- ಸ್ಮಾರ್ಟ್ ಸಿಟಿ, ಐಟಿ ಪಾರ್ಕ್‌, ರೈಲ್ವೆ-ಹೆದ್ದಾರಿ, ಕುಡಿವ ನೀರು ಮುಂತಾದ ಯೋಜನೆಗಳಿಗೆ ಅನುದಾನ ನೀಡಿ: ರೋಹಿತ್‌ ಜೈನ್‌

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.6ರಂದು ಮಂಡಿಸಲಿರುವ ರಾಜ್ಯ ಬಜೆಟ್ ಮೇಲೆ ರಾಜ್ಯದ ಜನರು ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅಂತೆಯೇ ನಮ್ಮ ದಾವಣಗೆರೆ ಜಿಲ್ಲೆಯ ಅನೇಕ ಬೇಡಿಕೆಗಳನ್ನೂ ಸರ್ಕಾರ ಈ ಬಾರಿ ಈಡೇರಿಸುವುದೇ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಸರ್ಕಾರ ಎಂದು ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್.ಜೈನ್ ತಿಳಿಸಿದ್ದಾರೆ.

1. ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ಚುರುಕಿಗೆ ₹300 ಕೋಟಿ ವಿಶೇಷ ಅನುದಾನ ನೀಡಬೇಕು.


2. ದಾವಣಗೆರೆ ಜಿಲ್ಲೆ ಐಟಿ ಪಾರ್ಕ್ (ಹೊಸ ಜಾಗದಲ್ಲಿ ಹೊಸ ಐಟಿ ಪಾರ್ಕ್ ಸ್ಥಾಪನೆ) ವಿಶೇಷ ₹100 ಕೋಟಿ ಅನುದಾನ ಬೇಕು ಎಂಬುವುದು ಜನರ ಬಹುದಿನದ ಬೇಡಿಕೆ.

3. ಸೂಳೆಕೆರೆ/ಶಾಂತಿಸಾಗರ, ಕೊಂಡಜ್ಜಿ, ಹರಿಹರ, ಅನಗೋಡು ಪಾರ್ಕ್ ಮುಂತಾದ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಅಭಿವೃದ್ಧಿ ಯೋಜನೆ. 4. ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿಗೆ ಬೇಕಾದ ಯೋಜನೆಗಳು, ಜಿಲ್ಲೆಯಲ್ಲಿ ಜವಳಿ ಪಾರ್ಕ್ ನಿರ್ಮಾಣ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಬಡಾವಣೆ ನಿರ್ಮಾಣ, ಬೃಹತ್ ಕೈಗಾರಿಕೆ ಘಟಕಗಳ ಆರಂಭಕ್ಕೆ "ಲ್ಯಾಂಡ್ ಬ್ಯಾಂಕ್ ".

5. ರೈಲ್ವೆ, ಹೆದ್ದಾರಿ ಯೋಜನೆಗಳಿಗೆ ₹3,000 ಕೋಟಿ (ಸ್ಪೆಷಲ್ ಪ್ಯಾಕೇಜ್) ಹಣ ಬಿಡುಗಡೆ ಮಾಡಬೇಕು.

6. ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಜವಳಿ ಫ್ಯಾಕ್ಟರಿ, ಜೊತೆ ಇತರೆ ಕೈಗಾರಿಕೆಗಳು, ಜಿಲ್ಲೆಯಲ್ಲಿ ಎಸ್‌ಇಝಡ್, ಕೈಗಾರಿಕಾ ಕಾರಿಡಾರ್ ಸ್ಥಾಪನೆ ಮಾಡಬೇಕು.

7. ದಶಕದಿಂದ ಬೇಡಿಕೆ ಆಗಿರುವ ದಾವಣಗೆರೆ ವಿಮಾನ ನಿಲ್ದಾಣಕ್ಕೆ ಮಂಜೂರು ಹಾಗು ಅನುದಾನ (ಉಡಾನ್ ಯೋಜನೆಯಡಿ ದಾವಣಗೆರೆ ವಿಮಾನ ನಿಲ್ದಾಣ ನಿರ್ಮಾಣ), ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಯಾಗಬೇಕಿದೆ, ಪಾಳುಬಿದ್ದಿರುವ ಕೈಗಾರಿಕಾ ಪ್ರದೇಶಕ್ಕೆ ಬೃಹತ್ ಕೈಗಾರಿಕೆಗಳನ್ನು ಸೆಳೆಯಬೇಕು.

