ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ವತಿಯಿಂದ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಕಿರಿಯರ ಹಾಗೂ ೨೩ ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋಟ್ಸ್ ಕ್ಲಬ್‌ನ ಕ್ರೀಡಾಪಟುಗಳಿಗೆ ೨೨ ಚಿನ್ನ, ೦೮ ಬೆಳ್ಳಿ, ೧೬ ಕಂಚು ಒಟ್ಟು ೪೬ ಪದಕಗಳು, ೨ ನೂತನ ಕೂಟ ದಾಖಲೆ ಹಾಗೂ ೨ ಕ್ರೀಡಾಕೂಟದ ವೈಯಕ್ತಿಕ ಪ್ರಶಸ್ತಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.ಈ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನಿಂದ ಒಟ್ಟು ೮೭ ಕ್ರೀಡಾಪಟುಗಳು ಭಾಗವಹಿಸಿದ್ದರು. ಆಳ್ವಾಸ್ ಸ್ಪೋಟ್ಸ್ ಕ್ಲಬ್ ಕಳೆದ ೧೬ ವರ್ಷಗಳಿಂದ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು ಬಂದಿದೆ. ಸಮಗ್ರ ಚಾಂಪಿಯನ್ಸ್ ಪಟ್ಟ ಪಡೆದ ದಕ್ಷಿಣ ಕನ್ನಡ ಜಿಲ್ಲೆಯು ೪೦೨ ಅಂಕಗಳಿಂದ ಪ್ರಥಮ ಸ್ಥಾನ ಪಡೆದರೆ, ಬೆಂಗಳೂರು ನಗರ ೨೪೨ ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆಯಿತು.
ಆಳ್ವಾಸ್‌ನ ಆಕಾಶ ಹುಕ್ಕೇರಿ (೮೦ ಮೀ ಅಡೆತಡೆ ಓಟ), ನಾಗೇಂದ್ರ ಅಣ್ಣಪ್ಪ ನಾಯ್ಕ (ಚಕ್ರ ಎಸೆತ) ನೂತನ ಕೂಟ ದಾಖಲೆ ನಿರ್ಮಿಸಿದರೆ, ಲೋಹಿತ್ ಗೌಡ, ಸುಶಾನ್ ಬೆಸ್ಟ್ ಅಥ್ಲೀಟ್ ಗೌರವಕ್ಕೆ ಪಾತ್ರರಾಗಿದ್ದಾರೆ.ಫಲಿತಾಂಶ: ೧೪ ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಕೌಶಿಕ್ ತ್ರಯಥ್ಲಾನ್ ‘ಎ’ (ಪ್ರಥಮ), ಲೋಹಿತ್ ಗೌಡ ತ್ರಯಥ್ಲಾನ್ ‘ಬಿ’ (ಪ್ರಥಮ) ಬಹುಮಾನ ಗಳಿಸಿದರು. ೧೬ ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಆಕಾಶ್ ೮೦ ಮೀ. ಹರ್ಡಲ್ಸ್ (ಪ್ರಥಮ), ಗೌತಮ್ ೮೦ ಮೀ. ಹರ್ಡಲ್ಸ್ (ತೃತೀಯ), ಕೃಷ್ಣ ಜಾವೆಲಿನ್ ಎಸೆತ (ತೃತೀಯ), ನಿಖಿಲ್ ಗುಂಡು ಎಸೆತ (ಪ್ರಥಮ), ೧೮ ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಶಿವಾನಂದ ೧೦೦೦ ಮೀ. (ದ್ವಿತೀಯ), ದಯಾನಂದ ೪೦೦ ಮೀ. (ತೃತೀಯ), ನಿತಿನ್ ಚಕ್ರ ಎಸೆತ (ದ್ವಿತೀಯ), ಶೋಭಿತ್ ಗುಂಡು ಎಸೆತ (ತೃತೀಯ), ಹಿತೇಶ್ ೧೦೦ ಮೀ. ಹರ್ಡಲ್ಸ್ (ತೃತೀಯ), ವಿನಾಯಕ ೫ ಕಿ.ಮೀ. ನಡಿಗೆ (ಪ್ರಥಮ), ೨೦ ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಯಶವಂತ ೮೦೦ ಮೀ. (ತೃತೀಯ), ದರ್ಶನ್ ೧೦ ಕಿ.ಮೀ. ನಡಿಗೆ (ಪ್ರಥಮ), ಶ್ರೀಕಾಂತ್ ಚಕ್ರ ಎಸೆತ (ಪ್ರಥಮ), ಗಣೇಶ್ ಗುಂಡು ಎಸೆತ (ಪ್ರಥಮ), ತೇಜಲ್ ೧೧೦ ಮೀ. ಹರ್ಡಲ್ಸ್ (ಪ್ರಥಮ), ವೀರೇಶ್ ಜಾವಲಿನ್ ಎಸೆತ (ತೃತೀಯ), ಸುಶಾನ್ ಉದ್ದ ಜಿಗಿತ (ಪ್ರಥಮ), ಸನತ್ ಡೆಕತ್ಲಾನ್ (ಪ್ರಥಮ)೨೩ ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ: ನಾಗೇಂದ್ರ ಚಕ್ರ ಎಸೆತ (ಪ್ರಥಮ), ಮೋಹನ್ ಡೆಕತ್ಲಾನ್ (ದ್ವಿತೀಯ)೧೬ ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ : ರಕ್ಷಿತಾ ಎತ್ತರ ಜಿಗಿತ (ಪ್ರಥಮ)೧೮ ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ : ಚೋಡಮ್ಮ ೧೦೦ ಮೀ .ಹರ್ಡಲ್ಸ್ (ತೃತೀಯ), ಚರಿಷ್ಮ ೧೦೦೦ ಮೀ. (ತೃತೀಯ), ವೃತಾ ಹೆಗ್ಡೆ ಗುಂಡು ಎಸೆತ (ತೃತೀಯ) ವಿಸ್ಮಿತಾ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾರೆ.
