ಸಾರಾಂಶ
ಗಗನ ಕುಸುಮವಾದ ಕೆಎಂಎಫ್ ಘಟಕ । ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ । ಧೂಳು ಕುಡಿಯುತ್ತಿದ್ದ ಪ್ರಸ್ತಾವನೆಗೆ ಟಾನಿಕ್,
ಆರ್.ತಾರಾನಾಥ್ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಕಾಫಿ ನಾಡನ್ನು ಕಡೆಗಣಿಸಲಾಗುತ್ತಿದೆ. ನೆರೆಯ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ನಮ್ಮನ್ನು ಮಲತಾಯಿ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ. - ರಾಜ್ಯ ಸರ್ಕಾರದ ಪ್ರತಿ ಬಜೆಟ್‌ನಲ್ಲೂ ಈ ರೀತಿಯ ಕೂಗು ಕಾಫಿಯ ನಾಡಿನಲ್ಲಿ ಕೇಳಿ ಬರುತ್ತಿದೆ. ಈ ಬಾರಿಯ 2024-25 ನೇ ಸಾಲಿನ ಬಜೆಟ್‌ನಲ್ಲೂ ಇದೇ ಸಂಪ್ರದಾಯ ಮುಂದುವರಿದಿದ್ದು, ರಾಜಕೀಯ ಪಕ್ಷದ ಚೌಕಟ್ಟಿನ ಹೊರಗೆ ಬಂದು ಬಹಳಷ್ಟು ಮಂದಿ ಈ ಮಾತನ್ನು ಆಡುತ್ತಾರೆ. ಜಿಲ್ಲೆಯ ನಾಲ್ಕು ತಾಲೂಕುಗಳ ರೈತರು ಹೈನುಗಾರಿಕೆ ಅವಲಂಬಿಸಿದ್ದಾರೆ. ಚಿಕ್ಕಮಗಳೂರಿಗೆ ಪ್ರತ್ಯೇಕ ಹಾಲು ಒಕ್ಕೂಟ ಮಂಜೂರು ಮಾಡಿದ್ದರೆ ಇಲ್ಲಿನ ರೈತರಿಗೆ ಹೆಚ್ಚಿನ ಅನುಕೂಲವಾಗುವ ಜತೆಗೆ ಹೈನುಗಾರಿಕೆಗೂ ಉತ್ತೇಜನ ನೀಡಿದಂತಾ ಗುತ್ತಿತ್ತು. ಪ್ರತಿ ವರ್ಷ ಬರದಿಂದ ತತ್ತರಿಸುವ ರೈತರಿಗೆ ಆರ್ಥಿಕವಾಗಿ ಸಹಾಯವಾಗುತ್ತಿತ್ತು. ಆದರೆ, ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಚಿಸಿದ್ದರೆ ಬಜೆಟ್‌ನಲ್ಲಿ ಕೆಎಂಎಫ್ ಘೋಷಣೆ ಮಾಡುತ್ತಿತ್ತು. ಹಿಂದಿನ ಬಿಜೆಪಿ ಸರ್ಕಾರ ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ಘೋಷಣೆ ಮಾಡಿತ್ತು. ಆ ನಿಟ್ಟಿನಲ್ಲಿ ಇನ್ನುಳಿದ ಪ್ರಕ್ರಿಯೆ ನಡೆಸುವ ಬಗ್ಗೆ ಯಾವುದೇ ಪ್ರಸ್ತಾಪ ಬಜೆಟ್‌ನಲ್ಲಿ ಇಲ್ಲ. ತುಂಗಾ, ಭದ್ರಾ, ಹೇಮಾವತಿ, ಯಗಚಿ, ನೇತ್ರಾವತಿ ನದಿಗಳಿಗೆ ಚಿಕ್ಕಮಗಳೂರು ತವರೂರು ಆಗಿದ್ದರೂ ಕೂಡ ಇಲ್ಲಿನ ಬಹಳಷ್ಟು ಪ್ರದೇಶ ನೀರಾವರಿಯಿಂದ ವಂಚಿತವಾಗಿದೆ. ಕೆಲವು ಏತಾ ನೀರಾವರಿ ಯೋಜನೆಗಳು ಹಣಕಾಸಿನ ನೆರವಿಲ್ಲದೆ ಮೂಲೆ ಗುಂಪಾಗಿವೆ. ಬಜೆಟ್‌ನಲ್ಲಿ ಹಣ ಮೀಸಲಿಡುವ ಮೂಲಕ ಅವುಗಳಿಗೆ ಸರ್ಕಾರ ಜೀವ ತುಂಬುತ್ತದೆ ಎಂಬ ರೈತರ ನಿರೀಕ್ಷೆ ಸುಳ್ಳಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಐದು ಮಂದಿ ಶಾಸಕರನ್ನು ಗೆಲ್ಲಿಸಿದ ಈ ಜಿಲ್ಲೆಗೆ ವಿಶೇಷವಾದ ಕೊಡುಗೆ ಕೊಟ್ಟಿಲ್ಲ ಎಂಬ ನಿರಾಶೆ ಸಾರ್ವಜನಿಕರಲ್ಲಿ ಈ ಬಜೆಟ್ ಬಿತ್ತಿದೆ. ಬಜೆಟ್ ಪುಸ್ತಕದ ಒಂದೊಂದು ಪುಟವನ್ನು ತಿರುವಿ ಹಾಕಿದಾಗ ಎಲ್ಲೊ ಒಂದೆರಡು ಕಡೆಗಳಲ್ಲಿ ಮಾತ್ರ ಚಿಕ್ಕಮಗಳೂರು ಎಂಬ ಹೆಸರು ಗೋಚರವಾಗುತ್ತದೆ. ಹೊಸದಾಗಿ ಯಾವುದೇ ಯೋಜನೆ ಕೊಡದೆ ಹೋದರೂ ಹಲವು ವರ್ಷಗಳಿಂದ ಧೂಳು ಕುಡಿಯುತ್ತಿದ್ದ ಕಡತಗಳಿಗೆ ಮರು ಜೀವ ನೀಡುವ ಮೂಲಕ ಯೋಜನೆಗಳನ್ನು ಸಾಕಾರಗೊಳಿಸಲು ಈ ಬಜೆಟ್‌ನಲ್ಲಿ ಘೋಷಣೆ ಮಾಡಿದೆ.ಘೋಷಣೆ- 1: ಸ್ಪೈಸ್ ಪಾರ್ಕ್‌ನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವುದು. ಆ ಮೂಲಕ ಸಾಂಬಾರು ಪದಾರ್ಥ ಬೆಳೆ ಬೆಳೆಯುವ ರೈತರಿಗೆ ಉತ್ತೇಜನ ನೀಡುವುದು. - ಚಿಕ್ಕಮಗಳೂರಿನಲ್ಲಿ ಸ್ಪೈಸ್ ಪಾರ್ಕ್ ನಿರ್ಮಾಣಕ್ಕೆ ಕಳೆದ ನಾಲ್ಕು ವರ್ಷಗಳ ಹಿಂದೆಯೇ ಇಲ್ಲಿನ ಗೌಡನಹಳ್ಳಿ ಬಳಿ 10 ಎಕರೆ ಜಾಗವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿರುವ ಜತೆಗೆ 10 ಕೋಟಿ ರು. ಸಹ ಬಿಡುಗಡೆ ಮಾಡಿದೆ. ಆದರೆ, ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನವನ್ನು ಈವರೆಗೆ ಕೊಟ್ಟಿಲ್ಲ. ಈಗ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದರಿಂದ ಸ್ಪೈಸ್ ಪಾರ್ಕ್ ನಿರ್ಮಾಣಕ್ಕೆ ಜೀವ ಬರಲಿದೆ ಎಂಬ ಅಭಿಪ್ರಾಯ ಕಾಫಿ ಬೆಳೆಗಾರರದ್ದು.