8. ಭದ್ರಾ ನದಿಯ ಹೂಳು ತೆಗೆದರೆ ದಾವಣಗೆರೆ ಭಾಗದ ಎಲ್ಲ ರೈತರಿಗೂ ಅನುಕೂಲವಾಗಲಿದೆ.

9. ದಾವಣಗೆರೆ- ಚಿತ್ರದುರ್ಗ- ತುಮಕೂರು ನೇರ ರೈಲು ಮಾರ್ಗದ (ಸಿರಾ, ಹಿರಿಯೂರು ಭಾಗ) ಭೂ ಖರೀದಿ ಕಾರ್ಯವನ್ನು ಚುರುಕುಗೊಳಿಸಬೇಕು.

10. ಸ್ಥಳೀಯ ಆರ್ಥಿಕ ಅಭಿವೃದ್ಧಿ, ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಒತ್ತು ನೀಡಲಿ.

11. ದಾವಣಗೆರೆ ಹೊರ ವರ್ತುಲ ರಸ್ತೆಗೆ ₹200 ಕೋಟಿ ಅನುದಾನ.

12. ದಾವಣಗೆರೆಯ ಆನಗೋಡು, ಬಾತಿಯಲ್ಲಿ ಸಾಲುಮರದ ತಿಮಕ್ಕ ಉದ್ಯಾನವನ ನಿರ್ಮಾಣ ಮಾಡಬೇಕು.

13. ದಾವಣಗೆರೆ ಜಿಲ್ಲೆಯ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ, ಕೆರೆ ತುಂಬಿಸುವ ಯೋಜನೆ ಅನುಷ್ಠಾನವಾಗಬೇಕು.

14. ದಾವಣಗೆರೆ ಜಿಲ್ಲೆಯ ಕೃಷಿ ಉತ್ಪಾದನೆ ಸಂರಕ್ಷಣೆಗಾಗಿ ಫುಡ್ ಪಾರ್ಕ್ ಆರಂಭಿಸಬೇಕು.

15. ದಾವಣಗೆರೆ ಟ್ರಾಫಿಕ್ ದಟ್ಟಣೆ ತಡೆಗಟ್ಟುವ ನಿಟ್ಟಿನಲ್ಲಿ ಟ್ರಾಕ್ ಅಂಡ್ ಬಸ್ ಟರ್ಮಿನಲ್ ನಿರ್ಮಾಣ ಮಾಡಬೇಕು.

16. ದಾವಣಗೆರೆ ಜಿಲ್ಲೆಯಲ್ಲಿ ಹೊಸ ಸುಸಜ್ಜಿತ ಅಂತರ ರಾಷ್ಟ್ರೀಯ ಕ್ರೀಡಾಂಗಣ ಮತ್ತು ಕ್ರೀಡಾ ಹಾಸ್ಟೆಲ್‌ಗಳನ್ನು ಸ್ಥಾಪಿಸಬೇಕು.

ಇವೆಲ್ಲ ದಾವಣಗೆರೆ ಜಿಲ್ಲೆಯ ಜನತೆ ನಿರೀಕ್ಷೆಗಳಾಗಿದ್ದು, ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕಾಂಗ್ರೆಸ್‌ ಸರ್ಕಾರದ ಸಿಎಂ ಸಿದ್ದರಾಮಯ್ಯ ಅವರು ಸ್ಪಂದಿಸಬೇಕು ಎಂದು ರೋಹಿತ್‌ ಎಸ್‌. ಜೈನ್‌ ತಿಳಿಸಿದ್ದಾರೆ.

- - -

-1ಕೆಡಿವಿಜಿ32: ರೋಹಿತ್ ಎಸ್. ಜೈನ್.