೨೦ ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ರೂಪಾಶ್ರೀ ೩೦೦೦ ಮೀ. (ದ್ವಿತೀಯ), ೧೫೦೦ ಮೀ. (ದ್ವಿತೀಯ), ಪ್ರಣಮ್ಯ ೩೦೦೦ ಮೀ. (ತೃತೀಯ), ೫೦೦೦ ಮೀ. (ತೃತೀಯ), ಐಶ್ವರ್ಯ ಚಕ್ರ ಎಸೆತ (ಪ್ರಥಮ), ಗುಂಡು ಎಸೆತ (ತೃತೀಯ), ಶಬರಿ ೧೦೦ ಮೀ. ಹರ್ಡಲ್ಸ್ (ದ್ವಿತೀಯ), ೪೦೦ ಮೀ. ಹರ್ಡಲ್ಸ್ (ತೃತೀಯ), ಅಂಬಿಕಾ ೧೦೦೦ ಮೀ. ನಡಿಗೆ (ಪ್ರಥಮ), ಸ್ವಪ್ನಾ ೧೦೦ ಮೀ. ನಡಿಗೆ (ದ್ವಿತೀಯ) ಸ್ಥಾನಗಳಿಸಿದ್ದಾರೆ.೨೩ ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ದೀಪಾಶ್ರೀ ೮೦೦ ಮೀ. (ಪ್ರಥಮ), ರೇಖಾ ೮೦೦ ಮೀ. (ದ್ವಿತೀಯ), ೧೫೦೦ ಮೀ. (ಪ್ರಥಮ), ಸುಷ್ಮಾ ಚಕ್ರ ಎಸೆತ (ಪ್ರಥಮ), ಸಿಂಚನಾ ಎಂ.ಎಸ್. ಚಕ್ರ ಎಸೆತ (ದ್ವಿತೀಯ), ಜಾವೆಲಿನ್ ಎಸೆತ (ಪ್ರಥಮ), ದೀಕ್ಷಿತಾ ೧೦೦ ಮೀ. ಹರ್ಡಲ್ಸ್ (ಪ್ರಥಮ), ೪೦೦ ಮೀ. ಹರ್ಡಲ್ಸ್ (ಪ್ರಥಮ), ಪ್ರಿಯಾಂಕ ಉದ್ದ ಜಿಗಿತ (ಪ್ರಥಮ), ಪ್ರೀತಿ ಚಕ್ರ ಎಸೆತ (ತೃತೀಯ) ಬಹುಮಾನ ಗಳಿಸಿದರು.
ನೂತನ ಕೂಟ ದಾಖಲೆ: ೧೬ ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಆಕಾಶ್ ೮೦ ಮೀ. ಹರ್ಡಲ್ಸ್‌ನಲ್ಲಿ ಹಾಗೂ ೨೩ ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ನಾಗೇಂದ್ರ ಚಕ್ರ ಎಸೆತದಲ್ಲಿ ನೂತನ ಕೂಟ ದಾಖಲೆ ಮಾಡಿದ್ದಾರೆ.ವೈಯಕ್ತಿಕ ಪ್ರಶಸ್ತಿ: ೧೪ ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಲೋಹಿತ್ ಗೌಡ ಹಾಗೂ ೨೦ ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಸುಶಾನ್ ವೈಯಕ್ತಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.