್ಯಗಳು, ಕುಂಭ ಹೊತ್ತು, ಆರತಿ ಹಿಡಿದ 1001 ಮುತ್ತೈದೆಯರು, ಯುವತಿಯರು ಮೆರವಣಿಗೆಗೆ ಮೆರಗು ತಂದು. ಶಿವಾಜಿ ಸರ್ಕಲ್, ಕಲ್ಯಾಣ ಕಟ್ಟಿ, ಬಸ್ಡ್ ಸ್ಟ್ಯಾಂಡ್ ಮಾರ್ಗವಾಗಿ ಮೆರವಣಿಗೆ ಸಾಗಿ ಮರಳಿ ಅಂಭಾಭವಾನಿ ದೇವಸ್ಥಾನ ತಲುಪಿತು. ಮಾರ್ಗ ಮಧ್ಯದಲ್ಲಿ ಕುಂಭ ಹೊತ್ತವರಿಗೆ ಮುಸ್ಲಿಂ ಧರ್ಮದವರು ನೀರಿನ ವ್ಯವಸ್ಥೆ ಮಾಡಿದ್ದರು. ಅಲ್ಲಲ್ಲಿ ಶರಬತ್, ಚಾಕೊಲೆಟ್, ಬಿಸ್ಕತ್ ಕೊಡಲಾಯಿತು.