ಘೋಷಣೆ- 2:ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಐದು ಜಿಲ್ಲಾ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ಸಹ ಭಾಗಿತ್ವದೊಂದಿಗೆ ವಿಜ್ಞಾನ ಕೇಂದ್ರ/ ತಾರಾಲಯಗಳನ್ನು ಹೊಸದಾಗಿ ಸ್ಥಾಪಿಸುವುದು. - ಚಿಕ್ಕಮಗಳೂರಿನಲ್ಲಿ ತಾರಾಲಯ ಸ್ಥಾಪನೆ ಮಾಡಲು ನಗರದ ಹೊರ ವಲಯದಲ್ಲಿರುವ ಕದ್ರಿಮಿದ್ರಿ ಗ್ರಾಮದ ಸರ್ವೆ ನಂಬರ್‌ನಲ್ಲಿ 2008-09 ರಲ್ಲಿಯೇ 10 ಎಕರೆ ಜಾಗ ಗುರುತು ಮಾಡಲಾಗಿದೆ. ಇನ್ನುಳಿದ ಪ್ರಕ್ರಿಯೆ ಆರಂಭವಾಗಿರಲಿಲ್ಲ. ಈಗ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರಿಂದ ಕೇಂದ್ರದ ಸ್ಥಾಪನೆ ಪ್ರಕ್ರಿಯೆ ಚುರುಕುಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಘೋಷಣೆ- 3:
ಮೊದಲ ಹಂತದಲ್ಲಿ ಚಿಕ್ಕಮಗಳೂರು ಸೇರಿದಂತೆ ಕೆಲವು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ (ಐಪಿಎಚ್‌ಎಲ್) ಸ್ಥಾಪಿಸುವ ಮೂಲಕ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಉತ್ತಮ ಪ್ರಯೋಗಾಲಯ ಸ್ಥಾಪನೆ.- ಚಿಕ್ಕಮಗಳೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಲಿ ಪ್ರಯೋಗಾಲಯ ಇದೆ. ಆದರೆ, ಕೆಲವು ಸೋಂಕಿನ ಪರೀಕ್ಷೆ ಗಾಗಿ ಶಿವಮೊಗ್ಗ, ಬೆಂಗಳೂರು ಹಾಗೂ ಪುಣೆಯನ್ನು ಅವಲಂಬಿಸಲಾಗಿದೆ. ಈ ಪ್ರಯೋಗಾಲಯವನ್ನು ಮೇಲ್ದರ್ಜೆಗೆ ಏರಿಸುವುದರಿಂದ ಸ್ಥಳೀಯವಾಗಿಯೇ ತಕ್ಷಣಕ್ಕೆ ಪರೀಕ್ಷಾ ವರದಿ ಸಿಗಲಿದೆ. ಇಷ್ಟು ಮಾತ್ರವಲ್ಲ ಸೋಂಕಿತರಿಗೆ ಕೂಡಲೇ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ----ಬಜೆಟ್ ಅಭಿಪ್ರಾಯಗಳು ----ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 2024-25 ನೇ ಸಾಲಿನ ಬಜೆಟ್ ಕುರಿತು ಜಿಲ್ಲೆಯ ವಿವಿಧ ಕ್ಷೇತ್ರದ ಗಣ್ಯರು ವಿಭಿನ್ನವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ------
ಮಕ್ಕಳ ಶೈಕ್ಷಣಿಕ ಬೆಳವಣಿಗೆ ದೃಷ್ಠಿಯಿಂದ ಚಿಕ್ಕಮಗಳೂರಿನಲ್ಲಿ ತಾರಾಲಯವನ್ನು ತೆರೆಯಬೇಕೆಂಬುದು ನಮ್ಮ ಹಲವು ವರ್ಷದ ಅಭಿಲಾಸೆಯಾಗಿತ್ತು. ಈ ಸಂಬಂಧ ರಾಜ್ಯ ಸರ್ಕಾರದ ಗಮನವೂ ಕೂಡ ಸೆಳೆಯಲಾಗಿತ್ತು. ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಹೊಸದಾಗಿ ತಾರಾಲಯ ಸ್ಥಾಪನೆಗೆ ಘೋಷಣೆ ಮಾಡಿರುವುದು ಅಭಿನಂದನೀಯ.ಎ.ಎನ್. ಮಹೇಶ್ ಗೌರವ ಅಧ್ಯಕ್ಷರು,
ಜಿಲ್ಲಾ ವಿಜ್ಞಾನ ಕೇಂದ್ರ ಪೋಟೋ ಫೈಲ್ ನೇಮ್ 16 ಕೆಸಿಕೆಎಂ 1------ಲವಂಗ, ಶುಂಠಿ, ಅರಶಿಣ, ಮೆಣಸು ಸೇರಿದಂತೆ ಸುಮಾರು 32 ಪದಾರ್ಥಗಳು ಸಾಂಬಾರ ಪದಾರ್ಥ ವ್ಯಾಪ್ತಿಗೆ ಬರುತ್ತವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಪೈಸ್ ಪಾರ್ಕ್ ನಿರ್ಮಾಣ ಮಾಡಲು ಜಾಗ ಗುರುತು ಮಾಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯಲು 2016 ರಲ್ಲಿ ರಾಜ್ಯಮಟ್ಟದ ಸಮಾವೇಶವನ್ನೂ ನಡೆಸಲಾಗಿತ್ತು. ಇದೀಗ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದು ಸ್ವಾಗತಾರ್ಹ.
- ಕೆಂಜಿಗೆ ಕೇಶವ ಅಧ್ಯಕ್ಷರು, ಬ್ಲಾಕ್ ಗೋಲ್ಡ್ ಲೀಗ್ ಪೋಟೋ ಫೈಲ್ ನೇಮ್ 16 ಕೆಸಿಕೆಎಂ 2----